Home_Page_Advt
Home_Page_Advt
Home_Page_Advt
Breaking News

ತಾಲೂಕು ಜನಜಾಗೃತಿ ವೇದಿಕೆ ಪದಗ್ರಹಣ ಸಮಾರಂಭ

ಪುತ್ತೂರು: ದಿನನಿತ್ಯ ಜೀವನದಲ್ಲಿ ನಾವು ಮಾಡುವ ಸೇವೆ ಶಾಶ್ವತವಾಗಿದೆ. ಪೂಜ್ಯ ಖಾವಂದರ ಪ್ರೇರಣೆಯಂತೆ ಜನಜಾಗೃತಿ ವೇದಿಕೆಯಿಂದ ನಾವು ಕೈಗೊಳ್ಳುವ ಕಾರ್ಯ ದುಶ್ಚಟಮುಕ್ತ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಿದೆ. ದುಶ್ಚಟಕ್ಕೆ ಬಲಿಯಾದ ಎಷ್ಟೋ ಮಂದಿ ಇಂದು ವೇದಿಕೆಯ ಮೂಲಕ ದುಶ್ಚಟಮುಕ್ತರಾಗಿ ಸಮಾಜ ಗುರುತಿಸುವಂತವರಾಗಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ ಹೇಳಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಸೆ.11ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ತಾಲೂಕು ಜನಜಾಗೃತಿ ವೇದಿಕೆಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ಇತರರು ದುಶ್ಚಟಕ್ಕೆ ಬಲಿಯಾಗುವುದನ್ನು ತಪ್ಪಿಸುವ ಮನೋ ಬದಲಾವಣೆ ಆಗಬೇಕಾಗದ ಅನಿವಾರ್ಯತೆ ಇದೆ. ಇದಕ್ಕಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆಯ ಪಾತ್ರ ಮಹತ್ತರವಾದುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಹಣದ ಶ್ರೀಮಂತಿಕೆ ತೋರದೆ ಹೃದಯ ಶ್ರೀಮಂತಿಕೆ ತೋರಿ ನಮ್ಮ ಜೀವನದಲ್ಲಿ ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಕೆಲಸದಲ್ಲಿ ತೊಡಗೋಣ ಎಂದರು.
ಜನಜಾಗೃತಿ ವೇದಿಕೆ ತಾಲೂಕು ನಿಯೋಜಿತ ಅಧ್ಯಕ್ಷ ಮಹಾಬಲ ರೈ ಮಾತನಾಡಿ, ಸಮಾಜವನ್ನು ಪಾನಮುಕ್ತ ಸಮಾಜ ಮಾಡುವಲ್ಲಿ ಜನಜಾಗೃತಿಯ ಪಾತ್ರ ಮಹತ್ತರ. ಎಲ್ಲರೂ ಸಹಕಾರ ನೀಡುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆಯ ನಿರ್ಗಮನ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಮಾನವ ಜೀವನ ಎಂದರೆ ಏನು, ಹೇಗೆ, ಸಮಾಜದ ಕಟ್ಟುವುದು ಹೇಗೆ ಎಂಬುದನ್ನು ಖಾವಂದರು ನಮಗೆ ಜನಜಾಗೃತಿ ವೇದಿಕೆಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಇಂದು ವೇದಿಕೆ ಮೂಲಕ ಈ ವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮದ್ಯವರ್ಜನ ಶಿಬಿರ ನಡೆದಿದ್ದು, ನಾಲ್ಕು ಸಾವಿರ ಮಂದಿ ಮದ್ಯಮುಕ್ತರಾಗಿದ್ದಾರೆ ಎಂದು ತಿಳಿಸಿದರು.

ಪದಗ್ರಹಣ
ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ ಸೇರಿದಂತೆ ವಲಯ ಅಧ್ಯಕ್ಷರುಗಳಿಗೆ ನಿರ್ಗಮನ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅಧಿಕಾರಿ ಹಸ್ತಾಂತರ ಮಾಡಿದರು. ಕರಾವಳಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ, ನಿಕಟಪೂರ್ವ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ವಲಯಾಧ್ಯಕ್ಷರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮೇಲ್ವಿಚಾರಕಿ ಪಾವನ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆ ರಾಜ್ಯ ಸಲಹಾ ಸಮಿತಿಯ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ವಿವಿಧ ವಲಯ ಅಧ್ಯಕ್ಷರಾದ ವಲಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಶೀನಪ್ಪ ಕುಲಾಲ್, ಮಹೇಶ್ ಕೆ., ಮೋಹನ ಪಕ್ಕಳ, ವಿಕ್ರಮ ರೈ, ಪ್ರಕಾಶ್ಚಂದ್ರ, ವಸಂತಿ ಜಿ.ಕೆ. ನಿಟಕಪೂರ್ವ ಅಧ್ಯಕ್ಷರಾದ ಪ್ರಶಾಂತ್ ಮುರ, ರಾಜ್‌ಗೋಪಾಲ್ ಕೈಲಾರ್ ಹಾಗೂ ಸೀತಾರಾಮ ಗೌಡ ಪೊಸವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನಜಾಗೃತಿ ವೇದಿಕೆ ತಾಲೂಕು ಕಾರ್ಯದರ್ಶಿ ಜನಾರ್ದನ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯೋಜನೆಯ ಕೃಷಿ ಅಧಿಕಾರಿ ಉಮೇಶ್ ವಂದಿಸಿದರು. ಬಾಬು, ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.