ಮಂಗಳೂರಿನಲ್ಲಿ ಮನೆ ಮೇಲೆ ಕುಸಿದ ತಡೆಗೋಡೆ! ಕಡಬ ನೂಜಿಬಾಳ್ತಿಲದ ಮಕ್ಕಳಿಬ್ಬರ ದುರ್ಮರಣ

Puttur_Advt_NewsUnder_1
Puttur_Advt_NewsUnder_1
  • ಮೃತದೇಹ ಸಂಜೆಯ ವೇಳೆ ನೂಜಿಬಾಳ್ತಿಲಕ್ಕೆ – ಮುಗಿಲು ಮುಟ್ಟಿದ ಆಕ್ರಂದನ

ಕಡಬ: ಮಂಗಳೂರಿನ ಪಡಿಲ್ ಎಂಬಲ್ಲಿ ಮನೆ ಮೇಲೆ ತಡೆ ಗೋಡೆ ಕುಸಿದ ಪರಿಣಾಮವಾಗಿ ಮನೆಯಲ್ಲಿ ವಾಸವಾಗಿದ್ದ ನೂಜಿಬಾಳ್ತಿಲದ ರಾಮಣ್ಣ ಗೌಡ ಎಂಬವರ ಮಕ್ಕಳಿಬ್ಬರು ದುರ್ಮರಣಕ್ಕೀಡಾದ ಘಟನೆ ಸೆ.8ರಂದು ರಾತ್ರಿ ನಡೆದಿದೆ.

ಮಂಗಳೂರು ಪಡಿಲ್ ಬಳಿಯ ಕೊಡಕ್ಕಲ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನೂಜಿಬಾಳ್ತಿಲ ಗ್ರಾಮದ ಅಡೆಂಜ ಎಂಬಲ್ಲಿನ ರಾಮಣ್ಣ ಗೌಡ ರಜನಿ ದಂಪತಿಯ ಪುತ್ರಿ ವರ್ಷಿಣಿ(9ವ.) ಹಾಗೂ ವೇದಾಂತ್(7ವ.) ಮೃತಪಟ್ಟವರು. ರಾಮಣ್ಣ ಗೌಡರು ಸುಮಾರು 15 ವರ್ಷಗಳ ಹಿಂದೆ ಮಂಗಳೂರಿಗೆ ತೆರಳಿದ್ದು ಬಳಿಕ ಅಲ್ಲೆ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಮಣ್ಣ ಅವರು ಪಡಿಲ್‌ನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ರಾಮಣ್ಣ ಗೌಡರ ಪತ್ನಿ ಕಂಕನಾಡಿ ರೈಲು ನಿಲ್ದಾಣದಲ್ಲಿ ಸ್ವಚ್ಚತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ನಾಗುರಿ ಸಮೀಪದ ಖಾಸಗಿ ಶಾಲೆಯಲ್ಲಿ ವರ್ಷಿಣಿ 4ನೇ ತರಗತಿ ಹಾಗೂ ವೇದಂತ್ 2ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಇಂದು ಪರೀಕ್ಷೆ ಇರುವ ಹಿನ್ನಲೆಯಲ್ಲಿ ಮಕ್ಕಳಿಬ್ಬರೂ ಕೊಣೆಯಲ್ಲಿ ಓದುತ್ತಿದ್ದರು, ಇದೇ ವೇಳೆ ಹೆತ್ತವರು ಇನ್ನೊಂದು ಕೊಣೆಯಲ್ಲಿ ಇದ್ದ ಕಾರಣ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ.

ಇಂದು(ಸೆ.9 ರಂದು) ನೂಜಿಬಾಳ್ತಿಲಕ್ಕೆ ಮಕ್ಕಳ ಮೃತದೇಹ
ಮಂಗಳೂರಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಅವರು ಓದುತ್ತಿದ್ದ ಶಾಲೆಯಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಅಂತ್ಯಸಂಸ್ಕಾರ:
ಮೃತದೇಹವನ್ನು ನೂಜಿಬಾಳ್ತಿಲದಲ್ಲಿರುವ ಮನೆಗೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.