Home_Page_Advt
Home_Page_Advt
Home_Page_Advt
Home_Page_Advt
Breaking News

ಕೊಕ್ಕಡ: ಎಂಡೋಪಾಲನಾ ಕೇಂದ್ರದ ನಿರ್ವಹಣೆ ಬಗ್ಗೆ ದೂರು- ಎಂಡೋವಿರೋಧಿ ಹೋರಾಟಗಾರರ ಪರಿಶೀಲನೆ

ನೆಲ್ಯಾಡಿ: ಕೊಕ್ಕಡ ಎಂಡೋಪಾಲನಾ ಕೇಂದ್ರದ ನಿರ್ವಹಣೆ ಬಗ್ಗೆ ಎಂಡೋ ಸಂತ್ರಸ್ತರ ಪೋಷಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಎಂಡೋ ವಿರೋಧಿ ಹೋರಾಟಗಾರರು ಹಾಗೂ ಪೋಷಕರರು ಸೆ.8ರಂದು ಸಂಜೆ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಂಡೋ ಸಂತ್ರಸ್ತರ ಬಗ್ಗೆ ಅಲ್ಲಿನ ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಎಂಡೋಪಾಲನಾ ಕೇಂದ್ರದ ನಿರ್ವಹಣೆಯ ಗುತ್ತಿಗೆಯನ್ನು ಸಿಯೋನ್ ಸಂಸ್ಥೆಯವರು ಪಡೆದುಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಸಂಸ್ಥೆಯ ಸಿಬ್ಬಂದಿಗಳು ಎಂಡೋ ಸಂತ್ರಸ್ತರನ್ನು ಸಂಜೆ ಮನೆಗೆ ಕಳಿಸುವ ಮೊದಲೇ ತೆರಳುತ್ತಿದ್ದು ಕೇವಲ ಮಹಿಳಾ ಸಿಬ್ಬಂದಿಯೋರ್ವರೇ ಕೇಂದ್ರವನ್ನು ಶುಚಿಯಾಗಿರಿಸುವ ಕೆಲಸ ನಿರ್ವಹಿಸುವುದರ ಜೊತೆಗೆ ಬುದ್ದಿಮಾಂದ್ಯ ಮಕ್ಕಳನ್ನೂ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲುರವರ ನೇತೃತ್ವದಲ್ಲಿ ಪೋಷಕರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಾಲನಾ ಕೇಂದ್ರದ ಸಿಬ್ಬಂದಿಗಳು ಎಂಡೋ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಈ ವೇಳೆ ಹೋರಾಟಗಾರರು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂಡೋಪಾಲನಾ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಒಮ್ಮೆ ಬಂದು ಪರಿಶೀಲಿಸಿ ಎಂದು ಎಂಡೋ ಸಂತ್ರಸ್ತ ಮಕ್ಕಳ ಪೋಷಕರು ಕೊಕ್ಕಡ ಗ್ರಾ.ಪಂ. ಕಾರ್ಯದರ್ಶಿಯವರಿಗೆ ಈ ವೇಳೆ ಮನವಿ ಮಾಡಿದರು. ಇಲ್ಲಿ ಪಿಡಿಒ ಇಲ್ಲ, ನನ್ನಲ್ಲಿ ಏನೂ ಹೇಳಬೇಡಿ ಎಂದು ಕಾರ್ಯದರ್ಶಿಯವರು ನೀಡಿರುವ ಉತ್ತರಕ್ಕೂ ಅಸಮಾಧಾನಗೊಂಡ ಎಂಡೋ ವಿರೋಧಿ ಹೋರಾಟಗಾರರು ಹಾಗೂ ಪೋಷಕರು ಕಾರ್ಯದರ್ಶಿಯವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ರಾಘವ ಭಂಡಾರಿ, ಪುರಂದರ ಗೌಡ ಕಡಿರ, ಜನಾರ್ದನ ಕೊಕ್ಕಡ, ನವೀನ್ ನೆರಿಯ, ಸೇಸಪ್ಪ ಗೌಡ ಕೊಕ್ಕಡ ಮತ್ತಿತರ ಎಂಡೋ ಪೋಷಕರು ಉಪಸ್ಥಿತರಿದ್ದರು.

ಉಪವಾಸ ಸತ್ಯಾಗ್ರಹದ ಎಚ್ಚರಿಕೆ:
ವಯಸ್ಕ ಬುದ್ದಿಮಾಂದ್ಯ ಮಕ್ಕಳ ಪಾಲನೆ ಬಗ್ಗೆ ನಿರ್ಲಕ್ಷ್ಯ ವಹಿಸಿ, ಕೇಂದ್ರದಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ನಡೆದಲ್ಲಿ ಯಾರು ಜವಾಬ್ದಾರಿ. ಪಾಲನಾ ಕೇಂದ್ರದ ಸಿಬ್ಬಂದಿಗಳು ಎಂಡೋ ಸಂತ್ರಸ್ತ ಮಕ್ಕಳೊಂದಿಗೆ ದುರ್ವರ್ತನೆ ತೋರುತ್ತಿರುವ ಬಗ್ಗೆಯೂ ಸಂದೇಹಗಳು ಬರುತ್ತಿವೆ. ಸೆ.14ರೊಳಗೆ ಈ ಬಗ್ಗೆ ಕ್ರಮ ತೆಗೆದು ಕೊಳ್ಳದೇ ಇದ್ದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಂಡೋ ವಿರೋಧಿ ಹೋರಾಟಗಾರ ಶ್ರೀಧರಗೌಡ ಕೆಂಗುಡೇಲು ಎಚ್ಚರಿಕೆ ನೀಡಿದ್ದಾರೆ. ಕೊಕ್ಕಡ ಎಂಡೋಪಾಲನಾ ಕೇಂದ್ರದಲ್ಲಿ ಎಂಡೋಪೀಡಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಆಹಾರ ನೀಡುವಲ್ಲಿಯೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಪುತ್ತೂರು ಎ.ಸಿ ಕೃಷ್ಣಮೂರ್ತಿಯವರು ಇತ್ತೀಚೆಗೆ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಅಹವಾಲು ಪಡೆದುಕೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.