Home_Page_Advt
Home_Page_Advt
Home_Page_Advt
Home_Page_Advt
Breaking News

ಕುದ್ದುಪದವು ಖುವ್ವತುಲ್ ಇಸ್ಲಾಂ ಮದರಸದಲ್ಲಿ ರಕ್ತದಾನ ಶಿಬಿರ

ವಿಟ್ಲ: ರಹ್ಮಾ ರಿಲೀಫ್ ಸೆಲ್ ಅಡ್ಯನಡ್ಕ ಮತ್ತು ಲೈಫ್ ಲೈನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ರಿ ಹಾಗೂ ಯೆನೆಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಕುದ್ದುಪದವು ಖುವ್ವತುಲ್ ಇಸ್ಲಾಂ ಮದರಸದಲ್ಲಿ ರಕ್ತದಾನ ಶಿಬಿರ ಸೆಪ್ಟೆಂಬರ್ 02ರಂದು ನಡೆಯಿತು.

ಕುದ್ದುಪದವು ಮಲ್ಹರ್ ಮಸೀದಿಯ ಇಮಾಮರಾದ ಮುನೀರ್ ಅಝ್ಹರಿ ದುವಾ ನೆರವೇರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೈಫ್ ಲೈನ್ ಫೌಂಡೇಶನ್ ಅಧ್ಯಕ್ಷರಾದ ಶರೀಫ್ ಮೂಸಾ ವಹಿಸಿದ್ದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮರಕ್ಕಿಣಿ ಬದ್ರ್ ಹುಸೈನ್ ಜುಮ್ಮಾ ಮಸೀದಿಯ ಮುದರ್ರಿಸ್ ನೌಫಲ್ ಫೈಝಿ ಮಾತನಾಡುತ್ತಾ “ರಕ್ತದಾನ ಮಾಡುವ ಮೂಲಕ ನಮಗೆ ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ರಕ್ತಕ್ಕೆ ಯಾವುದೇ ಜಾತಿ ಧರ್ಮಗಳ ಬೇಧವಿರುವುದಿಲ್ಲ. ಆದ್ದರಿಂದ ಯುವಕರು ರಕ್ತದಾನದ ಕುರಿತು ಇರುವ ಎಲ್ಲಾ ತಪ್ಪು ಕಲ್ಪನೆಗಳನ್ನು ಬದಿಗಿರಿಸಿ ರಕ್ತದಾನ ಮಾಡಲು ಮುಂದೆ ಬರಬೇಕು” ಎಂದರು.

ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಆಳ್ವ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ ಮೂಸಾ ಸಂದರ್ಭೋಚಿತ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಗೌರವಾಧ್ಯಕ್ಷ ನಝೀರ್ ಹುಸೈನ್, ಲೈಫ್ ಲೈನ್ ಫೌಂಡೇಶನ್ ಯುಎಇ ಪ್ರತಿನಿಧಿ ಹನೀಫ್ ಅರಿಯಮೂಲೆ, ಹಾಯ್ ಪುತ್ತೂರು ಪತ್ರಿಕೆಯ ಸಂಪಾದಕ ಹಮೀದ್ ಕಂದಕ್, ರಹ್ಮಾ ರಿಲೀಫ್ ಸೆಲ್ ಕನ್ವೀನರ್ ಅಬ್ದುಲ್ ಹಮೀದ್ ಹಾಜಿ ಅಡ್ಯನಡ್ಕ, ಖುವ್ವತುಲ್ ಇಸ್ಲಾಂ ಮದರಸದ ಅಧ್ಯಾಪಕ ಶಾಜಹಾನ್ ಅಝ್ಹರಿ ಉಪಸ್ಥಿತರಿದ್ದರು.

ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು. ಸುಮಾರು ಮೂವತ್ತೈದು ಯುನಿಟ್ ರಕ್ತ ಸಂಗ್ರಹಿಸಲಾಯಿತು. ರಹ್ಮಾ ರಿಲೀಫ್ ಸೆಲ್ ಪ್ರವರ್ತಕ ಆದಂ ಝಿಯಾದ್ ಅಡ್ಯನಡ್ಕ ಸ್ವಾಗತಿಸಿ ವಂದಿಸಿದರು. ಬ್ಲಡ್ ಹೆಲ್ಪ್ ಕೇರ್ ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಕಾರ್ಯಕ್ರಮ ನಿರೂಪಿಸಿದರು. ರಹ್ಮಾ ರಿಲೀಫ್ ಸೆಲ್ ಸದಸ್ಯರಾದ ಇರ್ಷಾದ್, ಫಾರೂಕ್, ಹರ್ಷಾದ್, ಜಲೀಲ್, ಅಸ್ಫಾಕ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರಾದ ಸಫ್ವಾನ್ ಕಲಾಯಿ, ಮುಸ್ತಫಾ ಕೆ.ಸಿ ರೋಡ್, ಸಿರಾಜ್ ಉಳಾಯಿಬೆಟ್ಟು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.