Home_Page_Advt
Home_Page_Advt
Home_Page_Advt
Breaking News

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೦೧೮-೧೯ನೇ ಸಾಲಿನ ಆಡಿಟ್ ನಡೆದು ಸತತ ೧೭ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ರೂ ೨೩೪.೮೩ ಕೋಟಿ ವ್ಯವಹಾರ ನಡೆಸಿ, ೯೯.೨೦ ಶೇಕಡಾ ಸಾಲ ವಸೂಲಾತಿಯೊಂದಿಗೆ ರೂ.೭೨.೧೯ ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯರವರು ಹೇಳಿದರು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಸ್ ಸಹಯೋಗದೊಂದಿಗೆ ಅಡಿಕೆ ಖರೀದಿ: ಮಾಸ್ ಲಿ.ಮಂಗಳೂರು ಇವರ ಸಹಯೋಗದೊಂದಿಗೆ ವರದಿ ಸಾಲಿನಲ್ಲಿ ರೈತರಿಂದ ರೂ.೩.೯೬ ಕೋಟಿ ಮೌಲ್ಯದ ಅಡಿಕೆ ಖರೀದಿ ವ್ಯವಹಾರ ಮಾಡಲಾಗಿದೆ. ಬ್ಯಾಂಕಿಂಗ್ ವ್ಯವಹಾರದೊಂದಿಗೆ ಪಡಿತರ ವಿತರಣೆ ಮತ್ತು ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಲಾಗುತ್ತಿದೆ ಎಂದು ಗಣೇಶ್ ನಿಡ್ವಣ್ಣಾಯರವರು ಹೇಳಿದರು.

ಅಡಿಕೆಯೊಂದಿಗೆ ಇತರ ಕೃಷಿಯನ್ನು ಮಾಡಿ: ರೈತರು ಅಡಿಕೆಯೊಂದೇ ಕೃಷಿಯನ್ನು ಮಾಡದೇ ಇತರ ಕೃಷಿಯನ್ನು ಮಾಡಬೇಕು, ಕಾಳು ಮೆಣಸು, ವೆನಿಲ್ಲಾ ಕೃಷಿಯತ್ತ ಮುಖ ಮಾಡಬೇಕು ಎಂದು ಗಣೇಶ್ ನಿಡ್ವಣ್ಣಾಯರವರು ಹೇಳಿದರು. ಜೊತೆಗೆ ಸಾವಯುವ ಕೃಷಿಯತ್ತ ಹೆಚ್ಚು ಒಲವು ತೋರಬೇಕು, ಸವಣೂರಿನಲ್ಲಿ ಸಾವಯವ ತರಕಾರಿ ಮಾರಾಟ ಮಾಡುವುದಾದರೆ ಸೊಸೈಟಿಯ ಅವರಣದಲ್ಲಿ ವಾರದಲ್ಲಿ ಒಂದು ದಿವಸ ಸಾವಯವ ಸಂತೆಗೆ ಅವಕಾಶ ನೀಡುವುದಾಗಿ ಗಣೇಶ್ ನಿಡ್ವಣ್ಣಾಯರವರು ಹೇಳಿದರು.

ಸವಣೂರಿನಲ್ಲಿ ಸೊಸೈಟಿಗೆ ವಿಸ್ತೃತ ಕಟ್ಟಡ ನಿರ್ಮಾಣ: ಸವಣೂರು ಮುಖ್ಯ ಶಾಖೆಯಲ್ಲಿ ಈಗ ಇರುವ ಸಂಘದ ಹಳೆಯ ಕಟ್ಟಡವನ್ನು ತೆರೆವುಗೊಳಿಸಿ, ಹೊಸದಾಗಿ ಕಟ್ಟಡವನ್ನು ನಿರ್ಮಿಸುವ ಯೋಜನೆ ಇದ್ದು, ಸದಸ್ಯರುಗಳು ಪೂರ್ಣ ಸಹಕಾರವನ್ನು ನೀಡುವಂತೆ ಅಧ್ಯಕ್ಷರು ವಿನಂತಿಸಿದರು.

ಮುಂದಿನ ವರ್ಷ ಒಂದು ಕೋಟಿ ಲಾಭ ಮಾಡುತ್ತೇವೆ: ಸವಣೂರು ಸೊಸೈಟಿಯು ಉತ್ತಮ ಪ್ರಗತಿಯನ್ನು ಸಾಧಿಸುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ರೈತರಿಗೆ ಹೆಚ್ಚು ಡಿವಿಡೆಂಡ್ ನೀಡಿ ಎಂದು ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಸಲಹೆ ನೀಡಿದಾಗ, ಮಾತನಾಡಿದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್‌ರವರು ಮುಂದಿನ ವರ್ಷ ಒಂದು ಕೋಟಿ ರೂ. ಲಾಭದತ್ತ ಹೆಜ್ಜೆ ಇಡುತ್ತೇವೆ, ಅಗ ಹೆಚ್ಚು ಡಿವಿಡೆಂಡ್ ದೊರೆಯುತ್ತದೆ. ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ: ೨೦೧೮-೧೯ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಅಖಿಲಾ ಕೆಡೆಂಜಿ, ಫಾತಿಮತ್ ಸಂಬ್ರೀನಾ ಕಾಯರ್ಗ, ಶ್ರೀಶ ಉಳವ, ರಾಮಶ್ರೀನಿಧಿ, ವರ್ಷ ರೈ, ಅಕ್ಷರ ಅಭಿಕಾರ್, ಶ್ರದ್ಧಾ ಎನ್.ಕೆ, ಬಿಂದುಶ್ರೀ, ಭಾಗ್ಯ ಕೆ, ಅಖಿಲ್, ಪಿಯುಸಿ ವಿದ್ಯಾರ್ಥಿಗಳಾದ ಜ್ಯೋತಿ, ಆರೀಫ್, ದೀಪಶ್ರೀ, ನವ್ಯ ರೈ, ಪಾವನಾ ಕೆ.ಬಿ, ರಾಜೇಶ್ವರಿ, ಅನುಶ್ರೀ, ಶಾನ್ಯ ಪಿ.ಶೆಟ್ಟಿ, ಪದವಿ ವಿದ್ಯಾರ್ಥಿಗಳಾದ ನಿತ್ಯ, ಯಶೋಧರ್, ಫಾತಿಮತ್ ಅಶೂರ, ಮರಿಯಮ್ ಮುಬೀನರವರುಗಳಿಗೆ ಸಂಘದ ವತಿಯಿಂದ ಗೌರವಿಸಿ, ನಗದು ಹಣದೊಂದಿಗೆ ಪುರಸ್ಕಾರ ಮಾಡಲಾಯಿತು.

ಉದಯ ರೈ ಮಾದೋಡಿ – ದಿನೇಶ್ ಮೆದುರವರಿಗೆ ಸನ್ಮಾನ: ಕರ್ನಾಟಕ ರಾಜ್ಯ ಗ್ರಾಹಕ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಉದಯ ರೈ ಮಾದೋಡಿ ಹಾಗೂ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿ, ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಡಿ.ಎಲ್.ಗಾಂಭೀರ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ ರೈ ಖಂಡಿಗ, ಸುದರ್ಶನ್ ನಾಕ್ ಕಂಪ, ಶೀನಪ್ಪ ಗೌಡ ಬೈತಡ್ಕ, ರಾಕೇಶ್ ರೈ ಕೆಡೆಂಜಿ, ಕೆ.ಟಿ.ಭಟ್ ಸರ್ವೆ, ಪದ್ಮಯ್ಯ ಗೌಡ ಕರಂದ್ಲಾಜೆ, ಪ್ರಕಾಶ್‌ಚಂದ್ರ ರೈ ಕುಂಜಾಡಿ, ಲೋಕನಾಥ ಬೆಳಂದೂರುರವರುಗಳು ಸಲಹೆ-ಸೂಚನೆ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಕರುಣಾಕರ ಪೂಜಾರಿ ಪಟ್ಟೆ, ಮಹಾಬಲ ಶೆಟ್ಟಿ ಕೊಮ್ಮಂಡ, ತಿಮ್ಮಪ್ಪ ಗೌಡ ಮುಂಡಾಳ, ಚೇತನ್ ಕುಮಾರ್ ಕೋಡಿಬೈಲು, ಸೋಮನಾಥ ಕನ್ಯಾಮಂಗಲ, ತನಿಯಪ್ಪ ನಾಯ್ಕ ಕಾರ್ಲಾಡಿ, ನಾರಾಯಣ ಗೌಡ ಪೂವ, ವೇದಾವತಿ ಕೆಡೆಂಜಿ, ನಿರ್ಮಲ ಕೇಶವ ಅಮೈರವರುಗಳು ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ನಿರ್ದೇಶಕ ಉದಯ ರೈ ಮಾದೋಡಿರವರು ಮಾತನಾಡಿ ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ನಿರ್ದೇಶಕನಾಗಿ ಬಳಿಕ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ದೊರೆಯಿತು. ಇದೀಗ ದ,ಕ,ಜಿಲ್ಲೆಯ ಜನತಾ ಜಜಾರ್ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಗ್ರಾಹಕರ ಮಹಾಮಂಡಲದ ನಿರ್ದೇಶಕನಾಗಿ ಕಾರ್‍ಯನಿರ್ವಹಿಸುವ ಅವಕಾಶ ದೊರೆತಿರುವುದು ನಿಮ್ಮಲ್ಲರ ಆಶೀರ್ವಾದವೇ ಕಾರಣ ಎಂದರು.

ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸ್ವಾಗತಿಸಿ, ಉಪಾಧ್ಯಕ್ಷ ತಾರಾನಾಥ ಕಾಯರ್ಗ ವಂದಿಸಿದರು. ಉಪ ಕಾರ್‍ಯನಿರ್ವಹಣಾಧಿಕರಿ ಕುಸುಮ ಪಿ.ಶೆಟ್ಟಿ ವರದಿ ವಾಚಿಸಿದರು. ಸಿಬ್ಬಂಧಿಗಳಾದ ಜಲಜ ಎಚ್ ರೈ, ಪವಿತ್ರ, ಪ್ರೇಮಾರವರುಗಳು ಪ್ರಾರ್ಥನೆಗೈದರು. ಶಾಖಾ ವ್ಯವಸ್ಥಾಪಕಿ ಬೇಬಿ ಜೆ ರೈ, ಸಿಬ್ಬಂಧಿಗಳಾದ ಪಕೀರ, ಕೇಪು, ಲೇಖಲತಾ. ಪೂವಪ್ಪ, ಗಣೇಶ್, ಮನೋಜ್, ಪ್ರಕಾಶ್, ಸಂಘದ ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ, ವಿಶ್ವನಾಥ ಗೌಡರವರುಗಳು ವಿವಿಧ ಕಾರ್‍ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.