Home_Page_Advt
Home_Page_Advt
Home_Page_Advt
Breaking News

ವಿ.ಹಿಂ.ಪ, ಭಜರಂಗದಳ ವತಿಯಿಂದ ಕಡಬದಲ್ಲಿ ಮೊಸರುಕುಡಿಕೆ ಉತ್ಸವಕ್ಕೆ ಚಾಲನೆ

  • ಹಗ್ಗಜಗ್ಗಾಟ, ಅಟ್ಟಿ ಮಡಿಕೆ, ಆಕರ್ಷಕ ಶೋಭಾಯಾತ್ರೆ, ಧಾರ್ಮಿಕ ಸಭೆ

ಕಡಬ: ಪ್ರಖಂಡ ವಿಶ್ವಹಿಂದೂ ಪರಿಷತ್ ಭಜರಂಗದಳ ವತಿಯಿಂದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ವಿಶ್ವಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಾಲ್ಕನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ ಆ.25ರಂದು ಚಾಲನೆ ನೀಡಿದರು.

ಬಳಿಕ ಹಗ್ಗಜಗ್ಗಾಟ ಸ್ಪರ್ಧೆ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ವಿ.ಹಿಂ.ಪ ಗೌರವಾಧ್ಯಕ್ಷ ಜನಾರ್ದನ ರಾವ್, ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ, ಕಾರ್‍ಯದರ್ಶಿ ಪ್ರಮೋದ್ ರೈ ನಂದುಗುರಿ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ಉದ್ಯಮಿ ಹರೀಶ್ ಪೈ, ಸಿವಿಲ್ ಇಂಜಿನಿಯರ್ ಬಾಲಕೃಷ್ಣ ಗೌಡ ಡಿ.ಕೆ. ಪ್ರಮುಖರಾದ ವೆಂಕಟ್ರಮಣ ಕುತ್ಯಾಡಿ, ವಿನಯ ಕೋಲ್ಪೆ, ರಘುರಾಮ ನಾಕ್ ಕುಕ್ಕೆರೆಬೆಟ್ಟು, ವಾಸುದೇವ ಗೌಡ ಕೊಲ್ಲೆಸಾಗು, ಸುರೇಶ್.ಎನ್.ಕೋಟೆಗುಡ್ಡೆ, ಸಂತೋಷ್ ಸುವರ್ಣ ಕೋಡಿಬೈಲು, ರವಿ ಪಾದರೆ, ಯತೀಶ್, ಕಿಶನ್ ಕುಮಾರ್ ರೈ ಉಪಸ್ಥಿತರಿದ್ದರು.

ವೈಭವದ ಶೋಭಾಯಾತ್ರೆ, ಅಟ್ಟಿ ಮಡಿಕೆ, ಧಾರ್ಮಿಕ ಸಭಾ ಕಾರ್ಯಕ್ರಮ
ಅಪರಾಹ್ನ ಕಡಬ ಪೇಟೆಯ ಸಂತೆಕಟ್ಟೆಯ ಬಳಿಯಿಂದ ಭಾಗೀರಥಿ ಟವರ್ಸ್ ತನಕ ನಡೆಯುವ ಬೃಹತ್ ಶೋಭಾಯಾತ್ರೆಯನ್ನು ಕಡಬದ ಉದ್ಯಮಿ ಹರೀಶ್ ಪೈ ಉದ್ಘಾಟಿಸಲಿದ್ದಾರೆ. ರಸ್ತೆಯುದ್ದಕ್ಕೂ ಹಿಂದೂ ವೀರ ಯುಕರಿಂದ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ ನಡೆಯಲಿದೆ. ಸಂಜೆ ಭಾಗೀರಥಿ ಟವರ್ಸ್ ಬಳಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ರಾಜ್ಯ ದಕ್ಷಿಣ ಪ್ರಾಂತ ಗೋ-ರಕ್ಷಾ ಪ್ರಮುಖ್ ಜಗದೀಶ್ ಶೇಣವ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಎಡಮಂಗಲದ ಚಂದ್ರಶೇಖರ ಮರಕ್ಕಡ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. ಭಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ , ದುರ್ಗಾವಾಹಿನಿಯ ಪ್ರಾಂತ ಸಂಯೋಜಕಿ ವಿದ್ಯಾ ಮಲ್ಯ ಉಳ್ಳಾಲ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಉಡುಪಿ ಶ್ರೀ ಸಾಯಿ ಬಳಗದವರಿಂದ ಸಿಂಗಾರಿ ಮೇಳ, ಕಲ್ಲಡ್ಕ ಶಿಲ್ಪ ಕಲಾ ಆರ್ಟ್ಸ್ ಅವರಿಂದ ಗೊಂಬೆಯಾಟ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.