ಪುತ್ತೂರು: ಒಡಿಯೂರು ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕೆಯ್ಯೂರು, ಕೆದಂಬಾಡಿ ಘಟ ಸಮಿತಿ ಸಭೆ ತಿಂಗಳಾಡಿ ಶಾಲೆಯಲ್ಲಿ ನಡೆಯಿತು. ನಂದಕುಮಾರ್ ಉಜಿರೆ, ಕಿಶೋರ್ ಪುತ್ತೂರು ಹಾಗೂ ಬೇಬಿ ರವರು ಹೆಣ್ಣುಮಕ್ಕಳ ಆರೋಗ್ಯ ಮತ್ತು ಕೃಷಿ ಬಗ್ಗೆ ಮಾಹಿತಿ ನೀಡಿದರು.
ಕೆಯ್ಯೂರು, ಕೆದಂಬಾಡಿ ಘಟ ಸಮಿತಿಯ ಅಧ್ಯಕ್ಷ ವಿ.ವಿಶ್ವನಾಥ ಶೆಟ್ಟಿ ಸಾಗು, ಸೇವಾದೀಕ್ಷಿತೆ ವೇದಾವತಿ, ಉಪಾಧ್ಯಕ್ಷ ಆನಂದ ರೈ ಮಠ, ಕಾರ್ಯದರ್ಶಿ ಅಣ್ಣು ಡಿ, ಸಂಘಟನಾ ಕಾರ್ಯದರ್ಶಿ ರವಿಂದ್ರ ರೈ ನಂಜೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.