ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ, ಶ್ರೀದೇವಿ ಲಲಿತೋಪಕ್ಯಾನ ಹರಿಕಥೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದ ಪ್ರತಿಷ್ಠಾ ವರ್ಧಂತಿ ಉತ್ಸವವು ಆ.31ರಂದು ನಡೆಯಿತು.

ವೇದಮೂರ್ತಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ೮ಕ್ಕೆ ಪುಣ್ಯಾಹ, ಗಣಪತಿಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 5.30ರಿಂದ ಮಹಿಳಾ ಮಂಡಳಿಯವರಿಂದ ಲಲಿತ ಸಹಸ್ರನಾಮ, 6.30ಕ್ಕೆ ಸಮೃದ್ಧಿ ಮ್ಯೂಸಿಕಲ್ಸ್ ದರ್ಬೆ ಇವರ ಪ್ರಾಯೋಜಕತ್ವದಲ್ಲಿ ಶ್ರದ್ಧಾಭಟ್ ನಾಯರ್‌ಮೂಲೆ-ಕಾಸರಗೋಡುರವರಿಂದ ಶ್ರೀದೇವಿ ಲಲಿತೋಪಕ್ಯಾನ ಹರಿಕಥೆ ನಡೆಯಿತು. ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.


ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಅಧ್ಯಕ್ಷ ಸಾಯಿರಾಮ ರಾವ್, ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ಎಚ್. ತಾರನಾಥ, ಉಪಾಧ್ಯಕ್ಷರಾದ ರಮೇಶ್ ಬಾಬು, ಗೋಪಾಲ ನೈಕ್, ಜೊತೆ ಕಾರ್ಯದರ್ಶಿ ಯಶವಂತ ಆಚಾರ್ಯ, ಕಿಟ್ಟಣ್ಣ ಗೌಡ, ರಮಾನಂದ ರಾವ್, ಪುಷ್ಪರಾಜ್ ಹೆಗ್ಡೆ, ಅಶೋಕ್ ಹೆಗ್ಡೆ, ಕಿರಣ್ ಉರ್ಲಾಂಡಿ, ಅನಂತ ಶೆಣೈ, ಶಿವಾನಂದ ಶೆಣೈ, ವಿವೇಕ್ ಶೆಣೈ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಿತ್ಯಕರಸೇವಕರ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.