Home_Page_Advt
Home_Page_Advt
Home_Page_Advt
Breaking News

ಕೌಡಿಚ್ಚಾರು ಮಡ್ಯಂಗಲ ಕಾರು ಕೆರೆಗೆ ಬಿದ್ದ ಘಟನೆ -ಅಪಾಯಕಾರಿ ಕೆರೆಯ ಬಗ್ಗೆ ಈ ಹಿಂದೆಯೇ ಎಚ್ಚರಿಸಿದ್ದ ‘ಸುದ್ದಿ ಪತ್ರಿಕೆ’

ಘಟನೆಗೆ ಇಲಾಖಾ ನಿರ್ಲಕ್ಷ್ಯವೇ ಕಾರಣ-ಸ್ಥಳೀಯರ ಆಕ್ರೋಶ

ಪುತ್ತೂರು: ಅರಿಯಡ್ಕ ಗ್ರಾ.ಪಂ ವ್ಯಾಪ್ತಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಳ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದ್ದು ಅನಾಹುತಕ್ಕೆ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಮತ್ತು ಆಕ್ರೋಶ ಸ್ಥಳೀಯವಾಗಿ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿದ್ದ ಹಲವಾರು ಮಂದಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆಕ್ರೊಶ ವ್ಯಕ್ತಪಡಿಸುತ್ತಿದ್ದ ದೃಶ್ಯವೂ ಕಂಡು ಬಂದಿದೆ.

ಸದ್ರಿ ಅಪಾಯಕಾರಿ ಕೆರೆಯ ಬಗ್ಗೆ ‘ಸುದ್ದಿ ಪತ್ರಿಕೆ’ ಹಲವು ಬಾರಿ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಅಲ್ಲದೇ ಇತರ ಪತ್ರಿಕೆಗಳಲ್ಲೂ ವರದಿ ಬಿತ್ತರಗೊಂಡಿತ್ತು. ಸಾರ್ವಜನಿಕರೂ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿದ್ದರು. ಇಷ್ಟೆಲ್ಲಾ ಆದರೂ ಕೆರೆ ಮುಚ್ಚಿಸುವುದು ಬಿಡಿ, ಕನಿಷ್ಠ ತಡೆಬೇಲಿಯಾಗಲೀ, ಸೂಚನಾ ಫಲಕವಾಗಲೀ ಅಲ್ಲಿ ಇದುವರೆಗೂ ಅಳವಡಿಸಿರಲಿಲ್ಲ. ರಸ್ತೆಗೆ ತಾಗಿಕೊಂಡಿದ್ದ ಅಪಾಯಕಾರಿ ಕೆರೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ಸಂಬಂಧಪಟ್ಟವರ ಬೇಜವಾಬ್ದಾರಿಯಿಂದಾಗಿ ಇದೀಗ ನಾಲ್ವರ ಜೀವ ಬಲಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಸದ್ರಿ ಕೆರೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕೆರೆ ಮುಚ್ಚಿಸಲು ಕ್ರಮ ವಹಿಸಲಿ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.