Home_Page_Advt
Home_Page_Advt
Home_Page_Advt
Breaking News

ಕಾಣಿಯೂರು: ಶಾಲೆಯಲ್ಲಿ ಮುಳಿಯ ಫೌಂಡೇಶನ್ ನಿಂದ ಸೀಡ್ ಬಾಲ್ ಬಿತ್ತನೆ

ಕಾಣಿಯೂರು: ಮುಳಿಯ ಫೌಂಡೇಶನ್ ವತಿಯಿಂದ ಪುತ್ತೂರು ರೋಟರಿ ಕ್ಲಬ್, ಜೆಸಿಐ, ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಸುವಿಚಾರ ಬಳಗ ಇವರ ಸಹಕಾರದೊಂದಿಗೆ ಕಾಣಿಯೂರು ಶಾಲಾ ವಿದ್ಯಾರ್ಥಿಗಳಿಂದ ಸೀಡ್ ಬಾಲ್ ಬಿತ್ತನೆ ಕಾರ್ಯಕ್ರಮ ಕಾಣಿಯೂರಿನಲ್ಲಿ ನಡೆಯಿತು. ಮುಳಿಯ ಫೌಂಡೇಶನ್ ವತಿಯಿಂದ ಈ ವರ್ಷ ಒಂದು ಲಕ್ಷ ಸಸಿಬೀಜದ ಉಂಡೆಗಳನ್ನು ತಯಾರಿಸಿ ಈ ರೀತಿ ಬಿತ್ತನೆ ಮಾಡುವ ಅಭಿಯಾನ ಆರಂಭಿಸಿದ್ದು ಪುತ್ತೂರು ತಾಲೂಕು ವ್ಯಾಪ್ತಿಯ ಸುಮಾರು 35 ಕ್ಕೂ ಮಿಕ್ಕಿದ ಶಾಲೆಗಳಲ್ಲಿ ಸೀಡ್ ಬಾಲ್ ತಯಾರಿಸಿ ಬಿತ್ತನೆ ಮಾಡಲಾಗಿದೆ ಎಂದು ಮುಳಿಯ ಜ್ಯುವೆಲ್ಲರ್ಸ್ ನ ಸಿಬ್ಬಂದಿ ಯತೀಶ್ ಆಚಾರ್ಯ ಹೇಳಿದರು. ಹೊನ್ನೆ, ಸಿರಿಹೊನ್ನೆ, ಕಾಡುಗೇರು, ಕಾಡು ಬಾದಾಮಿ ಮುಂತಾದ ಮರಗಳ ಬೀಜಗಳನ್ನು ಸಾವಯವ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಹುದುಗಿಸಿ ಸಾವಿರಕ್ಕೂ ಮಿಕ್ಕಿದ ಮಣ್ಣಿನ ಉಂಡೆಗಳನ್ನು ಇಲ್ಲಿನ ಸ.ಹಿ.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತಯಾರಿಸಿದ್ದರು.

ಕಾಣಿಯೂರು ಪರಿಸರದ ಕಾಡಿನಲ್ಲಿ ಸಸಿಬೀಜದ ಉಂಡೆಗಳ ಬಿತ್ತನೆ ಮಾಡುವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಕಾಣಿಯೂರು ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಸುರೇಶ್ ಓಡಬಾಯಿ, ಎಸ್ ಡಿಎಂಸಿ ಅಧ್ಯಕ್ಷ ಪದ್ಮನಾಭ ಗುಂಡಿಗದ್ದೆ, ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಪರಮೇಶ್ವರ ಅನಿಲ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ರಾಜೇಶ್ ಮೀಜೆ, ಕೇಶವ ಕಾಣಿಯೂರು, ಗಿರೀಶ್ ಕಾನವು , ಮುಳಿಯ ಜ್ಯುವೆಲ್ಲರ್ಸ್ ಸಿಬ್ಬಂದಿ ಪ್ರಶಾಂತ್ ಅಲಂಕಾರು, ಶಾಲಾ ಶಿಕ್ಷಕಿಯರಾದ ಮೋಹಿನ, ಸುಜಯ, ಮಾಲತಿ, ರೇವತಿ, ಭಾರತಿ ಮತ್ತಿತರರು ಭಾಗವಹಿಸಿದ್ದರು.ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.