Home_Page_Advt
Home_Page_Advt
Home_Page_Advt
Breaking News

ಸವಣೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ


ಜಗತ್ತಿಗೆ ಹಿಂದೂಗಳು ಏನು ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ- ಗಿರಿಶಂಕರ್ ಸುಲಾಯ
ಪುತ್ತೂರು: ಹಿಂದೂಗಳು ಏನು ಎಂಬುದನ್ನು ಜಗತ್ತಿಗೆ ಈ ದೇಶದ ಪ್ರಧಾನಿ ನರೇಂದ್ರ ಮೋದಿರವರು ತೋರಿಸಿಕೊಟ್ಟಿದ್ದಾರೆ ಎಂದು ಸವಣೂರು ಹಿಂದೂ ಜಾಗರಣ ವೇದಿಕೆ ಹಿಂದೂ ಯುವ ಶಕ್ತಿ ಘಟಕದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯರವರು ಹೇಳಿದರು.

ಅ. 13 ರಂದು ಸವಣೂರು ಹಿಂದೂ ಜಾಗರಣ ವೇದಿಕೆ ಹಿಂದೂ ಯುವಶಕ್ತಿ ಘಟಕದ ಆಶ್ರಯದಲ್ಲಿ ಜರಗಿದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತ ದೇಶಕ್ಕಾಗಿ ನನ್ನ ಬದುಕು ಎಂಬ ಧ್ಯೇಯದಡಿ ನಾವೆಲ್ಲ ರಾಷ್ಟ್ರದ ಹಿತಕ್ಕಾಗಿ ಕೆಲಸವನ್ನು ಮಾಡೋಣ ಎಂದರು.

ಸ್ವಾರ್ಥ ರಾಜಕಾರಣಿಗಳಿಂದ ದೇಶ ದುರ್ಬಲ- ಪ್ರಕಾಶ್‌ಚಂದ್ರ ರೈ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಗರ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್‌ಚಂದ್ರ ರೈ ಮುಗೇರುಗುತ್ತುರವರು ಮಾತನಾಡಿ ಸ್ವಾರ್ಥ ರಾಜಕಾರಣಿಗಳಿಂದ ನಮ್ಮ ದೇಶ ದುರ್ಬಲಗೊಂಡಿದೆ ಎಂದು ಹೇಳಿ, ಅಖಂಡ ಭಾರತದ ಸಂಕಲ್ಪ ನಮ್ಮ ಮನಸಿನಲ್ಲಿ ಜಾಗೃತವಾಗಬೇಕು ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್‍ಯದರ್ಶಿ ಚಿನ್ಮಯ್ ರೈ ಹಾಗೂ ಪಂಜಿನ ಮೆರವಣಿಗೆ ಉದ್ಘಾಟನೆಗೈದ ನಿವೃತ್ತ ಸೈನಿಕ ಗಣಪಯ್ಯ ಕುಕ್ಕಾಜೆರವರು ಸಂದಬೋಚಿತವಾಗಿ ಮಾತನಾಡಿದರು.

ನಿವೃತ್ತ ಸೈನಿಕ ರವಿಚಂದ್ರ ಮಾರ್ಕಾಜೆರವರು ದೀಪ ಬೆಳಗಿಸಿ ಕಾರ್‍ಯಕ್ರಮ ಉದ್ಘಾಟಿಸಿದರು. ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರುರವರುಗಳು ಉಪಸ್ಥಿತರಿದ್ದರು.

ಹಿಂದೂ ಜಾಗರಣ ವೇದಿಕೆ ಸವಣೂರು ಹಿಂದೂ ಯುವ ಶಕ್ತಿ ಘಟಕದ ಅಧ್ಯಕ್ಷ ಜನಾರ್ಧನ ಪಂಜ ಸ್ವಾಗತಿಸಿ, ಡಿ.ಎಲ್.ಗಾಂಭೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲಾ ನೆಕ್ರಾಜೆ ವೈಯುಕ್ತಿಕ ಗೀತೆ ಹಾಡಿದರು. ಶೀನಪ್ಪ ಶೆಟ್ಟಿ ನೆಕ್ರಾಜೆರವರು ವಂದೇ ಮಾತರಂ ಹಾಡಿದರು. ಜಗದೀಶ್ ಕೆಡೆಂಜಿ ವಂದಿಸಿದರು. ಸವಣೂರು ವಲಯ ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.