Home_Page_Advt
Home_Page_Advt
Home_Page_Advt
Breaking News

ಗಣೇಶ ಮಹಿಮೆ

ಎ.ವಸಂತ ಕೆದಿಲಾಯ
ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

ಲಿಯುಗದಲ್ಲಿ ದುರ್ಗಾದೇವಿ ಮತ್ತು ಗಣಪತಿ ಶೀಘ್ರ ಫಲ ಕೊಡುವ ದೇವತೆಗಳು. ನವರಾತ್ರಿಯಲ್ಲಿ ನವದುರ್ಗಾರಾಧನೆಯಿಂದ ದೇವಿ ಸಂತುಷ್ಟಳಾಗಿ ಅನುಗ್ರಹಿಸುತ್ತಾಳೆ. ವಿಘ್ನ ನಿವಾರಕನಾದ ಗಣಪತಿಯನ್ನು ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯ ದಿನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಗಣಪತಿ ಹೋಮ, ರಂಗಪೂಜೆ, ಅಪೂಪಭಕ್ಷ್ಯ, ಮೋದಕ ಹವನ, ದೂರ್ವಾಚನೆಗಳಿಂದ ಅರ್ಚಿಸಿದಾಗ ವಿಶೇಷವಾಗಿ ಫಲವನ್ನು ಕೊಡುತ್ತಾನೆ ಎಂದು ಪುರಾಣಗಳು ತಿಳಿಸಿದೆ. ಗಣೇಶ ಪುರಾಣ ಮತ್ತು ಮುದ್ಗಲ ಪುರಾಣದಲ್ಲಿ ಗಣಪತಿಯನ್ನು ವಿಶೇಷವಾಗಿ ವರ್ಣನೆ ಮಾಡಿದ್ದಾರೆ. ಪ್ರಳಯ ಕಾಲದಲ್ಲಿ ವಾಯು ಮತ್ತು ಜಲದ ಉತ್ಪಾತದಿಂದಾಗಿ ಏನೂ ತೋಚದಾದಾಗ ದೇವತೆಗಳು ಗಣಪತಿಯನ್ನು ಧ್ಯಾನಿಸಿದಾಗ ಗಣೇಶನು ಪ್ರತ್ಯಕ್ಷನಾಗಿ ಎಲ್ಲ ವಿಘ್ನಗಳನ್ನು, ಕಷ್ಟಗಳನ್ನು ವಾಯು ಪ್ರಕೋಪ, ಜಲ ಪ್ರಕೋಪಗಳನ್ನು ಪರಿಹರಿಸಿದ ವಿವರಣೆಯೂ ಇದೆ. ನೀನೇ ಬ್ರಹ್ಮ, ನೀನೇ ಅಧಿಷ್ಠಾನ, ನಿನ್ನಿಂದಲೇ ಸೃಷ್ಟಿ, ನೀನೇ ಗುರು, ಎಲ್ಲವೂ ನಿನ್ನಿಂದಲೇ ನಾವು ಸುಮ್ಮನೆ ಅಹಂಕಾರ ಪಡುತ್ತಿದ್ದೆವೆ ಎಂದು ಸ್ತೋತ್ರ ಮಾಡುತ್ತಾರೆ. ಆಗ ಗಣಪತಿ ನೀವೆಲ್ಲ ಗರ್ವವನ್ನು ಬಿಟ್ಟು, ಅಹಂಕಾರ ಬಿಟ್ಟು ಕಾರ್ಯ ಮಾಡಿರಿ ಎಂದು ಬ್ರಹ್ಮ ದೇವರಿಗೆ ತನ್ನ ಹೊಟ್ಟೆಯಲ್ಲಿರುವ ಅನಂತ ಬ್ರಹ್ಮಾಂಡವನ್ನು ತೋರಿಸಿ ಹೀಗೆ ಸೃಷ್ಟಿ ಮಾಡು ಎಂದು ತಿಳಿಸಿದ್ದಾನೆ. ಬ್ರಹ್ಮ ಧ್ಯಾನ ಮಾಡಿದಾಗ ‘ ಸೋಪಶ್ಯತ್ ಆತ್ಮನಾತ್ಮಾಗಂ ಗಜರೂಪಧರಂ ದೇವಂ ಶಶಿವರ್ಣಂ ಚತುರ್ಭುಜಂ’ ಸ್ವರೂಪದ ಸಾಕ್ಷಾತ್ಕಾರ ಗಜಾನನ ರೂಪದಿಂದ ಆಯಿತು.

ಗಣಪತಿಯ ಧ್ಯಾನ ನಿತ್ಯ ಮಾಡುವುದರಿಂದ ಯೋಗಿಗಳಲ್ಲಿ ಶ್ರೇಷ್ಠಯೋಗಿಯಾಗುತ್ತಾನೆ. ಗಣಪತ್ಯ ಢರ್ವ ಶೀರ್ಷ ವಿಶೇಷ ಮಂತ್ರಗಳಿಂದ ಅಭಿಷೇಕ ಮಾಡುವುದರಿಂದ ವಾಗ್ಮಿಯಾಗುತ್ತಾರೆ. ಚೌತಿ ದಿನ ಊಟ ಮಾಡದೆ ವೃತದಿಂದ ಧ್ಯಾನ ಮಾಡಿದರೆ ವಿದ್ಯಾವಂತನಾಗುತ್ತಾನೆ. ದೂರ್ವಾ (ಗರಿಕೆಯಿಂದ)ಂಕುರದಿಂದ ಹೋಮ ಮಾಡುತ್ತಾರೋ, ಕುಬೇರ ಸದೃಶ ಸಂಪತ್ತು ಪ್ರಾಪ್ತಿಯಾಗುತ್ತದೆ. ಅರಳಿನಿಂದ ಹೋಮ ಮಾಡಿದರೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಬುದ್ಧಿ ಶಕ್ತಿ ವೃದ್ಧಿಸುತ್ತದೆ. ಸಾವಿರ ಮೋದಕದಿಂದ ಆಹುತಿ ಕೊಟ್ಟು ಗಣಪತಿಯನ್ನು ಸಂತೋಷಪಡಿಸಿದರೆ ಬೇಡಿದ ಫಲವೆಲ್ಲ ಪ್ರಾಪ್ತಿಯಾಗುತ್ತದೆ. ತುಪ್ಪ ಸಮಿದೆಗಳಿಂದ ಹೋಮ ಮಾಡುತ್ತಾರೋ ಅವರಿಗೆ ಎಲ್ಲ ಇಷ್ಟಾರ್ಥಗಳು ಲಭಿಸುತ್ತವೆ. ಗಣಪತಿಗೆ ಸಂಬಂಧಿಸಿದ ಯಜ್ಞ, ಜಪ, ಧ್ಯಾನ, ಸೇವೆಗಳನ್ನು ಮಾಡಿದಾಗ ಕಲಿಯುಗದಲ್ಲಿ ಗಣಪತಿಯು ಸಂತುಷ್ಟನಾಗಿ ಮಹಾ ವಿಘ್ನಗಳನ್ನು, ಮಹಾ ದೋಷಗಳನ್ನು, ಮಹಾಪಾಪಗಳನ್ನು ಪರಿಹರಿಸಿ ಲೋಕಕ್ಕೆ ಮಂಗಲವನ್ನು ಉಂಟು ಮಾಡುತ್ತಾನೆ.
ಸಮಸ್ತ ಸನ್ಮಂಗಲಾನಿಭವಂತು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.