Home_Page_Advt
Home_Page_Advt
Home_Page_Advt
Breaking News

ಕೆದಂಬಾಡಿ ಸನ್ಯಾಸಿಗುಡ್ಡೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ವಿವಿಧ ಸ್ಪರ್ಧೆಗಳು

ಕೆದಂಬಾಡಿ ಶ್ರೀ ರಾಮ ಮಂದಿರದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ, ವಿವಿಧ ಸ್ಪರ್ಧೆಗಳು
ಭಗವಾನ್ ಶ್ರೀ ಕೃಷ್ಣನ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಅನುಕರಣೀಯ- ಪೂರ್ಣಾತ್ಮರಾಮ್
ಪುತ್ತೂರು: ನಾಡಿನೆಲ್ಲೆಡೆ ಭಕ್ತಿಶ್ರದ್ದೆಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಕೃಷ್ಣನ ವೇಷ ಹಾಕುವ ಮೂಲಕ ಸಂಭ್ರಮಿಸುತ್ತೇವೆ. ಕೃಷ್ಣ ವೇಷ ಹಾಕಿದ ನಮ್ಮ ಮಕ್ಕಳಿಗೆ ಕೃಷ್ಣನ ವಿಚಾರಧಾರೆಗಳನ್ನು ತಿಳಿಸಿಕೊಡಬೇಕು, ಕೃಷ್ಣನ ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳು ಮುಂದಿನ ದಿನಗಳಲ್ಲಿ ಭವ್ಯ ಭಾರತದ ದಿವ್ಯ ಪ್ರಜೆಗಳಾಗಿ ಬೆಳೆಯುವಂತವರಾಗಬೇಕು ಎಂದು ಧಾರ್ಮಿಕ ಚಿಂತಕ ಪೂರ್ಣಾತ್ಮರಾಮ್ ಈಶ್ವರಮಂಗಲ ಹೇಳಿದರು.

ಅವರು ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದ ವಠಾರದಲ್ಲಿ ಆ.೨೫ ರಂದು ಜರಗಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದರು. ಕೃಷ್ಣನ ವಿಚಾರಧಾರಗಳ ಬಗ್ಗೆ ಮಾತನಾಡಿದ ಅವರು, ಭಗವಾನ್ ಶ್ರೀ ಕೃಷ್ಣ ಬೋಧಿಸಿದ ತತ್ವ ಆದರ್ಶಗಳು ಎಲ್ಲಾ ಕಾಲಕ್ಕೂ ಅನುಕರಣೀಯವಾಗಿವೆ. ಭಗವತ್‌ಗೀತೆ ಎಲ್ಲರಿಗೂ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಹೇಳಿದರು. ಇದಲ್ಲದೆ ಕೃಷ್ಣನ ವಿಚಾರಧಾರಗಳನ್ನು ಅಂದಿಗೂ ಇಂದಿಗೂ ಹೋಲಿಕೆ ಮಾಡುವ ಮೂಲಕ ಬಹಳಷ್ಟು ವಿಚಾರಗಳನ್ನು ತಿಳಿಸಿದರು. ಸಮಾರಂಭವನ್ನು ವಿಜಯ ಬ್ಯಾಂಕ್‌ನ ನಿವೃತ್ತ ಶಾಖಾ ಪ್ರಬಂಧಕ ದಾಮೋದರ ಗೌಡ ಇದ್ಯಪೆ ದೀಪ ಬೆಳಗಿಸಿ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದ ಅಧ್ಯಕ್ಷ ಕರುಣಾಕರ ರೈ ಅತ್ರೆಜಾಲುರವರು ಮಾತನಾಡಿ, ಎಲ್ಲರ ಸಹಕಾರದಿಂದ ಮಂದಿರದ ವಠಾರದಲ್ಲಿ ಸಂಭ್ರಮದ ಅಷ್ಟಮಿ ಕಾರ್ಯಕ್ರಮ ಆಚರಣೆ ನಡೆದಿದೆ, ಮುಂದಿನ ದಿನಗಳಲ್ಲೂ ಇದೇ ರೀತಿ ನಡೆಯಲಿದೆ, ಕೃಷ್ಣ ನಮಗೆಲ್ಲರಿಗೂ ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮಂದಿರದ ಉಪಾಧ್ಯಕ್ಷ ರಾಧಾಕೃಷ್ಣ ಪೂಜಾರಿ ಇದ್ಪಾಡಿ, ಮಂದಿರದ ಪ್ರ.ಕಾರ್ಯದರ್ಶಿ ಶಿವರಾಮ ಗೌಡ ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಸಂಚಾಲಕ ಜಯರಾಮ ಗೌಡ ಮುಂಡಾಳ ಸ್ವಾಗತಿಸಿದರು. ಜೈ ದೀಪ್ ರೈ ವಂದಿಸಿದರು. ಸಮಿತಿಯ ಸಹ ಸಂಚಾಲಕ ನಿತೇಶ್ ಕುಮಾರ್ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿದರು.ಮಂದಿರದ ಮಾಜಿ ಕಾರ್ಯದರ್ಶಿ ರಾಘವ ಗೌಡ ಕೆರೆಮೂಲೆ, ಚರಣ್ ಸಾರೆಪುಣಿ, ನೇಮಣ್ಣ ಗೌಡ ಇದ್ಯಪೆ,ಅಕ್ಷತ್ ಇದ್ಯಪೆ, ಕೃಷ್ಣ ಕುಮಾರ್ ಇದ್ಯಪೆ, ಮೋಕ್ಷಿತ್ ಇದ್ಯಪೆ, ಜಗನ್ನಾಥ ಅಮೀನ್ ಮಾರುತಿಪುರ, ಸುಶೀತ್ ಕೋರಂಗ, ಅಶ್ವಿತ್ ಕೊಲ್ಲಾಜೆ, ಪ್ರಶಾಂತ್ ಪೂಜಾರಿ ಅಜಕ್ಕುರಿ,ಚಾಲಚಂದ್ರ ರೈ ಕೆದಂಬಾಡಿ, ಸಂತೋಷ್ ಕುಮಾರ್ ರೈ ಕೋರಂಗ,ಬಾಲಕೃಷ್ಣ ಕೋಡಿಯಡ್ಕ, ವಿನೋದ್ ಕೋಡಿಯಡ್ಕ, ಚೇತನ್ ಇದ್ಪಾಡಿ ಮತ್ತಿತರರು ಸಹಕರಿಸಿದ್ದರು.

ಮನರಂಜಿಸಿದ ಕೃಷ್ಣ ವೇಷ, ವಿವಿಧ ಸ್ಪರ್ಧೆಗಳು
ಕೃಷ್ಣ ಜನ್ಮಾಷ್ಟಮಿಯ ವಿಶೇಷವಾಗಿ ಅಂಗನವಾಡಿ ಪುಟಾಣಿಗಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು. ಇದಲ್ಲದೆ ಶಾಲಾ ಮಕ್ಕಳಿಗೆ, ಸ್ಥಳೀಯ ಪುರುಷರಿಗೆ, ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಜೈಶಂಕರ ರೈ ಬೆದ್ರುಮಾರುರವರು ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದರು.

 

ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಅಲ್ಲದೆ ಪುರುಷರಿಗೆ ಕಬಡ್ಡಿ, ಹಜ್ಜ ಜಗ್ಗಾಟ, ಮೊಸರು ಕುಡಿಕೆ, ತಪ್ಪಂಗಾಯಿ ಇತ್ಯಾದಿ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ,ಮದರಂಗಿ, ಮೊಸರು ಕುಡಿಕೆ,ರಂಗೋಲಿ ಇತ್ಯಾದಿ ಸ್ಪರ್ಧೆಗಳು ಜರಗಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.