Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ‘ಸಡಗರ-2019’

  • ವಿದ್ಯಾರ್ಥಿಗಳಿಗೆ ಪೋಷಕರ ಪ್ರೋತ್ಸಾಹ ಇರಲಿ, ಒತ್ತಡ ಸಲ್ಲದು- ಶಯನಾ ಜಯಾನಂದ
  • ಪ್ರತಿಭಾ ಕಾರಂಜಿ ಸಾಧನೆ ತೋರಲು ವೇದಿಕೆ- ಮುಕುಂದ ಬಜತ್ತೂರು
  • ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೂ ಅವಕಾಶ ದೊರೆಯುವಂತಾಗಿದೆ- ಯಶವಂತ ಜಿ.
  • ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ವೇದಿಕೆ- ಹಮ್ಮಬ್ಬ ಶೌಕತ್ ಅಲಿ

ಉಪ್ಪಿನಂಗಡಿ: ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ತಮ್ಮ ಪ್ರತಿಭೆಯಲ್ಲಿ ತಮ್ಮದೇ ಆದ ವಿಶಿಷ್ಠತೆ ಇರುತ್ತದೆ, ಆದರೆ ಕೆಲವೊಂದು ಪೋಷಕರು ತಮ್ಮ ಮಕ್ಕಳು ಬಹುಮಾನ ತರಬೇಕು ಎಂಬ ಆಸೆಯಲ್ಲಿ ಅತಿಯಾದ ಒತ್ತಡಗಳನ್ನು ಹಾಕುತ್ತಾರೆ, ಇದರಿಂದಾಗಿ ವಿದ್ಯಾರ್ಥಿಗಳು ವಿಚಲಿತರಾಗುತ್ತಾರೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಇರಲಿ, ಒತ್ತಡ ಸಲ್ಲದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ ಹೇಳಿದರು.

ಅವರು ಸೆ. 12ರಂದು ಹಿರೇಬಂಡಾಡಿ ಗ್ರಾಮದ ಕೆಮ್ಮಾರ ಸರ್ಕಾರಿ ದ.ಕ.ಜಿ.ಪ. ಶಾಲೆಯಲ್ಲಿ ನಡೆದ ಉಪ್ಪಿನಂಗಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ “ಸಡಗರ-2019” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆ ಇರುತ್ತದೆ, ಅದನ್ನು ಹುಡುಕಿ ತೆಗೆಯುವ ಕೆಲಸ ಆಗಬೇಕಾಗಿದ್ದು, ಇದನ್ನು ವಿದ್ಯಾರ್ಥಿ ಪೋಷಕರು ಮತ್ತು ಶಿಕ್ಷಕರಿಂದ ಆಗಬೇಕಾಗಿದ್ದು, ಆದರೆ ಅದು ಬಹುಮಾನಕ್ಕೆ ಸೀಮಿತ ಆಗುವ ರೀತಿಯ ಒತ್ತಡ ಬೀರದೆ ಪ್ರೋತ್ಸಾಹದ ಮೂಲಕ ಹೊರ ತರಬೇಕು ಎಂದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಸದಸ್ಯ ಮುಕುಂದ ಬಜತ್ತೂರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಕವಾಗಿದ್ದು, ಅದು ಸುಪ್ತವಾಗಿರುತ್ತದೆ ಅದನ್ನು ಪ್ರಕಟ ಮಾಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಾಧನೆ ತೋರಬೇಕು ಎಂದರು. ಉಪ್ಪಿನಂಗಡಿ ಸೇವಾ ಸಹಕಾರಿ  ಬ್ಯಾಂಕ್ ಅಧ್ಯಕ್ಷ ಯಶವಂತ ಜಿ. ಮಾತನಾಡಿ ಹಿಂದೆಲ್ಲ ಪೇಟೆ, ಪಟ್ಟಣದ ಮಕ್ಕಳಿಗೆ ಮಾತ್ರ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ ಇತ್ತು, ಆದರೆ ಇದೀಗ ಪ್ರತಿಭಾ ಕಾರಂಜಿ ಮೂಲಕ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೂ ಅವಕಾಶ ದೊರೆಯುವಂತಾಗಿದೆ, ಇದೊಂದು ಸರ್ಕಾರದ ಉತ್ತಮ ಯೋಜನೆ ಎಂದರು. ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ವೇದಿಕೆಯಾಗಿದ್ದು, ಇಲ್ಲಿ ಬಹಳಷ್ಟು ಸ್ಪರ್ಧೆಗಳು ನಡೆಯುತ್ತದೆ, ಆ ಮೂಲಕ ವೇದಿಕೆ ಮೇಲೆ ಏರುವ ಅಂಜಿಕೆಯೂ ದೂರ ಆಗುತ್ತದೆ ಎಂದರು.

ಸಮಾರಂಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಉಷಾ ಲಕ್ಷ್ಮೀಶ, ಸದಸ್ಯರಾದ ಮುದ್ದ ಹೆಚ್., ಸದಾನಂದ ಶೆಟ್ಟಿ, ಮಂಜುಳಾ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಹೇಮಾ ಮೋಹನದಾಸ್ ಶೆಟ್ಟಿ, ಸದಸ್ಯರಾದ  ಸುಜಾತ ಜಯರಾಮ ಶೆಟ್ಟಿ, ಕೆಮ್ಮಾರ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೆಲಿಕತ್  ರಹಿಮಾನ್ ಖಾನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಪ್ರತಿಭಾ ಕಾರಂಜಿ ಸ್ವಾಗತ ಸಮಿತಿ ಅಧ್ಯಕ್ಷ ಉಮ್ಮರ್ ಕೆಮ್ಮಾರ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಝೀಝ್ ಬಿ.ಕೆ., ಶಾಲಾಭಿವೃದ್ಧಿ ಸಮಿತಿ ಒಕ್ಕೂಟದ ಅಧ್ಯಕ್ಷ ಮೊಹಿದೀನ್ ಕುಟ್ಟಿ ಉಪಸ್ಥಿತರಿದ್ದರು.

ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ಅಶ್ರಫ್ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕಿ ತಿ ಜಯಶ್ರೀ ವಂದಿಸಿದರು. ಶಿಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.