Home_Page_Advt
Home_Page_Advt
Home_Page_Advt
Home_Page_Advt
Breaking News

ಸೆ.14: ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಅಥ್ರೈಟ್ಸ್/ರಕ್ತವಾತ, ಮೂಳೆ ತಪಾಸಣಾ ಶಿಬಿರ

ವಿಟ್ಲ; ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೆ.14ರಂದು ಉಚಿತ  ಅಥ್ರೈಟ್ಸ್/ರಕ್ತವಾತ ಹಾಗೂ ಮೂಳೆ ತಪಾಸಣಾ ಶಿಬಿರ ನಡೆಯಲಿದೆ. 40 ವರ್ಷಕ್ಕಿಂತ ಮೇಲ್ಪಟ್ಟ ಸ್ತ್ರೀ ಅಥವಾ ಪುರುಷರಲ್ಲಿ ಕಂಡುಬರುವ  ಬೆನ್ನು ನೋವು, ಸೊಂಟ ನೋವು, ಮೊಣಕಾಲು ನೋವು,ಸ್ನಾಯು ನೋವು ಈ ಲಕ್ಷಣಗಳು ಮುಂದೆ ಮೂಳೆಯ ಸವೆತಕ್ಕೆ ಅಥವಾ ಮೂಳೆಯ ಮುರಿತಕ್ಕೆ ಕಾರಣವಾಗಬಹುದು ಆದುದರಿಂದ ಈ ಉಚಿತ ಶಿಬಿರದ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಬೆಳಿಗ್ಗೆ 9.00 ಘಂಟೆಯಿಂದ ಮಧ್ಯಾಹ್ನ 2.೦೦ಘಂಟೆವರೆಗೆ ಶಿಬಿರ ನಡೆಯಲಿದೆ. ಪ್ರತೀ ತಿಂಗಳ 2ನೇ ಶನಿವಾರ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ನಡೆಯಲಿರುವುದು ಹಾಗೂ ಪ್ರತೀ ತಿಂಗಳ ನಾಲ್ಕನೇ ಶನಿವಾರ ಉಚಿತ ಅಥ್ರೈಟ್ಸ್  ತಪಾಸಣಾ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7353774782, 9448859080, 7349479888 ಯನ್ನು ಸಂಪರ್ಕಿಸಬಹುದಾಗಿದೆ.

ಶಿಬಿರ ದಿನದ ಸೌಲಭ್ಯಗಳು:
1. ಉಚಿತ ಅಥ್ರೈಟ್ಸ್/ರಕ್ತವಾತ  ಹಾಗೂ  ಬದಲಿ ಕೀಲು  ಜೋಡಣೆಯ ತಪಾಸಣೆ ಮಾಡಲಾಗುವುದು.
2. ಮೂಳೆ ಸಾಂದ್ರತೆಯ ಸ್ಕ್ಯಾನ್ ( BMD) ಉಚಿತವಾಗಿ ಮಾಡಲಾಗುವುದು.
3. ಪಿಸಿಯೋಥೆರಪಿ, ಎಕ್ಸ್ ರೇ 50% ರಿಯಾಯಿತಿ ನೀಡಲಾಗುವುದು.
4. ಲ್ಯಾಬೋರೇಟರಿ ಪರೀಕ್ಷೆಗಳು (Hb,Tc Dc,ESR,Ra Factor,Serum Uric Acid) 50%  ರಿಯಾಯಿತಿ ನೀಡಲಾಗುವುದು.
5. ಔಷಧಿಯಲ್ಲಿ 10% ರಿಯಾಯಿತಿ ನೀಡಲಾಗುವುದು.
6. ಅವಶ್ಯವಿದ್ದಲ್ಲಿ ಮೂಳೆ ಶಸ್ತ್ರ ಚಿಕಿತ್ಸೆ ರಿಯಾಯಿತಿ ದರದಲ್ಲಿ ಮಾಡಲಾಗುವುದು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.