Home_Page_Advt
Home_Page_Advt
Home_Page_Advt
Breaking News

ರಸ್ತೆ ಬದಿ ಇರುವ ಕೆರೆ, ಬಾವಿ  ಮುಚ್ಚಿಸಲು ತಹಶೀಲ್ದಾರರಿಗೆ ಬರೆಯುವುದು ಸೂಕ್ತ – ಪಾಣಾಜೆ ಸಾಮಾನ್ಯ ಸಭೆಯಲ್ಲಿ ಆಗ್ರಹ

ನಿಡ್ಪಳ್ಳಿ: ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ, ದಾರಿ ಬದಿ ಇರುವ ಅಪಾಯಕಾರಿ ಕೆರೆ ಬಾವಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಬರೆಯುವುದು ಸೂಕ್ತ ಎಂದು ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಸಾಮಾನ್ಯ ಸಭೆ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಇವರ ಅಧ್ಯಕ್ಷತೆಯಲ್ಲಿ ಸೆ.7 ರಂದು ನಡೆಯಿತು.

ಇತ್ತೀಚೆಗೆ ಕೌಡಿಚ್ಚಾರಿನ ಮಡ್ಯಂಗಳದಲ್ಲಿ ರಸ್ತೆ ಬದಿಯ ಕೆರೆಗೆ ಕಾರು ಬಿದ್ದು ನಾಲ್ಕು ಜೀವ ಹೋದ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷರು ಮತ್ತು ಸದಸ್ಯರು ಇಂತಹ ಅಪಾಯಕಾರಿ ಕೆರೆ, ಬಾವಿ, ಇಂಗುಗುಂಡಿಗಳು ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಇದೆ. ಖಾಸಗಿ ವ್ಯಕ್ತಿಗಳ  ಜಾಗದಲ್ಲಿದ್ದರೆ ಏಕಾಏಕಿ ಪಂಚಾಯತ್ ಮುಚ್ಚಿಸಲು ಬರುವುದಿಲ್ಲ. ಆದುದರಿಂದ ಸಾರ್ವಜನಿಕರ ಜೀವ ಹಾನಿ ತಪ್ಪಿಸುವ ಉದ್ದೇಶದಿಂದ ಅಂತಹ ಅಪಾಯಕಾರಿ ಕೆರೆ, ಬಾವಿಗಳನ್ನು  ತಹಶೀಲ್ದಾರರು ಪರಿಶೀಲನೆ ನಡೆಸಿ ಮುಚ್ಚಿಸಲು ಕ್ರಮ ಕೈಗೊಳ್ಳಲು  ಬರೆಯುವುದೆಂದು ನಿರ್ಣಯಿಸಲಾಯಿತು.

ಪಡ್ಯಂಬೆಟ್ಟು- ಕಾಕೆಕೊಚ್ಚಿ ದಾರಿ ಸಮಸ್ಯೆ ಇತ್ಯರ್ಥಕ್ಕೆ ಬರೆಯುವುದು- ಪಂಚಾಯತ್ ವ್ಯಾಪ್ತಿಯ ಪಡ್ಯಂಬೆಟ್ಟು- ಕಾಕೆಕೊಚ್ಚಿ ಎಂಬಲ್ಲಿ  ಸಾರ್ವಜನಿಕ ದಾರಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಮುಚ್ಚಿದ ಕಾರಣ ಸಮಸ್ಯೆಯಾದ ಬಗ್ಗೆ ಸಾರ್ವಜನಿಕರಿಂದ ಬಂದ ಅರ್ಜಿಯ ಬಗ್ಗೆ ಚರ್ಚಿಸಿದ ಸಭೆ ಇತ್ತೀಚೆಗೆ ಒಬ್ಬರು ಅಲ್ಲಿ ಭೂಮಿ ಖರೀದಿಸಿದ್ದು ಅವರು ಆ ದಾರಿಯನ್ನು ಮುಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಆ ದಾರಿ ಸಾರ್ವಜನಿಕ ದಾರಿಯಾದುದರಿಂದ ಅಲ್ಲಿ ಪರಿಶೀಲನೆ ನಡೆಸಿ ಸೂಕ್ತವಾದ ದಾರಿಯ ಬಗ್ಗೆ ವ್ಯವಸ್ಥೆ ಮಾಡಲು ತಹಶೀಲ್ದಾರರಿಗೆ ಬರೆಯಲು ಸಭೆ ನಿರ್ಣಯಿಸಿತು.

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯುಕ್ತಿ ಗೊಳಿಸಲಿ- ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಡಿಮೆಯಾದರೂ ಒಂದು ಪರ್ಮನೆಂಟ್ ವೈದ್ಯರ ಕೊರತೆ ಮಾತ್ರ ಹಾಗೆಯೇ ಇದೆ. ಇದರಿಂದ ಗಡಿನಾಡ ಪ್ರದೇಶವೂ ಆದ ಇಲ್ಲಿಯ ಸುಮಾರು ಒಂಬತ್ತು ಗ್ರಾಮದ ಜನರಿಗೆ ನರಕ ಯಾತನೆಯಾಗಿದೆ ಎಂದು ವಿಷಯ ಪ್ರಸ್ತಾಪಿಸಿದ ಸದಸ್ಯ ಶಾಹುಲ್ ಹಮೀದ್ ಈಗಾಗಲೇ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಇಲ್ಲಿಗೆ ಖಾಯಂ ಆಗಿ ವರ್ಗಾವಣೆ ಮಾಡಲಾಗಿದೆ ಅವರನ್ನು ಅಲ್ಲಿಂದ ಬಿಟ್ಟು ಕೊಡಲು ಮಾತ್ರ ಬಾಕಿ ಎಂಬ ಮಾತೂ ಕೇಳಿ ಬರುತ್ತಿದೆ ಎಂದರು. ಅದಕ್ಕೆ ಅಧ್ಯಕ್ಷರು ಮಾತನಾಡಿ ತಕ್ಷಣ ಅಲ್ಲಿಂದ ಬರಲು ಏನಾದರೂ ಆಡಳಿತಾತ್ಮಕ ಸಮಸ್ಯೆ ಇರಬಹುದು. ಅದರ ಬಗ್ಗೆ ನಾವು ಸ್ವಲ್ಪ ದಿನ ಕಾದು ನೋಡುವ ವೈದ್ಯರು ಖಾಯಂ ನೆಲೆಯಲ್ಲಿ ಬರದಿದ್ದರೆ ಮುಂದೆ ಯಾವ ಕ್ರಮ ಕೈಗೊಳ್ಳುವುದೆಂದು ಆಲೋಚಿಸುವ ಎಂದು ಹೇಳಿದರು.

ಇಲಾಖೆಯ ಪತ್ರಗಳ ಬಗ್ಗೆ ಮತ್ತು ಸಾರ್ವಜನಿಕ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಜಗನ್ಮೋಹನ ರೈ, ಶಾಹುಲ್ ಹಮೀದ್, ಜಯಂತ ಕುಮಾರ್, ಯಶೋಧ, ಮೈಮುನಾತುಲ್ ಮೆಹ್ರಾ, ಮಮತಾ, ರತ್ನ ಕುಮಾರಿ ಉಪಸ್ಥಿತರಿದ್ದರು. ಪಿಡಿಒ ಚಂದ್ರಮತಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಅರುಣ್ ಕುಮಾರ್, ವಿಶ್ವನಾಥ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.