Home_Page_Advt
Home_Page_Advt
Home_Page_Advt
Home_Page_Advt
Breaking News

ಅಪಹರಣಕ್ಕೊಳಗಾದ 7 ವರ್ಷದ ಬಾಲಕ ಮಕ್ಕಳ ರಕ್ಷಣಾ ಸಮಿತಿಯ ಸುಪರ್ದಿಗೆ

ಪುತ್ತೂರು: ಅಪ್ರಾಪ್ತ ಬಾಲಕನನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪತ್ತೆಯಾದ ಬಾಲಕನನ್ನು ಮಕ್ಕಳ ರಕ್ಷಣಾ ಸಮಿತಿಯ ಸುಪರ್ದಿಗೆ ಬಿಡಲಾಗಿದೆ.

ಆಂಧ್ರ ಮೂಲದ ಶಿಲ್ಪಾ ಬಾಲಕನನ್ನು ಅಪಹರಣ ಮಾಡಿದ ಅರೋಪಿ. ಅವರಿಂದ ಬಾಲಕನನ್ನು ರಕ್ಷಿಸಿದ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರು, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ, ಪುತ್ತೂರು ಪ್ರಭಾರ ಸಿಡಿಪಿಒ ಹಾಗೂ ಚೈಲ್ಡ್ ಲೈನ್ ನಿರ್ದೇಶಕರು ಬಾಲಕನನ್ನು ಸದ್ಯ ಮಕ್ಕಳ ರಕ್ಷಣಾ ಸಮಿತಿಯ ಸುಪರ್ದಿಗೆ ನೀಡಿದ್ದಾರೆ. ಮುಂದೆ ಬಾಲಕನ ವಾರೀಸುದಾರರು ಪತ್ತೆಯಾಗದಿದ್ದಲ್ಲಿ ಬಾಲಕರ ಬಾಲಮಂದಿರದಲ್ಲೇ ಆತನಿಗೆ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಆಪ್ತ ಸಮಾಲೋಚನೆಯಲ್ಲಿ ಘಟನೆ ಬೆಳಕಿಗೆ: ಸೆ.10ರಂದು ಮಂಗಳೂರಿನ ಚೈಲ್ಡ್‌ಲೈನ್-೧೦೯೮ರ ಕಚೇರಿಗೆ ಬಾಲಕನನ್ನು ಮತ್ತು ಆತನ ತಾಯಿ ಎಂದು ಹೇಳಿಕೊಳ್ಳುತ್ತಿದ್ದ ಅಪಹರಣ ಆರೋಪಿ ಶಿಲ್ಪಾ ಅವರನ್ನು ಕರೆದುಕೊಂಡು ಬಂದಿದ್ದು ಚೈಲ್ಡ್‌ಲೈನ್ ನಿರ್ದೇಶಕರ ನಿರ್ದೇಶನ ಮೇರೆಗೆ ಆಪ್ತಸಮಾಲೋಚಕರು ಬಾಲಕಿನಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದಾಗ ಬಾಲಕನು `ತಾನು ಆಂಧ್ರಪ್ರದೇಶದ ಓಂಗೋಳ ಹತ್ತಿರದ ಸೀತಾರಾಮ್ ಪುರ ನಿವಾಸಿ. ಬೆಂಗಳೂರಿನ ಯಶವಂತ ಪುರ ರೈಲ್ವೇ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿರುವಾಗ ಶಿಲ್ಪಾ ಎಂಬಾಕೆಯು ಕರೆದುಕೊಂಡು ಬಂದಿರುತ್ತಾರೆ’ ಎಂಬುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಾಲಕನನ್ನು ಆಪ್ತ ಸಮಾಲೋಚನೆ ನಡೆಸಿದ ಬಳಿಕ ಜಿಲ್ಲಾಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೆನ್ನಿ ಡಿ’ಸೋಜರವರ ಸೂಕ್ತ ಆದೇಶದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿ ಸೂಕ್ತ ಪುನರ್ವಸತಿಯನ್ನು ಕಲ್ಪಿಸಲಾಗಿದೆ. ನಂತರ ಚೈಲ್ಡ್‌ಲೈನ್ ತಂಡವು ಸಂಪ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಪುತ್ತೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ, ಮಹಿಳಾ ಸಾಂತ್ವನದ ಸಿಬ್ಬಂದಿ ಹಾಗೂ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರ ಜೊತೆ ತೆರಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿಯರು ದೂರು ನೀಡಿರುವ ಹಿನ್ನಲೆಯಲ್ಲಿ ಶಿಲ್ಪಾ ಎಂಬಾಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶುಅಭಿವೃದ್ದಿ ಯೋಜನಾಧಿಕಾರಿಯಾದ  ಭಾರತಿ, ಚೈಲ್ಡ್ ಲೈನ್-1098 ದ.ಕ.ಜಿಲ್ಲೆ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಮಹಿಳಾ ಸಾಂತ್ವನ ಕೇಂದ್ರದ ನಿಶಾ, ಹಾಗೂ ಬಲ್ನಾಡು ಗ್ರಾಮ ಪಂಚಾಯತ್‌ನ ಸದಸ್ಯರಾದ ಪರಮೇಶ್ವರಿಯವರು ಉಪಸ್ಥಿತರಿದ್ದರು.

ಪೊಲೀಸರಿಂದ ಚುರುಕುಗೊಂಡ ತನಿಖೆ: ಅಪಹರಣ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಆರೋಪಿ ಶಿಲ್ಪಾ ಎಂಬವರನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಶಿಲ್ಪಾ ಅವರೊಂದಿಗೆ ಆಕೆಯ ಪತಿ ಮಹೇಶ್ ಎಂಬವರೂ ಅಪಹರಣದಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯದ ಮೇರೆಗೆ ಪೊಲೀಸರು ಅಪಹರಣ ತಂಡದ ಜಾಲದ ಕುರಿತು ತನಿಖೆ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.