Home_Page_Advt
Home_Page_Advt
Home_Page_Advt
Home_Page_Advt
Breaking News

ನಿಡ್ಪಳ್ಳಿ: ಪತ್ತೆಯಾಗದ ಪಕೀರ ನಾಯ್ಕ- ಸ್ಥಗಿತ ಗೊಳಿಸಿದ ಶೋಧ ಕಾರ್ಯಾಚರಣೆ

ನಿಡ್ಪಳ್ಳಿ: ಒಳಮೊಗ್ರು ಗ್ರಾಮದ ಅಜಲಡ್ಕ ನಿವಾಸಿ ಕೂಲಿ ಕಾರ್ಮಿಕ ಪಕೀರ ಯಾನೆ ಪುರಂದರ ನಾಯ್ಕ ಎಂಬವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ಕನೇ ದಿನವೂ  ಶೋಧ ಕಾರ್ಯಾಚರಣೆ ಮುಂದುವರಿಸಿದ ಎನ್.ಡಿ.ಅರ್.ಎಫ್ ತಂಡ ಯಾವುದೇ ಸುಳಿವು ಸಿಗದೆ ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಿ ಮಂಗಳೂರಿಗೆ ವಾಪಾಸಾದರು.

ಎನ್.ಡಿ.ಅರ್.ಎಫ್ ಮಂಗಳೂರು ತಂಡ ಬಾಕಿತ್ತಿಮಾರು, ಅನಾಜೆ  ವ್ಯಾಪ್ತಿಯ ನದಿಯಲ್ಲಿ  ಶೋಧ ಕಾರ್ಯ ನಡೆಸಿದರು. ಬಹಳ ಪರಿಶ್ರಮ ಪಟ್ಟು ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ತಹಶೀಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ,  ಬೆಟ್ಟಂಪಾಡಿ ಗ್ರಾಮ ಕರಣಿಕ ಕನಕರಾಜ್, ನಿಡ್ಪಳ್ಳಿ ಗ್ರಾಮ ಕರಣಿಕ ಜಂಗಪ್ಪ ಮತ್ತು ಸಹಾಯಕ ವಿಜಯ ಪಾರ ಹಾಗೂ ಸಂಪ್ಯ ಪೊಲೀಸ್‌ ಠಾಣಾಧಿಕಾರಿ ಸತ್ತಿವೇಲು ಮತ್ತು ಸಿಬ್ಬಂದಿಗಳು ಭೇಟಿ ಪರಿಸ್ಥಿತಿ ಅವಲೋಕಿಸಿದರು.ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ, ಕೃಷ್ಣ ರೈ ಸೇರ್ತಾಜೆ ಸಹಿತ ಹಲವರು ಸ್ಥಳಕ್ಕೆ ಅಗಮಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.