Home_Page_Advt
Home_Page_Advt
Home_Page_Advt
Breaking News

ಸಂಪ್ಯ:ಕಂಬಳತ್ತಡ್ಕ ಶ್ರೀಕೃಷ್ಣ ಯುವಕ ಮಂಡಲದ 25ನೇ ವರ್ಷದ ಕೃಷ್ಣ ಜನ್ಮಾಷ್ಟಮಿ

ಪುತ್ತೂರು:ಕೃಷ್ಣನ ಲೀಲೆಗಳು ಜೀವನ ವಿಧಾನವನ್ನು ತಿಳಿಸುತ್ತದೆ. ಧರ್ಮವನ್ನು ಯಾವ ರೀತಿ ಪಾಲನೆ ಮಾಡಬೇಕು, ರಾಜಕೀಯ ಹಾಗೂ ಸಾಮಾಜಿಕವಾಗಿ ನಾವು ಸಮಾಜದಲ್ಲಿ ಯಾವ ಮಾದರಿಯಲ್ಲಿ ಆಡಳಿತ ನಡೆಸಬೇಕು ಎಂಬ ಮಾರ್ಗದರ್ಶನ ನೀಡುವ ಶ್ರೀಕೃಷ್ಣ ಜೀವನ ವಿಧಾನಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಕೊಳ್ಳಬೇಕಾದ ಆವಶ್ಯಕತೆಯಿದೆ ಎಂದು ಜ್ಯೋತಿಷ್ಯ ಶಿರೋಮಣಿ ಗಣೇಶ್ ಭಟ್ ಕೇಕನಾಜೆ ಹೇಳಿದರು.

ಸಂಪ್ಯ ಕಂಬಳತ್ತಡ್ಡ ಶ್ರೀಕೃಷ್ಣ ಯುವಕ ಮಂಡಲದ ವತಿಯಿಂದ ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ೨೫ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕೃಷ್ಣ ಜನ್ಮಾಷ್ಠಮಿಯಲ್ಲಿ ಮಹತ್ವಪೂರ್ಣ ಅರ್ಥವಿದ್ದರೂ ಪ್ರಸ್ತುತ ದಿನಗಳಲ್ಲಿ ಜಯಂತಿಗಳು ವ್ಯಾವಹಾರಿಕವಾಗಿ ನಡೆಯುತ್ತಿದೆ. ಆಡಂಬರಗಳೇ ಅಧಿಕವಾಗುತ್ತಿದೆ. ಜನರಲ್ಲಿ ಭಯ ಭಕ್ತಿ ಕಡಿಮೆ ಆಗುತ್ತಿದೆ. ಆಚರಣೆಗಳು ತೋರಿಕೆಗಾಗಿ ನಡೆಯುತ್ತಿದೆ. ತಲ್ಲೀನತೆ ಕಡಿಮೆಯಾಗುತ್ತಿದ್ದು ಇಂತಹ ಆಚರಣೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಆಚರಣೆಗಳ ಮುಖಾಂತರ ಮಕ್ಕಳಿಗೆ ಧರ್ಮ ಬೋಧನೆಯಾಗಬೇಕು. ಕೃಷ್ಣ ವೇಷದ ಮೂಲಕ ಭಾವ ತುಂಬಿ ಅಲೌಕಿಕ ಶಕ್ತಿ ಜಾಗೃತಿಗೊಳ್ಳಬೇಕು. ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕಾದ ಆವಶ್ಯಕತೆಯಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಒಳ್ಳೆಯ ಮನಸ್ಸು ಹಾಗೂ ಒಳ್ಳೆಯ ಚಿಂತನೆಗಳಿದ್ದಾಗ ಅದು ಸಾಧನೆಗೆ ಪೂರಲವಾಗಿರುತ್ತದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರವೂ ದೊರೆಯಲು ಸಾಧ್ಯ. ಹೃದಯ ಶ್ರೀಮಂತಿಕೆ ಹಾಗೂ ಉತ್ತಮ ಗುಣ ನಡತೆಗಳನ್ನು ಅಳವಡಿಸಿಕೊಂಡಾಗ ಸಮಾಜವೇ ನಮ್ಮ ಗುರುತಿಸಿ ಗೌರವಿಸುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಶುಭಹಾರೈಸಿದರು. ಪುತ್ತೂರು ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಸಕ್ತಿವೇಲು, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸತೀಶ್ ನಾಕ್ ಪರ್ಲಡ್ಕ ಸಂದರ್ಭೋಚಿತವಾಗಿ ಮಾತನಾಡಿದರು. ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ಟಿ ಸುರೇಶ್, ಯುವಕ ಮಂಡಲದ ಅಧ್ಯಕ್ಷ ಲೋಕೇಶ್ ರೈ ಮೇರ್ಲ, ಸ್ಥಾಪಕಾಧ್ಯಕ್ಷ ರವಿಚಂದ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ,ಪ್ರತಿಭಾ ಪುರಸ್ಕಾರ
ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರವಿಚಂದ್ರ ಆಚಾರ್ಯರವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಷ್ಮಾ ಜಿ., ರೂಪಶ್ರೀ, ಚರಣ್ ಬಿ.ಜೆ, ಕಿಶನ್ ಪ್ರಕಾಶ್, ಸುಶಾನ್ ಪ್ರಕಾಶ್, ಸಾಯಿಲ್ ವಿಠಲ ಸುವರ್ಣ, ದಿಶಾಂತ್ ಶೆಟ್ಟಿ ಕಂಬಳತ್ತಡ್ಡ, ಅಕ್ಷತಾ ರಾಜೇಶ್, ರಂಜಿತ್ ರೈ, ಯುವಕ ಮಂಡಲದಿಂದ ನಡೆದ ಪ್ರಥಮ ಕೃಷ್ಣ ಜನ್ಮಾಷ್ಠಮಿಯಲ್ಲಿ ಕೃಷ್ಣನ ವೇಷ ಹಾಕಿದ ಅಕ್ಷತಾ ರಾಜೇಶ್, ಕಾರ್ತಿಕ್ ಸುವರ್ಣ ಹಾಗೂ ಹರ್ಷಿತಾರವರನ್ನು ಗೌರವಿಸಲಾಯಿತು. ಯುವಕ ಮಂಡಲವನ್ನು ೨೫ ವರ್ಷಗಳ ಕಾಲ ಮುನ್ನಡೆಸಿದ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಅಂಕಿತಾ ಹೊಸಮನೆ ಹಾಗೂ ಅಶ್ವಿತಾ ಹೊಸಮನೆ ಪ್ರಾರ್ಥಿಸಿದರು. ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಸುವರ್ಣ, ವಾಣಿಶ್ರೀ ದೇವರಾಜ್, ಚಂದ್ರಕಾಂತ್, ದೀಪಕ್ ಸುವರ್ಣ, ನವೀನ್, ಆಂಜನೇಯ, ವಿಜೇತ್ ಸುವರ್ಣ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಹಾಗೂ ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ಸಂತೋಷ್ ಸುವರ್ಣ ಮೇರ್ಲ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು ನಮ್ಮ ಕಲಾವಿದೆರ್ ನೆಲ್ಯಾಡಿ ಇವರಿಂದ `ಮಗೆ ದುಬಾಡ್’ ಎಂಬ ತುಳು ನಾಟಕ ನಡೆಯಿತು.

ವಿವಿಧ ಆಟೋಟ ಸ್ಪರ್ಧೆಗಳು:
ಬೆಳಿಗ್ಗೆ ನಡೆದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆರ್ಯಾಪು ನೇರಳಕಟ್ಟೆ ಮಹಾ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ ನೆರವೇರಿಸಿದರು. ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಯಾಪು ನೇರಳಕಟ್ಟೆ ಮಹಾ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ದಾರ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ ಅಧ್ಯಕ್ಷತೆ ವಹಿಸಿದ್ದರು. ಕುಕ್ಕಾಡಿ ಪ್ರೀತಂ ತಂತ್ರಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ ಮಂಜಪ್ಪ ರೈ ಬಾರಿಕೆ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರವಿಚಂದ್ರ ಆಚಾರ್ಯ, ಅಧ್ಯಕ್ಷ ಲೋಕೇಶ್ ರೈ ಮೇರ್ಲ, ಕಾರ್ಯದರ್ಶಿ ಸುರೇಶ್ ಪಿ., ಭವ್ಯ ರೈ ಹಾಗೂ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ತುಳು ರಂಗ ಭೂಮಿ ಕಲಾವಿದರಾದ ಸುಂದರ ರೈ ಮಂದಾರ, ದೀಪಕ್ ರೈ ಪಾಣಾಜೆ, ಪ್ರಗತಿಪರ ಕೃಷಿಕ ಬಾಬು ಪೂಜಾರಿ ಹೊಸಮನೆ, ಕಂಬಳತ್ತಡ್ಡ ಅಂಗನವಾದಿ ಕಾರ್ಯಕರ್ತೆ ರತ್ನಾವತಿ ಮೇರ್ಲ ಹಾಗೂ ಸಹಾಯಕಿ ಪುಷ್ಪಲತಾರವರನ್ನು ಸನ್ಮಾನಿಸಲಾಯಿತು.

ಧನ್ಯ ಹಾಗೂ ಕಾವ್ಯ ಪ್ರಾರ್ಥಿಸಿದರು. ಮನೋಜ್ ರೈ ಮೇರ್ಲ ಸ್ವಾಗತಿಸಿದರು. ಧನುಶ್ ಹೊಸಮನೆ ಹಾಗೂ ಉಮೇಶ್ ಎಸ್.ಕೆ ಸನ್ಮಾನಿತರ ಪರಿಚಯ ಮಾಡಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಶೆಟ್ಟಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.