Home_Page_Advt
Home_Page_Advt
Home_Page_Advt
Breaking News

ಯಾವುದೇ ಹಗರಣಗಳಿಲ್ಲದಿದ್ದರೂ ಬಿಜೆಪಿಯಿಂದ ಡಿಕೆ ಶಿವಕುಮಾರ್ ಅವರ ವ್ಯಕ್ತಿತ್ವ ನಾಶ ಮಾಡಲಾಗುತ್ತಿದೆ – ಕಾಂಗ್ರೆಸ್ ಆರೋಪ

ಪುತ್ತೂರು : ಡಿಕೆಶಿ ವಿರುದ್ದ ಯಾವುದೇ ಹಗರಣಗಳಿಲ್ಲ. ಆದರೆ ಗುಜರಾತಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅವರು ಕಾರಣರಾಗಿದ್ದಾರೆಂದು ದೇಶದ ಸ್ವಯತ್ತತೆ ಸಂಸ್ಥೆಗಳನ್ನು ಬಳಸಿಕೊಂಡು ಅವರನ್ನು ಬಂಧಿಸಿ, ವ್ಯಕ್ತಿತ್ವವನ್ನೇ ನಾಶಮಾಡುವ ರೀತಿಯಲ್ಲಿ ಪ್ರತಿಕಾರದ ರಾಜಕೀಯ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೇಶದ ಆರ್ಥಿಕ ಸಂಪನ್ಮೂಲ ಕ್ರೂಡಿಕರಣ ಮಾಡುವ ಉದ್ದೇಶದಿಂದ ಕಮರ್ಷಿಯಲ್ ಟ್ಯಾಕ್ಸ್ ವ್ಯಾಪಾರಿ ಸ್ನೇಹಿಯಾಗಿರಬೇಕು. ಅದೇ ರೀತಿ ಇಂತಹ ತೆರಿಗೆ ಮತ್ತು ಜಿಎಸ್‌ಟಿಯನ್ನು ಸಮರ್ಪಕವಾಗಿ ವಾರ್ಷಿಕ ರೂ.30 ಕೋಟಿ ಆದಾಯ ತೆರಿಗೆ ನೀಡುತ್ತಿದ್ದ ಅವರನ್ನು ಬಂಧಿಸಿ ಕನಿಷ್ಠ ಮೂಲ ಸೌಕರ್ಯ ಕೂಡ ನೀಡದೆ ಚಿತ್ರಹಿಂಸೆ ನೀಡುವ ಮತ್ತು ಕುಟುಂಬಕ್ಕೆ ಬೆದರಿಕೆಯೊಡ್ಡುವ ಕೆಲಸ ಆಗುತ್ತಿದೆ ಎಂದ ಅವರು ಯಡಿಯೂರಪ್ಪ, ಜನಾರ್ದನ ರೆಡ್ಡಿ ಹಗಣರದಲ್ಲಿ ಜೈಲಿಗೆ ಹೋಗಿದ್ದರೆ. ಆದರೆ ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ದ್ವೇಷದ ಪ್ರತಿಕಾರಕ್ಕಾಗಿ ಅವರ ವ್ಯಕ್ತಿತ್ವ ನಾಶ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಬಿಜೆಪಿ ಅಡಳಿತ ವೈಫಲ್ಯ:
ಬ್ಯಾಂಕ್‌ಗಳಿಗೆ ಕಡಿವಾಣ, ಕೈಗಾರಿಕೆ-ಉದ್ಯಮಗಳು ಮುಚ್ಚುವಂತೆ ಮಾಡಿ ಬಹಳಷ್ಟು ಮಂದಿಯನ್ನು ನಿರುದ್ಯೋಗಿಗಳಾಗಿಸಿದ್ದು, ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಚಿಕ್ಕಾಸು ಹಣ ಬಿಡುಗಡೆ ಮಾಡದಿರುವುದು, ದಕ್ಷ ಅಧಿಕಾರಿಗಳು ರಾಜೀನಾಮೆ ನೀಡುವಂತ ವಾತಾವರಣ ಸೃಷ್ಠಿಸಿದ್ದು, ಪ್ರತಿಕಾರದ ದ್ವೇಷ ಸಾಧನೆಯ ರಾಜಕೀಯ ಮಾಡುತ್ತಿರುವುದು ಬಿಜೆಪಿ ಸರ್ಕಾರದ ಸಾಧನೆಗಳಾಗಿದ್ದು, ಅಭಿವೃದ್ಧಿ ಎಲ್ಲವೂ ವೈಫಲ್ಯ ಕಂಡಿದೆ ಎಂದು ಧನಜಂಯ ಅಡ್ಪಂಗಾಯ ಹೇಳಿದರಲ್ಲದೆ ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಿದ್ದರೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಅವಲೋಕಿಸುವ ಗೋಜಿಗೆ ಹೋಗಿಲ್ಲ ಎಂದರು.

ಬಿಜೆಪಿ ಅಡಳಿತದಿಂದ ಅಧಿಕಾರಿಗಳು ರಾಜೀನಾಮೆ:
ಉತ್ತಮ ಅಧಿಕಾರಿಗಳನ್ನು ದೇಶದ್ರೋಹಿಗಳು ಎನ್ನುತ್ತಿರುವ ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು. ಸರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದೆ ಸಸಿಕಾಂತ್ ಸಿಂಥಿಲ್ ಅವರಂತಹ ಪ್ರಮಾಣಿಕ ಐಎಎಸ್ ಅಧಿಕಾರಿಗಳು ರಾಜೀನಾಮೆ ನೀಡುವಂತಹ ಒತ್ತಡದ ವಾತವರಣ ನಿರ್ಮಾಣ ಮಾಡಿದ್ದು ನಮ್ಮ ದುರಂತ ಎಂದು ಧನಂಜಯ ಅಡ್ಪಂಗಾಯ ಹೇಳಿದರು.

ಕಾರ್ತಿಕ್ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ:
ಕಾರ್ತಿಕ್ ಸುವರ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತ ಕುಟುಂಬಕ್ಕೆ ರೂ.10ಲಕ್ಷ ಪರಿಹಾರ ನೀಡಬೇಕು ಮತ್ತು ಪ್ರಕರಣವನ್ನು ಸರಿಯಾಗಿ ನಡೆಸಬೇಕು. ಪ್ರಕರಣದಲ್ಲಿ ಬಿಜೆಪಿ ಪ್ರಮುಖರೇ ಭಾಗಿಯಾಗಿದ್ದಾರೆ ಎಂದು ಮೃತರ ಸಂಬಂಧಿಕರೇ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕೋಮುಗಲಭೆಯಲ್ಲಿ ಹತ್ಯೆಯಾದವರಿಗೆ ಪರಿಹಾರ ಕೇಳುವ ಬಿಜೆಪಿಗರು ಈಗ ಯಾಕೆ ಮಾತನಾಡುತ್ತಿಲ್ಲ ಎಂದ ಧನಂಜಯ ಅಡ್ಪಂಗಾಯ ಅವರು ಬಿಜೆಪಿ ಮುಖಂಡರು ಕೇವಲ ನಾಮಕಾವಸ್ಥೆ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ ಎಂದರು. ವಿಟ್ಲ-ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳೀಧರ್ ರೈ ಮಠಂತಬೆಟ್ಟು, ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ ರೈ, ತಾ.ಪಂ ಮಾಜಿ ಸದಸ್ಯರೂ ಮತ್ತು ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಕೆಮ್ಮಾರ ಗಂಗಾಧರ ಗೌಡ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಂದರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇಂದು ಪ್ರತಿಭಟನೆ
ನೆರೆ ಪೀಡಿತ ಜನರ ಬದುಕು ಚಿಂತಾಜನಕವಾಗಿದೆ. ಅವರ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸ್ಪಂಧಿಸಿಲ್ಲ. ಕೇಂದ್ರದಿಂದ ಪರಿಹಾರ ಕೊಡಲಾಗುವುದು ಎಂದು ಘೋಷಣೆ ಮಾತ್ರ ಮಾಡಿದ್ದು, ಚಿಕ್ಕಾಸು ಪರಿಹಾರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಯಲಿದ್ದು, ಸೆ.12ರಂದು ಬೆಳಿಗ್ಗೆ ಗಂಟೆ 11 ರಿಂದ ಮಧ್ಯಹ್ನ ಗಂಟೆ 2ರ ತನಕ ಪುತ್ತೂರು ಗಾಂಧಿ ಕಟ್ಟೆಯ ಬಳಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.