Home_Page_Advt
Home_Page_Advt
Home_Page_Advt
Breaking News

ಹಟ್ಟಿ ರಚನೆ ಅನುದಾನ ರೂ.75 ಸಾವಿರಕ್ಕೆ ಹೆಚ್ಚಿಸಿ – ರಾಮಕುಂಜ ಗ್ರಾ.ಪಂ. ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಆಗ್ರಹ


ರಾಮಕುಂಜ: ರಾಮಕುಂಜ ಗ್ರಾ.ಪಂ.ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಆ.14ರಂದು ಬೆಳಿಗ್ಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಹಟ್ಟಿ ರಚನೆ ಅನುದಾನ ಹೆಚ್ಚಿಸಿ:
ಉದ್ಯೋಗ ಖಾತ್ರಿ ಯೋಜನೆಯಡಿ ಹಟ್ಟಿ ರಚನೆಗೆ ಸಿಗುವ ಅನುದಾನ ಬಹಳಷ್ಟು ಕಡಿಮೆ ಇದೆ. ಆದ್ದರಿಂದ ಕನಿಷ್ಟ ೭೫ ಸಾವಿರ ರೂ.ಅನುದಾನ ನೀಡಬೇಕೆಂದು ಬಿ.ಕೆ.ಅಬ್ಬಾಸ್ ಅರಫಾ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ಮನೋಜ್‌ರವರು ಹಟ್ಟಿ ರಚನೆಗೆ ಎಸ್‌ಸಿ.ಎಸ್‌ಟಿ ಫಲಾನುಭವಿಗಳಿಗೆ ೪೩ ಸಾವಿರ ರೂ.,ಹಾಗೂ ಇತರೇ ಫಲಾನುಭವಿಗಳಿಗೆ ೧೯,೬೦೦ ರೂ.ಅನುದಾನ ನೀಡಲು ಸರಕಾರದ ಆದೇಶವಿದೆ ಎಂದರು. ಬಳಿಕ ಹೆಚ್ಚಿನ ಅನುದಾನ ಕೋರಿ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಫಲಾನುಭವಿಗಳಾದ ಮೋನಪ್ಪ ಕುಲಾಲ್,ಪ್ರಭಾಕರ ಮತ್ತಿತರರು ಮಾಹಿತಿ ಕೇಳಿದರು.

ನೋಡೆಲ್ ಅಧಿಕಾರಿಯಾಗಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‌ಕುಮಾರ್‌ರವರು ಮಾತನಾಡಿ, ರಾಮಕುಂಜ ಗ್ರಾ.ಪಂ.ನಲ್ಲಿ ಬಹಳಷ್ಟು ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿ ನಡೆದಿದೆ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಕಾಮಗಾರಿಗಳು ಪಾರದರ್ಶಕವಾಗಿಯೇ ನಡೆಯುತ್ತಿದೆ. ಫಲಾನುಭವಿಗಳು ಯೋಜನೆಯ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಅನುಷ್ಠಾನಗೊಳಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಭಾಜನರಾಗಬೇಕೆಂದು ಹೇಳಿದರು.

ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ. ಮಾತನಾಡಿ, ಸರಕಾರದ ಯೋಜನೆ ಯಶಸ್ವಿಯಾಗಿ ಕಾರ್‍ಯಗತಗೊಳ್ಳಲು ಗ್ರಾಮಸ್ಥರೇ ಪ್ರಮುಖ ಕಾರಣ. ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಅನುಷ್ಠಾನಗೊಳಿಸಬೇಕು. ಗ್ರಾ.ಪಂ.ಸದಸ್ಯರೂ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕೆಂದು ಹೇಳಿದರು. ನರೇಗಾ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ್‌ರವರು ಉದ್ಯೋಗ ಖಾತ್ರಿ ಯೋಜನೆಯ ನಿಯಮ, ಉದ್ದೇಶಗಳನ್ನು ತಿಳಿಸಿ, ಯೋಜನೆಯಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕೆಲಸ ನಿರ್ವಹಿಸಲು ಸಾಧ್ಯವಿದೆ. ನಿಯಮಾನುಸಾರ ಕೆಲಸ ನಿರ್ವಹಿಸಬೇಕೆಂದು ಹೇಳಿದರು.

ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡ, ಗ್ರಾ.ಪಂ.ಉಪಾಧ್ಯಕ್ಷೆ ಜಯಂತಿ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜೆರಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ಕಾರ್ಯದರ್ಶಿ ಲಲಿತಾ ಜಿ.ಡಿ.ವಂದಿಸಿದರು. ಸದಸ್ಯರುಗಳಾದ ರವಿಕೆದಿಲಾಯ, ಅವಿನಾಶ್, ಸುಶೀಲ ವಳೆಂಜ, ಪ್ರೇಮಲತಾ, ಝೋಹರಾ ನಝೀರ್, ಪಿ.ಟಿ.ಲೀಲಾವತಿ, ಶೀಲಾವತಿ ಹಾಗೂ ಫಲಾನುಭವಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

೩೧.೩೯ ಲಕ್ಷ ರೂ.ಖರ್ಚು
೨೦೧೮ರ ಅ.೧ರಿಂದ ೨೦೧೯ರ ಮಾ.೩೧ರ ತನಕದ ಪ್ರಥಮ ಹಂತದಲ್ಲಿ ರಾಮಕುಂಜ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು ೧೨೨ ಕಾಮಗಾರಿಗಳು ನಡೆದಿದ್ದು ೩೧,೩೯,೩೧೩ ರೂ.ಖರ್ಚು ಮಾಡಲಾಗಿದೆ. ಈ ಪೈಕಿ ೧೮,೩೩,೧೩೩ ರೂ.ಕೂಲಿಮೊತ್ತ ಹಾಗೂ ೧೩,೦೬,೧೮೦ ರೂ.,ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ೨೧೧ ಕುಟುಂಬಗಳ ೩೮೨ ಮಂದಿ ಕೆಲಸ ಮಾಡಿದ್ದು ೭೩೬೬ ಮಾನವ ದಿನ ಸೃಜನೆಯಾಗಿದೆ. ೬೭ ಮನೆಕಾಮಗಾರಿ, ೮ ದನದ ಹಟ್ಟಿ ರಚನೆ, ೨೯ ಅಡಿಕೆ ಕೃಷಿ, ೩ ಕಾಳುಮೆಣಸು ಕೃಷಿ, ತಲಾ ೨ ರಸ್ತೆ ಕಾಂಕ್ರಿಟೀಕರಣ ಹಾಗೂ ತಲಾ ೧ ಕಾಲುಸಂಕ ರಚನೆ, ತೆರೆದ ಬಾವಿ ರಚನೆ, ಅಂಗನವಾಡಿ ಕಟ್ಟಡ ರಚನೆ, ಶಾಲಾ ಕೈತೋಟ ರಚನೆ, ಸ್ಮಶಾನ ಕಟ್ಟಡ ರಚನೆ, ಕೆರೆ ಅಭಿವೃದ್ಧಿ, ಕೆರೆಗೆ ತಡೆಗೋಡೆ ರಚನೆ, ಕೊಳವೆ ಬಾವಿಗೆ ಜಲಮರುಪೂರಣ ಘಟಕ ರಚನೆ, ಕಿಂಡಿ ಅಣೆಕಟ್ಟು ರಚನೆ, ಸಾರ್ವಜನಿಕ ಕೊಳವೆ ಬಾವಿಗೆ ಜಲಮರುಪೂರಣ ಘಟಕ ರಚನೆ, ಕೋಳಿಶೆಡ್ಡು ರಚನೆ ಮಾಡಲಾಗಿದೆ ಎಂದು ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ್‌ರವರು ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.