Home_Page_Advt
Home_Page_Advt
Home_Page_Advt
Home_Page_Advt
Breaking News

ಬಸ್ ನಿಲ್ದಾಣದೊಳಗೆ ಪ್ರಯಾಣಿಕರ ಮೊಬೈಲ್ ಕಳ್ಳತನ!

ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರೋರ್ವರ ಬ್ಯಾಗ್‌ನಿಂದ ಮೊಬೈಲ್ ಕಳವು ಮಾಡಿದ ಘಟನೆ ಸೆ.9ರಂದು ಸಂಜೆ ನಡೆದಿದ್ದು, ಆರೋಪಿಯನ್ನು ಸೆ.10ರಂದು ಪೋಳ್ಯ ಸಮೀಪ ಬಂಧಿಸಿದ್ದಾರೆ.

ಮೂಲತಃ ಕುರಿಯ ಪಡ್ಪು ಮನೆ ನಿವಾಸಿಯಾಗಿದ್ದು, ಪ್ರಸ್ತುತ ಕಾಸರಗೋಡು ಎಣ್ಮಕಜೆ ಅಡ್ಕಸ್ಥಳ ನಿವಾಸಿ ಉಮೈದ್(24ವ) ಬಂಧಿತ ಆರೋಪಿ. ಪುತ್ತೂರಿನ ಬ್ಯೂಟಿಪಾರ್ಲರ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಪುಷ್ಪಲತಾ(37ವ)ರವರ ಬ್ಯಾಗ್‌ನಿಂದ ಮೊಬೈಲ್ ಕಳವಾಗಿದೆ. ಪುಷ್ಪಲತಾ ಅವರು ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಲು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳಗೆ ತನ್ನ ಸ್ನೇಹಿತೆಯೊಂದಿಗೆ ನಿಂತಿದ್ದ ವೇಳೆ ಹಿಂದಿನಿಂದ ಬಂದ ಕಳ್ಳ ಅವರ ಬ್ಯಾಗ್‌ನಲ್ಲಿದ್ದ ಮೊಬೈಲ್ ಪೋನ್ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪುಷ್ಪಲತಾ ಅವರು ನನ್ನ ಬ್ಯಾಗ್‌ನಲ್ಲಿದ್ದ ಒಪ್ಪೋ ಕಂಪೆನಿಯ ರೂ. 11,990 ಮೌಲ್ಯದ ಮೊಬೈಲ್ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಹುಟುಕಾಟ ನಡೆಸಿ ಆರೋಪಿಯನ್ನು ಸೆ.೧೦ರಂದು ಪೋಳ್ಯ ಸಮೀಪ ಬಂಧಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.