Home_Page_Advt
Home_Page_Advt
Home_Page_Advt

ಸೆ. 12: ಕಡಬದಲ್ಲಿ ಒಕ್ಕಲಿಗ ಗೌಡ ಸಮುದಾಯ ಮತ್ತು ಜಾತ್ಯಾತೀತ ಸಾರ್ವಜನಿಕ ಅಭಿಮಾನಿ ಬಳಗದ ನೇತೃತ್ವದಲ್ಲಿ ಡಿ.ಕೆ.ಶಿ ಬಂಧನದ ವಿರುದ್ಧ ಬೃಹತ್ ಪ್ರತಿಭಟನೆ

  • ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ

ಕಡಬ : ಕರ್ನಾಟಕ ರಾಜ್ಯದ ಬೃಹತ್ ಉದ್ಯಮಿ ಪ್ರತಿಷ್ಠಿತ ರಾಜಕಾರಣಿ ಡಿ.ಕೆ ಶಿವಕುಮಾರ್‌ರನ್ನು ವಿನಾಕಾರಣ ಇಡಿ ಮೂಲಕ ಬಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸೆ.12ರಂದು ಕಡಬ ತಾಲೂಕು ಒಕ್ಕಲಿಗ ಗೌಡ ಸಮುದಾಯ ಮತ್ತು ಜಾತ್ಯಾತೀತ ಸಾರ್ವಜನಿಕ ಅಭಿಮಾನಿ ಬಳಗದವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ವಿವಿಧ ಪಕ್ಷದವರು ರಾಜಕೀಯ ರಹಿತವಾಗಿ ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಗುವುದುದೆಂದು ಸೋಮಸುಂದರ್ ಕೂಜಿಗೋಡು ತಿಳಿಸಿದ್ದಾರೆ.

ಕಡಬ ಒಕ್ಕಲಿಗ ಗೌಡ ಸಭಾಭವನದಲ್ಲಿ ಸೆ. 10ರಂದು ನಡೆದ ಪೂರ್ವಭಾವಿ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮಸುಂದರ್‌ರವರು ಯಾವುಧೇ ಪಕ್ಷವಿರಲಿ, ಯಾರೇ ಅಧಿಕಾರದಲ್ಲಿರಲಿ ಸುಖಾ ಸುಮ್ಮನೆ ಡಿ.ಕೆ ಶಿವಕುಮಾರ್‌ರಂತಹ ನಾಯಕರನ್ನು ದಮನಿಸಲು ನಾವು ಬಿಡುವುದಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸಲೇಬೇಕಾಗಿದೆ. ಅದಕ್ಕೆ ಬೇಕಾಗಿ  ಸೆ.12ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದ್ದು ನಾವು ಕಡಬ ತಾಲೂಕಿಗೆ ಸಂಬಂದಪಟ್ಟ ಪ್ರತಿ ಗ್ರಾಮದಿಂದ ಒಕ್ಕಲಿಗ ಗೌಡರು ಸೇರಿದಂತೆ ಎಲ್ಲಾ ಜಾತಿ ಧರ್ಮದವರು ಪಕ್ಷ ಬೇಧ ಮರೆತು ಅನ್ಯಾಯದ ವಿರುದ್ದ ಪ್ರತಿಭಟಿಸಲ್ಲಿಸಿದ್ದೇವೆ ಎಂದ ಅವರು ಎಲ್ಲಾರು ಕೈಜೋಡಿಸಬೇಕೆಂದರು.

ಕಡಬ ಒಕ್ಕಲಿಗ ಗೌಡ ಸಂಘದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲ್ ಮಾತನಾಡಿ ಒಬ್ಬ ಪ್ರಬಲ ರಾಜಕಾರಣಿಯಾಗಿ ಬೆಳೆಯುತ್ತಿರುವ ಡಿ.ಕೆ ಶಿವಕುಮಾರ್‌ರನ್ನು ಬಂಧಿಸಿ ಅವರ ಹುಟ್ಟು ಅಡಗಿಸಿದರೆ ಮತ್ತೆ ನಮಗೆ ಈ ರಾಜ್ಯ ಹಾಗೂ ದೇಶದಲ್ಲಿ ಸಮಗ್ರ ಎದುರಾಳಿಗಳೇ ಇಲ್ಲದೆ ಆರಾಮವಾಗಿರಬಹುದೆಂದು ಭಾವಿಸಿ ನಿಷ್ಠಾವಂತ ಪ್ರಾಮಾಣಿಕ ರಾಜಕೀಯ, ಮುತ್ಸದಿ ನಾಯಕ ಡಿ.ಕೆ ಶಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಇಡಿ ಮೂಲಕ ಬಂಧಿಸಿದ್ದು ಕುತಂತ್ರ ರಾಜಕೀಯ ಮಾಡಲು ಹೊರಟಿದೆ .ಇದು ಖಂಡಿತಾ ಸಾಧ್ಯವಿಲ್ಲ ಇದರ ವಿರುದ್ದ ನಾವು ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.

ಕಡಬ ಒಕ್ಕಲಿಗ ಗೌಡ ಸಮುದಾಯದ ಹಿರಿಯರಾದ ಜನಾರ್ಧನ ಗೌಡ ಪಣೆಮಜಲು ಮಾತನಾಡಿ ನಮ್ಮ ಒಬ್ಬ ಜಾತಿ ಬಾಂದವರನ್ನು ರಾಜಕೀಯ ದ್ವೇಷದಿಂದ ಬಂದಿಸಿ ಮಲತಾಯಿ ಧೋರಣೆಯಿಂದ ದಮನಿಸಲು ಯತ್ನಿಸುತ್ತಿರುವ ಷಡ್ಯಂತರ ವಿರುದ್ದ ಪ್ರಬಲವಾಗಿ ಪ್ರತಿಭಟಿಸಲಿದ್ದೇವೆ ಎಂದರು.

ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಯಂ.ಎಸ್ ಮಾತನಾಡಿ ಡಿ.ಕೆ.ಶಿಯಂತಹ ಪ್ರಬಲ ನಾಯಕನನ್ನು ಇಡಿಯಂತಹ ಇಲಾಖೆಯಿಂದ ಸುಖಾ ಸುಮ್ಮನೆ ಬಂದಿಸಿ ಚಿತ್ರ ಹಿಂಸೆ ನೀಡಿದಲ್ಲದೆ ನಿರಂತರ ಸತಾಯಿಸುತ್ತಿರುವ ಬಗ್ಗೆ ಇಡೀ ನಮ್ಮ ಗೌಡ ಸಮುದಾಯದೊಂದಿಗೆ ಎಲ್ಲರನ್ನು ಸೇರಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಸುಬ್ರಹ್ಮಣ್ಯ ದಿನೇಶ್ ಮಾಸ್ಟ್ರು ಮಾತನಾಡಿ ನ್ಯಾಯದ ಪರವಾಗಿ ನಾವು ಯಾವಾಗಲೂ ಇದ್ದೇವೆ ಎಂದರು.
ನಿವೃತ್ತ ಪ್ರಾಶುಂಪಾಲರಾದ ತಿಲಕ್‌ರವರು ಮಾತನಾಡಿ ಡಿ.ಕೆ.ಶಿ ಬಂದನದ ವಿರುದ್ದ ಸೆ. 12ರಂದು ಅಪರಾಹ್ನ ಕಡಬದಲ್ಲಿ ಸಾವಿರಾರು ಸಾರ್ವಜನಿಕರೊಂದಿಗೆ ಪ್ರತಿಭಟಿಸಲಾಗುವುದು ಎಂದರು.
ಕಡಬ ಗ್ರಾ.ಪಂ ಮಾಜಿ ಸದಸ್ಯ ಗೌಡ ಸಮುದಾಯದ ಮುಖಂಡ ನಾರಾಯಣ ಗೌಡ ಆಲಂಗೂರು, ಹರಿಪ್ರಸಾದ್ ಎನ್ಕಾಜೆ, ವಾಸುದೇವ ಕೋಡಿ, ಲಿಂಗಪ್ಪ ಗೌಡ ಕೆರೆಮುದೆಲು, ವಿಶ್ವನಾಥ ಕಡಬ ಮೊದಲಾದವರು ಉಪಸ್ಥಿತರಿದ್ದರು. ತಿಲಕ್ ಸುಬ್ರಹ್ಮಣ್ಯ ಸ್ವಾಗತಿಸಿ, ನಾರಾಯಣ ಗೌಡ ಅಲುಂಗೂರು ವಂದಿಸಿದರು

ಒಕ್ಕಲಿಗ ಗೌಡ ಸಮುದಾಯದಿಂದ ಡಿ.ಕೆ ಶಿವಕುಮಾರ್ ಬಂಧನದ ವಿರುದ್ಧ ನಡೆಯುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲಸಯ್ಯದ್ ಮೀರಾ ಸಾಹೇಬ್

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಜನರ ಸೇವೆಯಿಂದ ಗ್ರಾಮ, ತಾಲೂಕು , ಜಿಲ್ಲಾ ,ರಾಜ್ಯ ಮಟ್ಟದಲ್ಲಿ ಬೆಳೆದು ರಾಷ್ಟ್ರಮಟ್ಟದ ನಾಯಕರಾಗಿರುವ ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕ್ಷೇತ್ರದಲ್ಲಿ ಗಣನೀಯ ಸಾಧನೆ ಗೈಯುತ್ತಿರುವ ರಾಜಕೀಯ ಮುತ್ಸದಿ ನಾಯಕನನ್ನು ರಾಜಕೀಯವಾಗಿ ದಮನಿಸಲು ನಡೆಯುತ್ತಿರುವ ಷಡ್ಯಂತರ ವಿರುದ್ದ ಸೆ. 12ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು ಕಡಬ ತಾಲೂಕು ಕೇಂದ್ರದಲ್ಲೂ ಒಕ್ಕಲಿಗ ಗೌಡ ಸಮುದಾಯದ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ.
ಸಯ್ಯದ್ ಮೀರಾ ಸಾಹೇಬ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.