Home_Page_Advt
Home_Page_Advt
Home_Page_Advt
Home_Page_Advt
Breaking News

ಹಳೆನೇರೆಂಕಿ: ಇಲಿಜ್ವರದಿಂದ ಯುವಕ ಅನೀಶ್ ನಿಧನ


ಪುತ್ತೂರು: ಹಳೆನೇರೆಂಕಿ ಗ್ರಾಮದ ಕುಕ್ಕೆಜಾಲು ನಿವಾಸಿ ಅನೀಶ್ ಕೆ.,(28ವ.)ಎಂಬವರು ಇಲಿಜ್ವರದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕುಕ್ಕೇಜಾಲು ನಿವಾಸಿ ಕುಂಞ ಮುಗೇರ ಎಂಬವರ ಪುತ್ರ ಅನೀಶ್ ಕೆ.,ರವರು ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧಿಸಿದ ಕರಕುಶಲ ವಸ್ತುಗಳ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಸೆ.5ರಂದು ಅವರಿಗೆ ದಿಢೀರ್ ಆಗಿ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೆ.6ರಂದು ಮಧ್ಯಾಹ್ನದ ವೇಳೆಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಅನೀಶ್‌ರವರು ಇಲಿಜ್ವರ ಉಲ್ಬಣಗೊಂಡು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಮೃತ ಅನೀಶ್‌ರವರ ಸಹೋದರ ಕೃಷ್ಣರವರು ತಿಳಿಸಿದ್ದಾರೆ. ಮೃತರು ತಂದೆ ಕುಂಞ ಮುಗೇರ, ಸಹೋದರರಾದ ಕೃಷ್ಣ, ಪ್ರಸಾದ್, ಗಿರಿಯಪ್ಪ, ಸಹೋದರ ಅಕ್ಷತಾ, ಬಾವ ರಾಮಕುಂಜ ಗ್ರಾ.ಪಂ.ನ ಸಿಬ್ಬಂದಿ ಮಾಧವರನ್ನು ಅಗಲಿದ್ದಾರೆ. ಮೃತರ ಮನೆಗೆ ತಾ.ಪಂ.ಸದಸ್ಯೆ ತೇಜಸ್ವಿನಿಶೇಖರ ಗೌಡ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಪ್ರಶಾಂತ್ ಆರ್.ಕೆ., ಮಾಜಿ ಅಧ್ಯಕ್ಷ ಶೇಖರ ಗೌಡ ಹಿರಿಂಜ, ಸದಸ್ಯ ಅವಿನಾಶ್, ಪ್ರಮುಖರಾದ ಭಾಸ್ಕರ ಗೌಡ ಹಿರಿಂಜ ಸೇರಿದಂತೆ ಹಲವು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.