Home_Page_Advt
Home_Page_Advt
Home_Page_Advt
Home_Page_Advt
Breaking News

ಡಿ.ಕೆ.ಶಿ. ಬಂಧನ ವಿರೋಧಿಸಿ ಇಂದು(ಸೆ.12) ಕಡಬದಲ್ಲಿ ನಡೆಯುವ ಪ್ರತಿಭಟನೆಗೆ ಕಡಬ ಒಕ್ಕಲಿಗ ಗೌಡ ಸಂಘದ ಬೆಂಬಲ ಇಲ್ಲ – ಸಂಘದ ತುರ್ತು ಸಭೆಯಲ್ಲಿ ಅಧ್ಯಕ್ಷರ ಸ್ಪಷ್ಟನೆ

ಕಡಬ: ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಜಾತ್ಯಾತೀತ ಸಾರ್ವಜನಿಕ ಅಭಿಮಾನಿ ಬಳಗದವರ ನೇತೃತ್ವದಲ್ಲಿ ಸೆ.೧೨ರಂದು ಅಪರಾಹ್ನ ಕಡಬದಲ್ಲಿ ನಡೆಯಲಿರುವ ಪ್ರತಿಭಟನೆಗೆ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಬೆಂಬಲವಿಲ್ಲ, ಸಂಘವು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸಂಘದ ತುರ್ತು ಸಭೆಯಲ್ಲಿ ತಿಳಿಸಿದ್ದಾರೆ.

ರಾಜಕೀಯ ವಿಚಾರಗಳಿಗೆ ಪ್ರತಿಭಟನೆ ಮಾಡಲು ಬೇರೆ ರೀತಿಯ ಸಂಘಟನೆ ಮಾಡುವುದು ಒಳ್ಳೆಯದು, ಒಕ್ಕಲಿಗ ಗೌಡ ಸಂಘದಲ್ಲಿ ಯಾವುದೇ ರಾಜಕೀಯ ಇಲ್ಲ, ಸಮುದಾಯದವರು ಬೇರೆ ಬೇರೆ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡವರು ಇದ್ದಾರೆ, ಆದರೆ ಸಂಘಟನೆಯ ಒಳಗೆ ರಾಜಕೀಯ ಇಲ್ಲ, ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ಸೆ.೧೨ರಂದು ಒಕ್ಕಲಿಗ ಸಮುದಾಯ ಹಾಗೂ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ, ಗೌಡ ಸಮುದಾಯದ ಹೆಸರು ಉಲ್ಲೇಖಿಸಿ ಸಂಘಟನೆ ಒಳಗಡೆ ರಾಜಕೀಯ ವಿಷ ಬೀಜ ಬಿತ್ತುವ ಹುನ್ನಾರ ನಡೆದಿದೆ, ಇದಕ್ಕೆ ಅವಕಾಶವಿಲ್ಲ, ಪ್ರತಿಭಟನೆಗೂ ಒಕ್ಕಲಿಗ ಗೌಡ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್‍ಯದರ್ಶಿ ಮಂಜುನಾಥ ಕೊಲಂತ್ತಾಡಿ, ಕೋಶಾಧಿಕಾರಿ ಜಯರಾಮ ಆರ್ತಿಲ, ಯುವ ಸಮಿತಿಯ ಅಧ್ಯಕ್ಷ ಮೋಹನ ಕೋಡಿಂಬಾಳ, ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.