Home_Page_Advt
Home_Page_Advt
Home_Page_Advt
Home_Page_Advt
Breaking News

ಹನುಮಗಿರಿ ಶ್ರೀ ಕ್ಷೇತ್ರದಲ್ಲಿ ವಿಶ್ವದಾಖಲೆಯ ಬೃಹತ್ ಭಜನಾ ಸಂಗಮ

  • 1 ಸಾವಿರ ಭಜನಾ ತಂಡಗಳ ಭಾಗವಹಿಸುವಿಕೆ- ಡಿ.3 ನೇ ವಾರದಲ್ಲಿ ಕಾರ್ಯಕ್ರಮ

ಪುತ್ತೂರು: ಈಗಾಗಲೇ ದೇಶದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ, ಶ್ರೀ ಕೋದಂಡರಾಮ ಕ್ಷೇತ್ರದಲ್ಲಿ ಈ ಬಾರಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದಲ್ಲಿ ಈ ಬಾರಿ ಒಂದು ಸಾವಿರ ಭಜನಾ ತಂಡಗಳ ಬೃಹತ್ ಭಜನಾ ಸಂಗಮವು ಡಿ. 3 ನೇ ವಾರದಲ್ಲಿ ಶ್ರೀ ಕ್ಷೇತ್ರದ ವಠಾರದಲ್ಲಿ ನಡೆಯಲಿದೆ.

ಭಜನಾ ಸಂಕೀರ್ತನೆಯೊಂದಿಗೆ ಸೂರ್ಯಾಸ್ತ ಸಂದರ್ಭದಲ್ಲಿ ಒಂದು ಸಾವಿರ ದೀಪ ಪ್ರಜ್ವಲನೆಯೊಂದಿಗೆ ಏಕಕಾಲದಲ್ಲಿ ಸಾವಿರಾರು ತಂಡಗಳ ವಿಶ್ವ ದಾಖಲೆಯ ಭಜನಾ ಸಂಗಮ ನೆರವೇರಲಿದೆ. ರಾಷ್ಟ್ರಮಟ್ಟದ ಧಾರ್ಮಿಕ , ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆಯ ಸಂಚಾಲಕ ಡಾ. ಮೋಹನ್ ಆಳ್ವ ರವರ ನೇತೃತ್ವದಲ್ಲಿ ಮಂಗಳೂರು ವಿಭಾಗಮಟ್ಟದ ಸ್ವಾಗತ ಸಮಿತಿ ರಚನೆಯಾಗಿದ್ದು. ಈ ಬೃಹತ್ ಭಜನಾ ಸಂಗಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು , ಕಾಸರಗೋಡು, ಜಿಲ್ಲೆಯಾದ್ಯಂತ ಇರುವ ಭಜನಾ ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮದ ಒಂದು ದಿನ ಭಜನೆಯ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಸಂಜೆ ವಿರಾಟ್ ಭಜನಾ ಸಂಗಮ, ಭಜನಾ ಸಂಕೀರ್ತನೆ, ಮೆರವಣಿಗೆ ನಡೆಯಲಿದೆ. ಕಾಯಕ್ರಮಕ್ಕೆ ಈಗಾಗಲೇ ಪೂರ್ವ ತಯಾರಿ ನಡೆಯುತ್ತಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.