Home_Page_Advt
Home_Page_Advt
Home_Page_Advt
Breaking News

ಪೆರ್ಲಂಪಾಡಿ ಶಾಲೆಯಲ್ಲಿ ಮೇಳೈಸಿದ ಕಾವು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ- ಅನಿತಾ ಹೇಮನಾಥ ಶೆಟ್ಟಿ

ಪುತ್ತೂರು: ಪ್ರತಿಭೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇದ್ದೇ ಇರುತ್ತದೆ ಆದರೆ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯ ಅವಶ್ಯಕತೆ ಇದೆ. ಇಂತಹ ವೇದಿಕೆಯನ್ನು ಪ್ರತಿಭಾ ಕಾರಂಜಿ ನೀಡುತ್ತಿದೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅವರು ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಕಾವು ಹಾಗೂ ಪೆರ್ಲಂಪಾಡಿ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರ್ಲಂಪಾಡಿ ಶಾಲೆಯಲ್ಲಿ ಸೆ.೧೧ ರಂದು ಜರುಗಿದ ಕಾವು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಶಿಕ್ಷಕರ ಕೊರತೆ ಮತ್ತು ಕೊಠಡಿಗಳ ಕೊರತೆಯ ಬಗ್ಗೆ ಮಾತನಾಡಿದ ಅನಿತಾರವರು, ಪೆರ್ಲಂಪಾಡಿ ಶಾಲೆಗೆ ಹೆಚ್ಚುವರಿ ಕೊಠಡಿ ಒದಗಿಸುವ ಭರವಸೆ ನೀಡಿದರು. ಅದೇ ರೀತಿ ಪೀಠೋಪಕರಣಗಳ ಖರೀದಿಗೆ ೫೦ ಸಾವಿರ ಅನುದಾನ ಒದಗಿಸುವ ಭರವಸೆ ನೀಡಿದರು.

ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಗಿರಿಜಾ ಧನಂಜಯ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ತಾಪಂ ಸದಸ್ಯ ರಾಮ ಪಾಂಬಾರು, ಕೊಳ್ತಿಗೆ ಗ್ರಾಪಂ ಸದಸ್ಯರುಗಳಾದ ಶಿವರಾಮ ಭಟ್ ಬೀರ್ನಕಜೆ, ತೀರ್ಥಾನಂದ ದುಗ್ಗಳ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ, ಬೆಳ್ಳಾರೆ ರೋಟರಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ್ ರೈ ಕೆರೆಮೂಲೆ, ಸಮೂಹ ಸಂಪನ್ಮೂಲ ಕೇಂದ್ರ ಬಿಐಇಆರ್‌ಟಿ ತನುಜಾ, ಮರಿಯಮ್ಮರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ದಾನಿಗಳಿಗೆ ಸನ್ಮಾನ
ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿದ ದಾನಿಗಳಾದ ಎಸ್‌ಡಿಎಂಸಿ ಸದಸ್ಯ ನಾಗವೇಣಿ ದೇವಪ್ಪ ನಾಯ್ಕ, ಬಾಬು ರಾಜೇಂದ್ರ ಪೆರ್ಲಂಪಾಡಿ, ವಾಸುದೇವ ನಾಯಕ್ ಆನಡ್ಕರವರುಗಳನ್ನು ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಾಲೆಗೆ ಪ್ರಿಂಟರ್ ಕೊಡುಗೆಯಾಗಿ ನೀಡಿದ ಶಿಕ್ಷಕಿ ಭಾರತಿ ಎಂ.ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ಪೂಜಾರಿ ಚಾಳೆಪಡ್ಪು ಸ್ವಾಗತಿಸಿದರು. ವಿದ್ಯಾರ್ಥಿಗಳ ಪೋಷಕರುಗಳಾದ ವನಿತಾ, ದಿನೇಶ್, ಹೇಮಲತಾ, ಎಸ್‌ಡಿಎಂಸಿ ಸದಸ್ಯರುಗಳಾದ ಮಂಜುಳಾ, ಶಿವಪ್ರಸಾದ್ ಎಂ, ವೆಂಕಟ್ರಮಣ ಆಚಾರ್ಯರವರುಗಳು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪೆರ್ಲಂಪಾಡಿ ಶಾಲಾ ಮುಖ್ಯಗುರು ಲಕ್ಷ್ಮಣ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಶಾಲಕ್ಷಿ ವಂದಿಸಿದರು. ಹಿಂದಿ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದ್ದರು.

ವಿವಿಧ ಶಾಲೆಯ ಸುಮಾರು 20 ಶಿಕ್ಷಕರು ತೀರ್ಪುಗಾರರಾಗಿದ್ದರು. ಕಾವು ಕ್ಲಸ್ಟರಿನ ಒಟ್ಟು 13 ಶಾಲೆಯ ಸುಮಾರು 468 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಹಿಸಿದ್ದರು. ಕ್ಲಸ್ಟರಿನ ವಿವಿಧ ಶಾಲೆಯ ಸಹ ಶಿಕ್ಷಕರು ಕೊಠಡಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಥಳೀಯ ದಾನಿಗಳಿಂದ, ಎಸ್‌ಡಿಎಂಸಿಯವರಿಂದ ಬೆಳಗ್ಗೆಯ ಉಪಹಾರ, ಮಧ್ಯಾಹ್ನ ವಿಶೇಷ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತತು. ಕಾರ್ಯಕ್ರಮಕ್ಕೆ ಊರ ಪರವೂರ ವಿದ್ಯಾಭಿಮಾನಿಗಳು, ಪೋಷಕರು, ವಿವಿಧ ಸಂಘ ಸಂಸ್ಥೆಯವರು ಸಂಪೂರ್ಣ ಸಹಕಾರ ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.