Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿ: ಮನೆಯವರು ಮಲಗಿರುವಾಗಲೇ ಮನೆಯಿಂದ ಕಳ್ಳತನ!

ಉಪ್ಪಿನಂಗಡಿ: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿ ಆ.25ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆಯವರು ಮನೆಯೊಳಗೆ ಮಲಗಿದ್ದಾಗಲೇ ಕಳ್ಳರು ಈ ಕೃತ್ಯ ನಡೆಸಿದ್ದಾರೆ.

ಇಲ್ಲಿನ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಇಟ್ಟಮ ಶೆಟ್ಟಿ ಅವರ ಮನೆಗೆ ಕಳ್ಳರು ನುಗ್ಗಿದ್ದು, ನಾಲ್ಕು ಬಳೆ, 1 ಮುತ್ತಿನ ಮಾಲೆ, 1 ಕರಿಮಣಿ ಸರ, 1 ಪೆಂಡೆಂಟ್, ಒಂದು ಜೊತೆ ಬೆಂಡೋಲೆ, ಉಂಗುರಗಳು ಹಾಗೂ ಮಗುವಿನ ಚಿನ್ನಾಭರಣಗಳು ಸೇರಿದಂತೆ ಸುಮಾರು 15 ಪವನ್ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ. ಇದರೊಂದಿಗೆ 5 ಸಾವಿರ ರೂ. ನಗದನ್ನು ದೋಚಿ, ಪರಾರಿಯಾಗಿದ್ದಾರೆ. ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ. ಮನೆಯವರು ಬೆಳಗ್ಗೆ ಎದ್ದಾಗ ಘಟನೆ ಬೆಳಕಿಗೆ ಬಂದಿದೆ. ಹಿಂಬಾಗಿಲ ಮೂಲಕ ಮನೆಯೊಳಗೆ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಇಟ್ಟಮ್ಮ ಶೆಟ್ಟಿ ಅವರು ತನ್ನ ಇನ್ನೊಂದು ಮಗನ ಮನೆಗೆ ತೆರಳಿದ್ದು, ಮಠದ ಅವರ ಮನೆಯಲ್ಲಿ ಅವರ ಪುತ್ರರಾದ ಚಂದ್ರಹಾಸ ಶೆಟ್ಟಿ, ಶ್ರೀನಿವಾಸ ಶೆಟ್ಟಿ ಹಾಗೂ ಚಂದ್ರಹಾಸ ಶೆಟ್ಟಿ ಅವರ ಪತ್ನಿ ಮತ್ತು ಮಗು ಇದ್ದರು. ಶ್ರೀನಿವಾಸ ಶೆಟ್ಟಿ ತನ್ನ ಕೋಣೆಯಲ್ಲಿ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಮಲಗಿದರೆ, ಚಂದ್ರಹಾಸ ಶೆಟ್ಟಿ ಹಾಲ್‌ನಲ್ಲಿ ಮಲಗಿದ್ದರು. ಅವರ ಪತ್ನಿ ಹಾಗೂ ಮಗು ಅವರ ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ಸುಮಾರು ಆರು ಗಂಟೆಗೆ ಚಂದ್ರಹಾಸ ಶೆಟ್ಟಿ ಅವರ ಪತ್ನಿ ಎದ್ದಾಗ ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಕಂಡಿತ್ತು. ಪರಿಶೀಲಿಸಿದಾಗ ತಾನು ಮಲಗಿದ್ದ ಕೋಣೆಯಲ್ಲಿದ್ದ ಕಪಾಟಿನಿಂದ ಚಿನ್ನಾಭರಣಗಳನ್ನು ದೋಚಿರುವುದು ಬೆಳಕಿಗೆ ಬಂತು.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.