Home_Page_Advt
Home_Page_Advt
Home_Page_Advt
Home_Page_Advt
Breaking News

ಕೊಳ್ತಿಗೆ: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ರೂ.6012207.48 ನಿವ್ವಳ ಲಾಭ, ಶೇ.21 ಡಿವಿಡೆಂಟ್, ರೂ.1084534202.40 ವ್ಯವಹಾರ

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.12 ರಂದು ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಸಂತ ಕುಮಾರ್ ಕೆ.ರವರು ವರದಿ ವಾಚಿಸುತ್ತಾ, ಸಂಘದಲ್ಲಿ ಒಟ್ಟು 2941 ಮಂದಿ ಅ ತರಗತಿ ಸದಸ್ಯರಿದ್ದು, ಈ ಪೈಕಿ 1177 ಸದಸ್ಯರು ಅಪೂರ್ಣ ಪಾಲುಗಳನ್ನು ಹೊಂದಿದ್ದು ಒಟ್ಟು 1764 ಮಂದಿ ಮಾತ್ರ ಪೂರ್ಣ ಪಾಲು ಹೊಂದಿದ ಸದಸ್ಯರು ಇದ್ದಾರೆ ಎಂದರು. ಸಂಘವು ವರದಿ ವರ್ಷದಲ್ಲಿ ರೂ.1084534202.40 ವ್ಯವಹಾರ ನಡೆಸಿದ್ದು, ರೂ.6012207.48 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.21 ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ ಸದಸ್ಯರಿಗೆ 18.27ಕೋಟಿ ಹೊಸ ಸಾಲ ನೀಡಲಾಗಿದೆ. ಅವಧಿಗೆ ಸರಿಯಾಗಿ ರೂ.16.23 ಕೋಟಿ ಸಾಲವನ್ನು ಸದಸ್ಯರು ಮರುವಾವತಿಸಿದ್ದು, ವರ್ಷದ ಕೊನೆಗೆ ರೂ.18.21 ಕೋಟ ಹೊರಬಾಕಿ ಇರುತ್ತದೆ. ವರದಿ ವರ್ಷದಲ್ಲಿ ಸಾಲಗಳ ತಗಾದೆಯ ಶೇ.100 ಮರುಪಾವತಿಯಾಗಿರುತ್ತದೆ.ಸದಸ್ಯರ ಸಾಲ ಮರುಪಾವತಿಯಲ್ಲಿ ಶೇ.100 ಪ್ರಗತಿ ಸಾಧಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ವಿದ್ಯಾರ್ಥಿ ಶಿಷ್ಯ ವೇತನ ವಿತರಣೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಶಿಷ್ಯವೇತನ ವಿತರಿಸಲಾಯಿತು. ಮಧುರಾ, ಸ್ಮಿತಾ ಎಸ್.ರೈ, ವೀಣಾಶ್ರೀ, ಸಾತ್ವಿಕ್ ಎಂ.ಎಸ್, ಎ.ಕೆ ಸುಬ್ರಹ್ಮಣ್ಯ ಚೈತನ್ಯ ಒಟ್ಟು 5 ಮಂದಿ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶಿಷ್ಯವೇತನ ವಿತರಿಸಲಾಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ.ರವರು ಸೂಚನಾ ಪತ್ರ ಓದಿದರು. ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶರತ್ ಕುಮಾರ್‌ರವರು ಸಾಲ ಮನ್ನಾ ಮತ್ತು ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ ಬಿ, ನಿರ್ದೇಶಕರುಗಳಾದ ಜನಾರ್ದನ ಪಿ, ಮಾಧವ ಗೌಡ ಡಿ, ವೆಂಕಟ್ರಮಣ ಪಿ, ದಿವಾಕರ ಬಂಗೇರ ಎಸ್, ಚಂದ್ರಾವತಿ ಕೆ, ಅನಿತಾ ಶೆಟ್ಟಿ ಡಿ, ವೃತ್ತಿಪರ ನಿರ್ದೇಶಕ ಬೆಳ್ಯಪ್ಪ ಗೌಡ ಉಪಸ್ಥಿತರಿದ್ದರು. ನಿರ್ದೇಶಕ ತೀರ್ಥಾನಂದ ದುಗ್ಗಳ ಸ್ವಾಗತಿಸಿದರು. ಸುಮ ಶ್ವೇತಾ ಕುಮಾರ್ ಪ್ರಾರ್ಥಿಸಿದರು. ನಿರ್ದೇಶಕ ಸತೀಶ್ ಪಾಂಬಾರು ವಂದಿಸಿದರು. ಸಿಬ್ಬಂದಿ ವರ್ಗದ ಬಾಲಗಂಗಾಧರ ಕೆ, ಸುಬ್ಬಯ್ಯ ಕೆ, ಜಯರಾಮ ಕೆ, ಭರತ್ ರಾಜ್, ಉಮೇಶ ಬಿ, ಹುಕ್ರಪ್ಪ ಗೌಡ ಮತ್ತು ದಯಾನಂದ ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.