Home_Page_Advt
Home_Page_Advt
Home_Page_Advt
Home_Page_Advt
Breaking News

ನೀರಕಟ್ಟೆ: ನೂರನಿಯ್ಯಾ ಮಸೀದಿ ಮಾಜಿ ಅಧ್ಯಕ್ಷ ಉಸ್ಮಾನ್ ನಿಧನ

ನೆಲ್ಯಾಡಿ: ಬಜತ್ತೂರು ಗ್ರಾಮದ ನೀರಕಟ್ಟೆ ನಿವಾಸಿ, ನೀರಕಟ್ಟೆ ನೂರಾನಿಯ್ಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಉಸ್ಮಾನ್(60ವ.)ರವರು ಅನಾರೋಗ್ಯದಿಂದ ಸೆ.8ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಉಮ್ಮರ್‌ರವರು ಪ್ರಣುದಾಸ್ ಕಿಶೋರ್‌ದಾಸ್ ಟೊಬೆಕೋ ಪ್ರೊಡಕ್ಟ್ ಕಂಪನಿಯ ಉಪ್ಪಿನಂಗಡಿ ಬ್ರಾಂಚ್‌ನಲ್ಲಿ ಸುಮಾರು 26ವರ್ಷಗಳ ಕಾಲ ಬೀಡಿ ಚಕ್ಕರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಕೆಲಸದಿಂದ ನಿವೃತ್ತಿ ಪಡೆದುಕೊಂಡು ಮನೆಯಲ್ಲಿಯೇ ಇದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಮನೆಗೆ ವಳಾಲು ಮುಹಿಯ್ಯುದ್ದೀನ್, ಜುಮಾ ಮಸೀದಿಯ ಖತೀಬ್ ಮಹಮ್ಮದ್ ಮಿಸ್ಬಾಹಿ, ಆಡಳಿತ ಮಂಡಳಿ ಕಾರ್ಯದರ್ಶಿ ಅಹ್ಮದ್ ಬಾವಾ ನೀರಕಟ್ಟೆ, ನೀರಕಟ್ಟೆ ನೂರನಿಯ್ಯ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಅಶ್ರಫ್, ಉಪಾಧ್ಯಕ್ಷ ಹಸನಬ್ಬ ಸೇರಿದಂತೆ ಹಲವು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.