Home_Page_Advt
Home_Page_Advt
Home_Page_Advt
Breaking News

ಕೊಯಿಲ ವಳಕಡಮದಲ್ಲಿ 2ನೇ ವರ್ಷದ ಗಣೇಶೋತ್ಸವ

ಉಪ್ಪಿನಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಕಡಮ ಕೊಯಿಲ ಇದರ ವತಿಯಿಂದ ದ್ವೀತಿಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.2ರಂದು ವಳಕಡಮ ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆಯಿತು. ಬೆಳಿಗ್ಗೆ ದೇವರ ಮೂರ್ತಿಯನ್ನು ನಹರುತೋಟದಿಂದ ವಳಕಡಮಕ್ಕೆ ಮೆರವಣಿಗೆಯಲ್ಲಿ ತಂದು, ವೆಂಕಟ್ರಮಣ ಕುದ್ರೆತ್ತಾಯರ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಉಜಿರೆ ಎಸ್‌ಡಿಎಂಸಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜೇಶ್‌ರವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿದ್ದ ರವೀಂದ್ರ ಶೆಟ್ಟಿ ದರ್ಬೆ ಶುಭ ಹಾರೈಸಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗೌಡ ಗುಂಡಿಜೆ ಅಧ್ಯಕ್ಷತೆ ವಹಿಸಿದ್ದರು. ಉಮಣ್ಣ ಗೌಡ ವಳಕಡಮ, ಶೀನಪ್ಪ ಗೌಡ ವಳಕಡಮ, ರಾಜೇಶ್ ಕಲ್ಲಬೆಟ್ಟು, ನೀಲಯ್ಯ ಗೌಡ ದರ್ಖಾಸು, ಮನೋಹರ ಗೌಡ ಬಳ್ತಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೇಜಸ್ವಿ, ಚೇತನಾ ಪ್ರಾರ್ಥಿಸಿದರು. ಉಮೇಶ್ ಗೌಡ ಉರಾಜೆ ಸ್ವಾಗತಿಸಿದರು. ರಾಧಿಕಾ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಶ್ರೀ ದೇವಿ ಭಜನಾ ಮಂದಿರ ವಳಕಡಮ ಇಲ್ಲಿನ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಮಂಗಳಾರತಿ ನಡೆದು, ಗಣೇಶ ವಿಗ್ರಹದ ಶೋಭಾಯಾತ್ರೆಯು ಊರ ಒಳಗಿನ ರಸ್ತೆಯ ಮೂಲಕ ಸಾಗಿ ಕುಮಾರಧಾರಾ ನದಿಯಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.