Home_Page_Advt
Home_Page_Advt
Breaking News

ಉಪ್ಪಿನಂಗಡಿಯಲ್ಲಿ ನದಿಯಲ್ಲಿ ಕೊಚ್ಚಿ ಹೋದ ವೃದ್ಧೆ – ಕಡೇಶಿವಾಲಯದಲ್ಲಿ ರಕ್ಷಣೆ

ಉಪ್ಪಿನಂಗಡಿ: ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ವೃದ್ಧ ಮಹಿಳೆಯೋರ್ವರು ನದಿ ನೀರು ಪಾಲಾಗಿ ಅದೃಷ್ಟವಷಾತ್  ಕಡೇಶಿವಾಲಯದ ಬಳಿ ಸ್ಥಳೀಯರಿಂದ ರಕ್ಷಣೆಗೊಳಗಾದ ಘಟನೆ ಸೆ.12 ರಂದು ಬೆಳಿಗ್ಗೆ ನಡೆದಿದೆ. 

ಬೆಳಿಗ್ಗೆ ಅಪರಿಚಿತ ವೃದ್ಧೆಯೋರ್ವರು ದೇವಾಲಯದ ಬಳಿಯಿರುವ ನೇತ್ರಾವತಿ ಸಮುದಾಯ ಭವನದ ಬಳಿ ಕುಮಾರಧಾರ ನದಿ ಕಡೆ ಹೋಗಿದ್ದರು. ಕೆಲ ಹೊತ್ತಲ್ಲೆ ವೃದ್ಧೆ ನದಿ ನೀರಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಒಂದಿಬ್ಬರು ಕಂಡಿದ್ದರು.  ಅಂದಾಜು 2 ಕಿ.ಮೀ ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋದ ಮಹಿಳೆಯನ್ನು ಕಡೇಶಿವಾಲಯದ ಬಳಿ ಸ್ಥಳೀಯರು ಕಂಡು ರಕ್ಷಿಸಿದ್ದಾರೆ ಎನ್ನಲಾಗಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.