Home_Page_Advt
Home_Page_Advt
Home_Page_Advt
Breaking News

ಪುತ್ತೂರು ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ, ಆಟೋಟ ಸ್ಪರ್ಧೆಗಳು

ಪುತ್ತೂರು: ವಿಶ್ವಹಿಂದು ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ವತಿಯಿಂದ ನಡೆಯಲಿರುವ 11ನೇ ವರ್ಷದ ಮೊಸರು ಕುಡಿಕೆ ಉತ್ಸವ ಅಂಗವಾಗಿ ಕೃಷ್ಣ ವೇಷ ಸ್ಪರ್ಧೆ ಹಾಗೂ ಕಬಡ್ಡಿ ಪಂದ್ಯಾಟವು ಆ.25ರಂದು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ದಿ.ನಿತಿನ್ ರೈ ಸ್ಮರಣಾರ್ಥವಾಗಿ ನಡೆದ ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆಯನ್ನು ಯುವ ಉದ್ಯಮಿ ಪೂರ್ಣಜಿತ್ ರೈ ಬೆಳ್ಳಿಪ್ಪಾಡಿ ಉದ್ಘಾಟಿಸಿ, ಶುಭಹಾರೈಸಿರು. ಅಧ್ಯಕ್ಷತೆ ವಹಿಸಿದ್ದ ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮಾತನಾಡಿ, ಕೃಷ್ಣನ ಪ್ರತಿಯೊಂದು ಬಾಲ್ಯ ಲೀಲೆಯಲ್ಲಿಯೂ ವಿಶಿಷ್ಠವಾದ ಸಂದೇಶವಿದೆ. ಮಕ್ಕಳಿಗೆ ಕೃಷ್ಣನ ವೇಷ ಹಾಕುವ ಮುಖಾಂತರ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಪೂರಕವಾಗಲಿದೆ ಎಂದರು.

ವಿಶ್ವಹಿಂದು ಪರಿಷತ್‌ನ ಗೌರವಾಧ್ಯಕ್ಷ ಯು.ಪೂವಪ್ಪ, ಕಾರ್ಯದರ್ಶಿ ಸತೀಶ್ ಬಿ.ಎಸ್, ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಜಯಂತ ಕುಂಜೂರುಪಂಜ, ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ ಹಾಗೂ ಮಾತೃಶಕ್ತಿ ಪ್ರಮುಖ್ ಮೋಹಿನಿ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮನೋಹರ್ ಕಲ್ಲಾರೆ ಸ್ವಾಗತಿಸಿದರು. ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಬಡ್ಡಿ ಪಂದ್ಯಾಟ:
ಟಿ.ರಾಧಾಕೃಷ್ಣ ಭಟ್ ಸ್ಮರಣಾರ್ಥ ನಡೆಯುವ ಕಬಡ್ಡಿ ಪಂದ್ಯಾಟವನ್ನು ವಿಶ್ವಹಿಂದು ಪರಿಷತ್‌ನ ಗೌರವಾಧ್ಯಕ್ಷ ಯು.ಪೂವಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶ್ವಹಿಂದು ಪರಿಷತ್ ಪುತ್ತೂರಿನಲ್ಲಿ ಪ್ರಬಲ ಸಂಘಟನೆಯಾಗಿ ಬೆಳೆಯುತ್ತಿದೆ. ರಾಜಕೀಯ ರಹಿತವಾದ ಸಂಘಟನೆಯಲ್ಲಿ ಎಲ್ಲಾ ವರ್ಗದ ಜನರು ಒಟ್ಟಾಗಿ ಸಂಘಟನೆಯಲ್ಲಿ ಭಾಗವಹಿಸುತ್ತಾರೆ. ಮೊಸರು ಕುಡಿಕೆ ಉತ್ಸವದ ಮೂಲಕ ಹಿಂದು ಬಾಂಧವರು ಒಟ್ಟು ಸೇರುವ ಕಾರ್ಯಕ್ರಮವಾಗಿ ಮೂಡಿಬರುತ್ತಿದೆ ಎಂದರು.

ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಡಮಜಲು ಸುಭಾಸ್ ರೈ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳದ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಪ್ರಖಂಡದ ಸಂಯೋಜಕ ಹರೀಶ್ ದೋಳ್ಪಾಡಿ, ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್ಯದರ್ಶಿ ಸತೀಶ್ ಬಿ.ಎಸ್, ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಜಯಂತ ಕುಂಜೂರುಪಂಜ ಹಾಗೂ ನ್ಯಾಯವಾದಿ ಪ್ರಮುಖ್ ಮಾಧವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಜರಂಗದಳದ ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ ಸ್ವಾಗತಿಸಿದರು. ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ ಪ್ರಸ್ರಾವಣೆಗೈದರು. ಮೊಸರು ಕುಡಿಕೆ ಉತ್ಸವ ಸಮಿತಿ ಕೋಶಾಧಿಕಾರಿ ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.