Home_Page_Advt
Home_Page_Advt
Home_Page_Advt
Breaking News

ವಿಟ್ಲ: ಜೀಪು-ಬೈಕ್ ಮಧ್ಯೆ  ಅಪಘಾತ – ಗಾಯಾಳು ಅಶ್ವಿನ್ ಮಂಗಳೂರಿನ‌ ಆಸ್ಪತ್ರೆಯಲ್ಲಿ ಮೃತ್ಯು

ವಿಟ್ಲ: ಜೀಪ್ ಹಾಗೂ ಬೈಕ್ ಮಧ್ಯೆ‌  ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸೆ.1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಸಿಪಿಸಿಆರ್ ಐ  ಸಮೀಪದ ನಿವಾಸಿ ಅಶ್ವಿನ್ (20 ವ.)ರವರು ಮೃತ ದುರ್ದೈವಿಯಾಗಿದ್ದಾರೆ. ಆ.30ರಂದು ರಾತ್ರಿ ಅಶ್ವಿನ್ ರವರು ವಿಟ್ಲ ಕಡೆಯಿಂದ ತನ್ನ ಬೈಕಿನಲ್ಲಿ ಮನೆ ಕಡೆ ತೆರಳುತ್ತಿದ್ದಾಗ ವಿಟ್ಲ-ಪುತ್ತೂರು ರಸ್ತೆಯ ಮೇಗಿನಪೇಟೆ ಬಳಿ ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದ  ಜೀಪ್ ಮಧ್ಯೆ ಅಪಘಾತ ಸಂಭವಿಸಿತ್ತು. ಘಟನೆಯಿಂದಾಗಿ‌ ರಸ್ತೆಗೆ ಎಸೆಯಲ್ಪಟ್ಟು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಶ್ವಿನ್ ರವರನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೆ.1ರಂದು ಮೃತಪಟ್ಟಿದ್ದಾರೆ ಎಂದು‌ ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.