Home_Page_Advt
Home_Page_Advt
Home_Page_Advt
Breaking News

ಪಾಣಾಜೆ ವಲಯದ ಸ್ತ್ರೀ ಶಕ್ತಿ ಗೊಂಚಲು ಮಹಾಸಭೆ

   
ನಿಡ್ಪಳ್ಳಿ: ಆರ್ಲಪದವು ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ಸ್ತ್ರೀ ಶಕ್ತಿ ಗೊಂಚಲಿನ ಅಧ್ಯಕ್ಷೆ  ಶಾರದಾ ಕೆ.ಪಿ. ಕೊಂದಲ್ಕಾನ ಇವರ ಅಧ್ಯಕ್ಷತೆಯಲ್ಲಿ ಪಾಣಾಜೆ ವಲಯದ ಸ್ತ್ರೀ ಶಕ್ತಿ ಗೊಂಚಲು ಮಹಾಸಭೆ ಸ.11 ರಂದು ನಡೆಯಿತು.

ವೇದಿಕೆಯಲ್ಲಿ  ಪಾಣಾಜೆ ವಲಯದ ಮೇಲ್ವಿಚಾರಕಿ  ನಾಗರತ್ನರವರು ಇಲಾಖೆಯ ಮಾಹಿತಿ, ಇಲಾಖೆಯಿಂದ ಸಿಗುವ ಸೌಲಭ್ಯಗಳ ವಿವರ, ಪೋಷಣ್ ಅಭಿಯಾನದ ಮಹತ್ವವನ್ನು ‌ತಿಳಿಸಿದರು. ಆರೋಗ್ಯ ಶಿಕ್ಷಣಾಧಿಕಾರಿಯಾದ ಪದ್ಮಾವತಿಯವರು ಪೌಷ್ಟಿಕ ಅಹಾರ ಹಾಗೂ ರಕ್ತಹೀನತೆ, ಆರೋಗ್ಯ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಎನ್.ಆರ್.ಎಲ್.ಯಂ. ಇಲಾಖೆಯ  ನವಿತಾರವರು‌ ಗುಂಪಿನ ಎಲ್ಲಾ ವಿಷಯಗಳು ಲೆಕ್ಕಾಚಾರಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು ಹಾಗೂ ಇಲಾಖೆಯ  ನಿಯಮದ ಮಾಹಿತಿಯನ್ನು ‌ನೀಡಿದರು.

ಅಧ್ಯಕ್ಷರಾದ  ಶಾರದ ಕೆ.ಪಿ ಮಾತನಾಡಿ ಇದುವರೆಗೆ ನನ್ನ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಎಲ್ಲಾ ಸದಸ್ಯರುಗಳಿಗೆ ಕೃತಜ್ಞತೆಯನ್ನು ಹಾಗೂ ಇನ್ನೂ ಮುಂದಿನ ಹೊಸ ಪದಾಧಿಕಾರಿಗಳಿಗೂ ಉತ್ತಮ ಸಹಕಾರ ನಾವೆಲ್ಲರೂ ನೀಡೋಣ ಎಂದು ಹೇಳಿದರು. ವೇದಿಕೆಯಲ್ಲಿ ಗೊಂಚಲಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ:   2019-20 ನೇ ಸಾಲಿನ ಸ್ತ್ರೀ ಶಕ್ತಿ ಪ್ ಗೊಂಚಲಿನ ನೂತನ ಅಧ್ಯಕ್ಷರಾಗಿ  ಭಾರತಿ ದೇವಸ್ಯ, ಉಪಾಧ್ಯಕ್ಷರಾಗಿ  ಚಂದ್ರಾವತಿ ಗುರಿಕ್ಕೆಲು, ಕಾರ್ಯದರ್ಶಿಯಾಗಿ ಪೌಲಿನ್ ಆರ್ಲಪದವು, ಜತೆ ಕಾರ್ಯದರ್ಶಿಯಾಗಿ  ಹೇಮಾವತಿ ಸೂರಂಬೈಲು, ಖಜಾಂಚಿಯಾಗಿ  ಸುಂದರಿ ಪಾರ್ಪಳ ಹಾಗೂ ಪಾಣಾಜೆ ವಲಯದ ನೂತನ ಪ್ರತಿನಿಧಿಯಾಗಿ  ಶಶಿಕಲಾ ದೇವಸ್ಯ ಆಯ್ಕೆಯಾದರು.

ಸೀತಾ ಪ್ರಾರ್ಥಿಸಿ , ಗೊಂಚಲಿನ ಕಾರ್ಯದರ್ಶಿ ಶಾರದ ಪಾರ್ಪಳ ಸ್ವಾಗತಿಸಿ ವರದಿ ವಾಚಿಸಿ, ನಿರೂಪಿಸಿದರು. ಪಾಣಾಜೆಯ ಎಲ್ಲಾ ಅಂಗನವಾಡಿಯ ಕಾರ್ಯಕರ್ತೆಯರು ಹಾಗೂ ಗೊಂಚಲಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.