Home_Page_Advt
Home_Page_Advt
Home_Page_Advt
Breaking News

ನೆಲ್ಯಾಡಿ: 14ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

ನೆಲ್ಯಾಡಿ: ಜಿಲ್ಲಾ ಅತ್ಯುತ್ತಮ ಸಂಘ ಪ್ರಶಸ್ತಿ ಪುರಸ್ಕೃತ ಗೆಳೆಯರ ಬಳಗ ಗಾಂಧಿ ಮೈದಾನ,ನೆಲ್ಯಾಡಿ ಇದರ ಆಶ್ರಯದಲ್ಲಿ ೧೪ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗೆಳೆಯರ ಬಳಗದ ವಾರ್ಷಿಕೋತ್ಸವ ಅಂಗವಾಗಿ ಆ.೨೫ರಂದು ವಿವಿಧ ಕಾರ್ಯಕ್ರಮಗಳು ನಡೆಯಿತು.

ಬೆಳಿಗ್ಗೆ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧಾರ್ಮಿಕ ಸಾಮರಸ್ಯದೊಂದಿಗ ಸಾಮಾಜಿಕ ಸಾಮರಸ್ಯವೂ ಇರಬೇಕು. ಈ ನಿಟ್ಟಿನಲ್ಲಿ ನೆಲ್ಯಾಡಿಯ ಗೆಳೆಯರ ಬಳಗವು ಎಲ್ಲಾ ಧರ್ಮದವರನ್ನೂ ಒಟ್ಟುಗೂಡಿಸಿಕೊಂಡು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವ ಮೂಲಕ ಮಹಾತ್ಮಗಾಂಧಿಯವರ ರಾಮರಾಜ್ಯದ ಕನಸ್ಸನ್ನು ಸಾಕಾರಗೊಳಿಸುತ್ತಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈಯವರು ಮಾತನಾಡಿ, ದೇಶದಲ್ಲಿ ನಡೆಯುವ ಅನಾಚಾರ, ಭ್ರಷ್ಟಾಚಾರಗಳನ್ನು ತಡೆಯುವಲ್ಲಿ ನಾವೆಲ್ಲರೂ ಜಾಗೃತರಾಗಿರಬೇಕು. ಇದರಿಂದ ದೇಶದಲ್ಲಿ ಸುಭಿಕ್ಷೆ ನೆಲೆಸಲಿದ್ದು ನಾವು ಆಚರಿಸುವ ಹಬ್ಬಗಳೂ ಅರ್ಥಪೂರ್ಣವಾಗಲಿದೆ ಎಂದರು. ಶ್ರೀ ಕ್ಷೇ.ಧ.ಗ್ರಾ.ಯೋ.ನೆಲ್ಯಾಡಿ ಒಕ್ಕೂಟದ ಅಧ್ಯಕ್ಷ ವಾಲ್ಟರ್ ಡಿ.ಸೋಜ, ನೆಲ್ಯಾಡಿ ಕಾರ್ಪೋರೇಶನ್ ಬ್ಯಾಂಕ್‌ನ ಮ್ಯಾನೇಜರ್ ರಾಮುಡುರವರು ಶುಭಹಾರೈಸಿದರು. ಗೆಳೆಯರ ಬಳಗದ ಗೌರವಾಧ್ಯಕ್ಷ ರಾಮಚಂದ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಆ.೩೧ರಂದು ನಿವೃತ್ತರಾಗಲಿರುವ ಕಾರ್ಪೋರೇಶನ್ ಬ್ಯಾಂಕ್‌ನ ನೆಲ್ಯಾಡಿ ಶಾಖಾ ಮೇನೇಜರ್ ರಾಮುಡುರವರನ್ನು ಈ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಗೆಳೆಯರ ಬಳಗದ ಕೋಶಾಧಿಕಾರಿ ಜಯಾನಂದ ಬಂಟ್ರಿಯಾಲ್‌ರವರು ಸನ್ಮಾನಿತರನ್ನು ಪರಿಚಯಿಸಿದರು. ಬಾಲಕೃಷ್ಣ ಗೌಡ, ಗಂಗಾಧರ ಶೆಟ್ಟಿ, ಎವರೀಸ್ ಡಿ.ಸೋಜ, ತುಕಾರಾಮ ರೈಯವರು ಅತಿಥಿಗಳನ್ನು ಗೌರವಿಸಿದರು. ಅಧ್ಯಕ್ಷ ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಸ್ವಾಗತಿಸಿ, ಕಾರ್ಯದರ್ಶಿ ನಾರಾಯಣ ಪಿ.ಹೆಗ್ಡೆ ವಂದಿಸಿದರು. ರತ್ನಾಕರ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆ:
ಬೆಳಿಗ್ಗೆ ೬ ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು. ಸುಮಾರು ೪೦ಕ್ಕೂ ಹೆಚ್ಚು ಮಕ್ಕಳು ಮುದ್ದುಕೃಷ್ಣನ ವೇಷಭೂಷಣದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆದರು. ಬಳಿಕ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪುರುಷರಿಗೆ,ಮಹಿಳೆಯರಿಗೆ ಭಕ್ತಿಗೀತೆ ಹಾಡುವುದು, ಮಡಕೆ ಒಡೆಯುವುದು, ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಸ್ಪರ್ಧೆ:
ಸಂಜೆ ಕುಶಾಲಪ್ಪ ನಮ್ಮ ಕಲಾವಿದೆರ್ ನೆಲ್ಯಾಡಿ ಹಾಗೂ ಶ್ರವಣ್ ಕುಮಾರ್ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇಲ್ಲಿನ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಹಾಗೂ ನೆಲ್ಯಾಡಿಯ ಶ್ರೀ ಶಬರೀಶ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ’ ಶ್ರೀದೇವಿ ಲೀಲಾಮೃತಂ’ಯಕ್ಷಗಾನ ಬಯಲಾಟ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.