Home_Page_Advt
Home_Page_Advt
Home_Page_Advt
Breaking News

ಇನ್ನರ್‌ವ್ಹೀಲ್ ಕ್ಲಬ್‌ನ ಸಮಾಜಸೇವಾ ಕಾರ್ಯಗಳಿಗೆ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್ ಚಾಲನೆ

ಪುತ್ತೂರು:ದೇಶದಲ್ಲಿ 2ಲಕ್ಷ ಅನಾಥ ಮಕ್ಕಳಿದ್ದಾರೆ. ಅಂತಹ ಮಕ್ಕಳಿಗೆ ಬದುಕೇ ಒಂದು ಸವಾಲು. ಯಾವ ತಪ್ಪಿಗಾಗಿ ಆ ಮಗುವಿಗೆ ಅಂತಹ ಶಿಕ್ಷೆ ನೀಡಲಾಗುತ್ತದೆ. ಹಡೆದ ತಾಯಿ ಹೃದಯ ಯಾವತ್ತೂ ಕಲ್ಲಾಗಬಾರದು. ಇಂದು ಬಹಳಷ್ಟು ಮಂದಿ ವಿದ್ಯಾವಂತರಾಗಿದ್ದು ಇಂತಹ ಘೋರ ಕೃತ್ಯಗಳಿಗೆ ಆಸ್ಪದೆ ನೀಡದೆ ಪೋಷಕತ್ವದ ಕುರಿತು ಅರಿವು ಮೂಡಿಸಬೇಕು ಎಂದು ಇನ್ನರ್ ವ್ಹೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್ ಹೇಳಿದರು.

ಅವರು ಆ.14ರಂದು ಪುತ್ತೂರು ಇನ್ನರ್ ವ್ಹೀಲ್ ಕ್ಲಬ್‌ಗೆ ಭೇಟಿ ನೀಡಿ ವಿವಿಧ ಸಮಾಜ ಸೇವಾ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಕೋಡಿಂಬಾಡಿಯ ಮಠಂತಬೆಟ್ಟು ಕೃಷ್ಣ ಕೃಪಾ ಇಂಡಸ್ಟ್ರೀಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರಿಯೇತರ ಸಂಸ್ಥೆಯಾಗಿ ಇನ್ನರ್ ವ್ಹೀಲ್ ಕ್ಲಬ್ ಹಲವು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕ್ಲಬ್‌ನ ಮುಖಾಂತರ ಸಮಾಜ ಸೇವೆಗೆ ಸಾಕಷ್ಟು ಅವಕಾಶಗಳಿವೆ ಎಂದರು. 104 ದೇಶಗಳಲ್ಲಿ ಇನ್ನರ್ ವ್ಹೀಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಈಗಾಗಳೇ ಶೇ.35ರಷ್ಟು ಸದಸ್ಯರನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಶೇ.2ರಷ್ಟು ಸದಸ್ಯರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವರ್ಷ ಕ್ಲಬ್ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಸದಸ್ಯರ ಸಂಖ್ಯೆ ಶೇ.50ಕ್ಕೆ ತಲುಪಬೇಕು ಎಂದರು.

  • ಬುಲೆಟಿನ್ ಬಿಡುಗಡೆ: `ವ್ಯುಮೆನ್ಸ್ ಇನ್‌ಸೈಟ್’ ಎಂಬ ಕ್ಲಬ್ ವಿಶೇಷ ಸಂಚಿಕೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಭುಜಂಗ ಆಚಾರ್ಯ ಬಿಡುಗಡೆ ಮಾಡಿದರು.
  • ಸನ್ಮಾನ: ಬನ್ನೂರು ಪ್ರಜ್ಞಾ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಮುಖ್ಯಸ್ಥೆ ಜ್ಯೋತಿ ಅಣ್ಣಪ್ಪರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸದಸ್ಯರ ಸೇರ್ಪಡೆ: ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹಾಗೂ ಕೃಷ್ಣವೇಣಿ ಮುಳಿಯರವರನ್ನು ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ಕ್ಲಬ್‌ನ ಕೋಶಾಧಿಕಾರಿ ಶಂಕರಿ ಭಟ್ ಹಾಗೂ ಸಂಚಿಕೆಯ ಸಂಪಾದಕಿ ಪ್ರಮೀಳಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣವೇಣಿ ಪ್ರಾರ್ಥಿಸಿದರು. ರಾಧಿಕಾ ಶೆಣೈ ಕ್ಲಬ್‌ನ ಗೀತೆ ವಾಚಿಸಿದರು. ಕ್ಲಬ್‌ನ ಅಧ್ಯಕ್ಷೆ ಸಹನಾ ಭಾವಿನ್ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮೀ ಶೆಣೈ ವರದಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಕೆದಿಲಾಯ, ಐಎಸ್‌ಓ ಅಶ್ವಿನಿಕೃಷ್ಣ, ಶೋಭಾ ಕೊಳತ್ತಾಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಮುದಾಯ ಸಂಘಟಕಿ ಲಲಿತಾ ಭಟ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಸೀಮಾನಾಗರಾಜ್ ವಂದಿಸಿದರು.

ಆಂಜನೇಯ ವೃತ್ತ ಲೋಕಾರ್ಪಣೆ: ಪುತ್ತೂರು ಇನ್ನರ್ ವೀಲ್ ಕ್ಲಬ್‌ನ ವತಿಯಿಂದ ಬೊಳುವಾರು ಆಂಜನೇಯ ಮಂತ್ರಾಲಯದ ಮುಂಭಾಗದಲ್ಲಿ ನಿರ್ಮಿಸಲಾದ ಅಂಜನೇಯ ವೃತ್ತವನ್ನು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇನ್ನರ್ ವ್ಹೀಲ್ ಕ್ಲಬ್‌ನಿಂದ ಸೇವಾ ರೂಪದಲ್ಲಿ ನಿರ್ಮಿಸಲಾದ ಆಂಜನೇಯ ವೃತ್ತದಲ್ಲಿ ಮಾರ್ಗಸೂಚಿಯನ್ನು ಅಳವಡಿಸಲಾಗಿದ್ದು ಇದರಿಂದ ನಾಗರೀಕರಿಗೆ ಹಾಗೂ ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು. ಪುತ್ತೂರು ನಗರವು ಬೆಳೆಯುತ್ತಿದ್ದು ರಸ್ತೆಗಳು ವಿಸ್ತಾರಗೊಳ್ಳುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆಯು 12ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಪತ ರಸ್ತೆಯಾಗಿ ಅಭಿವೃದ್ಧಿಯಾಗಲಿದೆ. ಈ ಸಂದರ್ಭದಲ್ಲಿ ವೃತ್ತವನ್ನು ಇನ್ನಷ್ಟು ಅಂದವಾಗಿ ನಿರ್ಮಿಸಿ ಅಂಜನೇಯ ವೃತ್ತದ ಚಿರಸ್ಥಾಯಿಯಾಗಿ ಉಳಿಸಲಾಗುವುದು ಎಂದರು.

ಕ್ಲಬ್‌ನ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್ ವೃತ್ತದ ನಾಮಫಲಕ ಅನಾವರಣಗೊಳಿಸಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರ ಸಭಾ ಸದಸ್ಯರಾದ ಶಿವರಾಮ ಸಪಲ್ಯ, ಗೌರಿ ಬನೂರು, ವಿದ್ಯಾ ಆರ್.ಗೌರಿ, ಜೀವಂಧರ್ ಜೈನ್, ಸುಂದರ ಪೂಜಾರಿ ಬಡಾವು, ಜಗದೀಶ್ ಶೆಣೈ, ಪೌರಾಯುಕ್ತೆ ರೂಪಾ ಶೆಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುರುಷೋತ್ತಮ ಮುಂಗ್ಲಿಮನೆ, ಚನಿಲ ತಿಮ್ಮಪ್ಪ ಶೆಟ್ಟಿ, ರಾಮದಾಸ ಹಾರಾಡಿ, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಪ್ರೇಮಲತಾ ರಾವ್, ಜಯಶ್ರೀ ಶೆಟ್ಟಿ, ಜ್ಯೋತಿ ಆರ್.ನಾಯಕ್, ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸಹನಾ ಭಾವಿನ್, ಕಾರ್ಯದರ್ಶಿ ವಿಜಯ ಲಕ್ಷ್ಮೀ, ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಗರ ಸಭಾ ಸದಸ್ಯ ಪಿ.ಜಿ ಜಗನ್ನೀವಾಸ ರಾವ್ ಸ್ವಾಗತಿಸಿ, ವಂದಿಸಿದರು.

ಕ್ಲಬ್‌ನ ಸಮಾಜ ಸೇವೆಗಳು: ಕ್ಲಬ್ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್‌ರವರ ಪುತ್ತೂರು ಭೇಟಿಯ ಹಿನ್ನಲೆಯಲ್ಲಿ ಕ್ಲಬ್‌ನ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮಹಾಲಿಂಗೇಶ್ವರನ ಸನ್ನಿಧಿಗೆ ಆಗಮಿಸಿದ, ಜಿಲ್ಲಾಧ್ಯಕ್ಷೆ ಸರ್ಕಾರಿ ಆಸ್ಪತ್ರೆಗೆ 2ವೀಲ್ ಚೇರ್‌ನ ಕೊಡುಗೆ, ಬೊಳುವಾರು ಆಂಜನೇಯ ವೃತ್ತ ಲೋಕಾರ್ಪಣೆ, ಬನ್ನೂರು ಪ್ರಜ್ಞಾ ನರಮಾನಸಿಕ ಕೇಂದ್ರಕ್ಕೆ ಸುಮಾರು 15ಮಂದಿಗೆ ಇಂದಿನ ದಿನದ ತಿಂಡಿ ಮತ್ತು ಊಟದ ಸೌಲಭ್ಯ, ಕೊಡಿಂಬಾಡಿ ಮತ್ತು ಮಠಂತಬೆಟ್ಟು ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿದ್ದ 10 ಬಾಕ್ಸ್, 15 ಮಕ್ಕಳ ಚೇರ್ ಮತ್ತು ಗೋಡ್ರೆಜ್‌ಯನ್ನು ಕೊಡುಗೆಯಾಗಿ ನೀಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.