Home_Page_Advt
Home_Page_Advt
Home_Page_Advt
Home_Page_Advt
Breaking News

ಕುಂತೂರು ಪದವು: ಹಾ.ಉ.ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

2.09 ಲಕ್ಷ ರೂ. ನಿವ್ವಳ ಲಾಭ; ಶೇ.18 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 44 ಪೈಸೆ ಬೋನಸ್ ಘೋಷಣೆ

ಪೆರಾಬೆ: ಕುಂತೂರು ಪದವು ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಸೆ.5ರಂದು ಕುಂತೂರು ಪದವು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೋಮಪ್ಪ ಗೌಡ ಎ.,ರವರು ಮಾತನಾಡಿ, ವರದಿ ಸಾಲಿನಲ್ಲಿ ಸಂಘವು 67,77,635 ರೂ.ಮೌಲ್ಯದ ಹಾಲನ್ನು ಸದಸ್ಯರಿಂದ ಖರೀದಿಸಿ 72,01,095 ರೂ.ಮೌಲ್ಯದ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 2,27,180 ರೂ.ಮೌಲ್ಯದ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಸಂಘವು 2,09,879.26 ರೂ. ನಿವ್ವಳ ಲಾಭಗಳಿಸಿದೆ. ಲಾಭದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತೀ ಲೀಟರ್ ಹಾಲಿಗೆ 44 ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.

ಕೆ.ಎಂ.ಎಫ್‌ನ ಉಪವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್‌ರವರು ಮಾತನಾಡಿ, ಹೈನುಗಾರರು ಗುಣಮಟ್ಟ ಹಾಲು ಪಡೆಯಲು ಪಶುಗಳಿಗೆ ಪೌಷ್ಠಿಕಾಂಶದ ಆಹಾರಗಳನ್ನು ನೀಡುವಂತೆ ಹೇಳಿ, ಪಶು ಆಹಾರ ನೀಡುವ ಕ್ರಮಗಳ ಬಗ್ಗೆ ಪಶುಗಳ ಆರೈಕೆ ಮತ್ತು ಒಕ್ಕೂಟದಿಂದ ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಯಮುನಾ ರವರು ಲೆಕ್ಕ ಪರಿಶೋಧನಾ ವರದಿ ವಾಚಿಸಿದರು. ನಿರ್ದೇಶಕರುಗಳಾದ ಕೇಶವ ಕೆ., ಚಂದ್ರಶೇಖರ ಎ., ಕೆ. ದಿನಕರ್ ಭಟ್, ಎ.ರಾಮಚಂದ್ರ ಗೌಡ, ಪುರುಷೋತ್ತಮ ಬಿ.ಎಂ, ಶ್ರೀಮತಿ ವಿಜಯ, ಶ್ರೀಮತಿ ಶಶಿಕಲಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಂಜಪ್ಪ ಕೆ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಪದ್ಮನಾಭ ಬಿ., ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಕೆ., ವಂದಿಸಿದರು. ಕುಂತೂರು ಪದವು ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಹಾಲು ಪರೀಕ್ಷಕ ನೀಲಯ್ಯ ಗೌಡ ಸಹಕರಿಸಿದರು.

ಪ್ರೋತ್ಸಾಹಕ ಬಹುಮಾನ:
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯ ಪಿ.ಎಚ್ ಸುರೇಶ್ ಇಡಾಳ(ಪ್ರಥಮ), ಶೇಖರ ಗೌಡ ಇಡಾಳ(ದ್ವೀತಿಯ) ಹಾಗೂ ರತ್ನಾಕರ ಗೌಡ. ಕೆ ಕೆಮ್ಮಣ್(ತೃತೀಯ) ಬಹುಮಾನ ಪಡೆದುಕೊಂಡರು. ಸಂಘಕ್ಕೆ ವರ್ಷದ 360 ದಿನಗಳಲ್ಲಿ ಹಾಲು ಪೂರೈಸಿದ 18 ಜನ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಇಬ್ಬರು ಸಕ್ರೀಯ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.