Home_Page_Advt
Home_Page_Advt
Home_Page_Advt
Breaking News

ಬೆಟ್ಟಂಪಾಡಿ: ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

 


ಆರೋಗ್ಯವಂತ 18-25  ವರ್ಷದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ : ಡಾ. ರಾಮಚಂದ್ರ ಭಟ್
ಪುತ್ತೂರು: ಬೆಟ್ಟಂಪಾಡಿ  ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ  ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಆಶಯದಂತೆ, ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಪುತ್ತೂರು ಇದರ ಸಹಯೋಗದಲ್ಲಿ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಬೆಟ್ಟಂಪಾಡಿ, ಗ್ರಾಮ ವಿಕಾಸ ಸಮಿತಿ ನಿಡ್ಪಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಟ್ಟಂಪಾಡಿ ಇದರ ಸಹಕಾರದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ರೋಟರಿ ಕ್ಯಾಂಪ್, ಬ್ಲಡ್ ಬ್ಯಾಂಕ್  ಡಾ. ರಾಮಚಂದ್ರ ಭಟ್ ವೈದ್ಯಾಧಿಕಾರಿಗಳು  ಮಾತನಾಡಿ ರಕ್ತದಾನ ಮಾಡುವುದರಿಂದ ಹಲವು ಜೀವವನ್ನು ಉಳಿಸಬಹುದು. ಆರೋಗ್ಯವಂತ 18-65 ವರ್ಷದವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ವಲಯ ಅಧ್ಯಕ್ಷ ಶ್ರೀ ಹರಿ ದರ್ಬೆ ಅಧ್ಯಕ್ಷತೆ ವಹಿಸಿದರು. ಉದ್ಘಾಟಕರಾಗಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ರೈ ಗುಮ್ಮಟಗದ್ದೆ, ಅತಿಥಿಗಳಾಗಿ  ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ  ರಂಗನಾಥ ರೈ ಗುತ್ತು, ಶ್ರೀ ಗಣೇಶ್ ಗೌಡ ಪುಳಿತ್ತಡ್ಕ ಹಾಗೂ ವೆಂಕಟ್ರಮಣ ಭಟ್, ಮಂಜುಳ ಗಿರಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.