Home_Page_Advt
Home_Page_Advt
Home_Page_Advt
Home_Page_Advt
Breaking News

ಅರಿಯಡ್ಕ ಕುರಿಂಜದಲ್ಲಿ ಓಣಂ ಹಬ್ಬ

ಪುತ್ತೂರು: ಅರಿಯಡ್ಕ ಗ್ರಾಮದ ಕುರಿಂಜ ಯಾದವ ಸಭಾ ಪ್ರಾದೇಶಿಕ ಸಮಿತಿ ವತಿಯಿಂದ ಸೆ.10ರಂದು ಓಣಂ ಹಬ್ಬ ನಡೆಯಿತು. ಬೆ.8.30ಕ್ಕೆ ಭಜನಾ ಕಾರ್ಯಕ್ರಮದ ಮೂಲಕ ಪ್ರಾರಂಭವಾಯಿತು. ನಂತರ ವಿದ್ಯಾರ್ಥಿಗಳಿಗೆ, ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಹಾಗೂ ಪೂಕಳಂ ಸ್ಪರ್ಧೆ ನಡೆದು ಅಪರಾಹ್ನ ಸಾಮೂಹಿಕ ಭೋಜನ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕುರಿಂಜ, ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಲೋಕೇಶ ಕೆ. ಕುಂಟಾಪು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ಮದುಸೂದನ್ ಆಯರ್ , ಪುತ್ತೂರು ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷ ಸದಾನಂದ ಮಣಿಯಾಣಿ ಕುರಿಂಜಮೂಲೆ, ಪುತ್ತೂರು ನಗರ ಪೋಲಿಸ್ ಠಾಣಾ ಎಎಸ್‌ಐ ಶ್ರೀಧರ ಮಣಿಯಾಣಿ, ಪುತ್ತೂರು ತಾಲೂಕು ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಾಗರಾಜನ್ ತಲಪಾಡಿ, ಪುತ್ತೂರು ಯಾದವ ಸಭಾ ತಾಲೂಕು ಸಮಿತಿ ಕಾರ್ಯದರ್ಶಿ ಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದರು.  ಕುರಿಂಜ, ದೊಡ್ಡಮನೆ ಹಿರಿಯರಾದ ಕೃಷ್ಣ ಮಣಿಯಾಣಿ ಪರ್ಬತ್ತಡ್ಕ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸಾವಿತ್ರಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಾವತಿ ಅಪ್ಪಕುಂಞಿ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಮಣಿಯಾಣಿ ಗೌರವ ಉಪಸ್ಥಿತರಿದ್ದರು.

ಕುರಿಂಜಮೂಲೆ ಸೌಮ್ಯ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿಧಿ ಮತ್ತು ಹರ್ಷಿಕಾ ಪ್ರಾರ್ಥಿಸಿದರು. ಕುರಿಂಜ ವಾಸು ಮಣಿಯಾಣಿ ಪ್ರಾಸ್ತಾವಿಕ ಮಾತನಾಡಿದರು. ದರ್ಬೆತ್ತಡ್ಕ ರವೀಂದ್ರ ಮಣಿಯಾಣಿ ಸ್ವಾಗತಿಸಿದರು. ಕುರಿಂಜಮೂಲೆ ಪುರುಷೋತ್ತಮ ಕೆ.ಯಂ. ಬಹುಮಾನಿತರ ಪಟ್ಟಿ ವಾಚಿಸಿದರು. ಕುರಿಂಜ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸಂತೋಷ್‌ಕುಮಾರ್ ಕುತ್ಯಾಡಿ ವಂದಿಸಿರು. ಯಾದವ ಸಭಾ ಕೇಂದ್ರ ಸಮಿತಿ ಪದಾಧಿಕಾರಿ ಚಂದ್ರನ್ ತಲಪ್ಪಾಡಿ, ಯಾದವ ಸಭಾ ಕೇಂದ್ರ ಸಮಿತಿ ಸದಸ್ಯ ಸಂಜೀವ ಮಣಿಯಾಣಿ ಬೆಳ್ಳಾರೆ, ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಬೆಳ್ಳಾರೆ, ಕೌಡಿಚ್ಚಾರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಗೌಡ, ಕೌಡಿಚ್ಚಾರು ನಾಗನ ಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಭಾಕರ ಗೌಡ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.