Home_Page_Advt
Home_Page_Advt
Home_Page_Advt
Home_Page_Advt
Breaking News

ಕೆಯ್ಯೂರು ಶ್ರೀ ದೇವಿ ಸಂಕೀರ್ಣದಲ್ಲಿ ಹೊಟೇಲ್ ಐಶ್ವರ್ಯ ಶುಭಾರಂಭ

ಪುತ್ತೂರು: ಕಾವು ಮೇಲಿನ ಪೇಟೆಯಲ್ಲಿ ಕಳೆದ 14 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಹೊಟೇಲ್ ಶ್ರೀ ದುರ್ಗಾದ ಸಹಸಂಸ್ಥೆ ಹೊಟೇಲ್ ಐಶ್ವರ್ಯ ಸೆ.11 ರಂದು ಕೆಯ್ಯೂರು ಶ್ರೀ ದುರ್ಗಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಬಿ.ಜಯರಾಮ ರೈಯವರು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸುವ ಮೂಲಕ ಹೊಟೇಲ್ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಕೆಯ್ಯೂರು ಪೇಟೆಗೆ ಸುಸಜ್ಜಿತವಾದ ಹೊಟೇಲ್‌ನ ಅವಶ್ಯಕತೆ ಇತ್ತು ಅದನ್ನು ಐಶ್ವರ್ಯ ನೀಗಿಸಿದೆ. ಇಂತಹ ಹೊಟೇಲ್‌ನ ಅವಶ್ಯಕತೆ ತುಂಬಾ ಇದೆ. ಐಶ್ವರ್ಯ ಹೊಟೇಲ್ ಯಶಸ್ವಿನತ್ತ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಕೀರ್ಣದ ಮಾಲಕ ಡಾ.ಶಿವಪ್ರಸಾದ್ ಶೆಟ್ಟಿ, ಬಾಲಕೃಷ್ಣ ಅಲೆಪ್ಪಾಡಿ, ಗುಡ್ಡಪ್ಪ ರೈ ಕೋರಿಕ್ಕಾರ್, ದಾಮೋದರ ನಾಯ್ಕ ಕಾಪುತ್ತಡ್ಕ, ಮಹಾಲಿಂಗ ಶೆಟ್ಟಿ, ಶೃತಿಪ್ರಸಾದ್ ಶೆಟ್ಟಿ, ಚಂದ್ರಹಾಸ ರೈ ಕೊಡಂಕೀರಿ, ಶರತ್ ಕುಮಾರ್ ಮಾಡಾವು, ಕೆಯ್ಯೂರು ಗ್ರಾಪಂ ಅಧ್ಯಕ್ಷ ಬಾಬು.ಬಿ, ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಕೆ.ಎಂ, ಶಿವಕೃಪಾ ಶಾಮೀಯಾನದ ಚಂದ್ರಹಾಸ ಆಳ್ವ ಸಹಿತ ನೂರಾರು ಮಂದಿ ಆಗಮಿಸಿ ಶುಭ ಹಾರೈಸಿದರು.

ಹೊಟೇಲ್ ಪಾಲುದಾರರಾದ ಕರ್ನೂರು ಮೂರ್ತಿಮಾರು ನಡುಮನೆಯ ರವೀಂದ್ರ ರೈ, ಸರೋಜಿನಿ ಆರ್.ರೈ ಮತ್ತು ಗಣೇಶ್ ರೈರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಗ್ರಾಹಕರ ಸಹಕಾರ ಕೋರಿದರು.

ಐಶ್ವರ್ಯದ ಸ್ಪೇಷಲ್ ಫುಡ್
ಹೊಟೇಲ್ ಐಶ್ವರ್ಯದಲ್ಲಿ ಚಹಾ, ಕಾಫಿ, ತಿಂಡಿ, ಊಟ ಸಹಿತ ಕೋಳಿರೊಟ್ಟಿ, ಬಿರಿಯಾನಿ, ಗೀ ರೈಸ್, ಚಿಕನ್ ಐಟಂ, ತಂದೂರಿ, ಚೈನೀಸ್ ಮತ್ತು ಸ್ಪೆಷಲ್ ಮೀನಿನ ಖಾದ್ಯಗಳು ಮತ್ತು ಫ್ರೆಶ್ ಜ್ಯೂಸ್ ಲಭ್ಯವಿದೆ. ಆರಾಮವಾಗಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯೊಂದಿಗೆ ವಿಶೇಷವಾಗಿ ಪ್ಯಾಮಿಲಿ ಕೌಂಟರ್ ವ್ಯವಸ್ಥೆಯೂ ಇದೆ.

ಕ್ಯಾಟರಿಂಗ್ ವ್ಯವಸ್ಥೆ ಇದೆ
ಐಶ್ವರ್ಯ ಹೊಟೇಲ್‌ನಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಇದ್ದು, ಮದುವೆ ಇನ್ನಿತರ ಸಮಾರಂಭಗಳಿಗೆ ಇಡ್ಲಿ, ಸೇಮಿಗೆ ಹಾಗೂ ಇನ್ನಿತರ ಊಟ ಉಪಹಾರಗಳ ಕ್ಯಾಟರಿಂಗ್ ವ್ಯವಸ್ಥೆ ಇದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.