Home_Page_Advt
Home_Page_Advt
Home_Page_Advt
Breaking News

ಮಾಡಾವು-ಪೆರ್ಲಂಪಾಡಿ ರಸ್ತೆ ಅವ್ಯವಸ್ಥೆ: ಮಾಲೆತ್ತೋಡಿಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ

ಪುತ್ತೂರು: ಮಾಡಾವು ಕಟ್ಟೆಯಿಂದ ಉಪ್ಪಳಿಗೆ, ಸಿದ್ದಮೂಲೆ,ಮಾಲೆತ್ತೋಡಿ ಮೂಲಕ ಪೆರ್ಲಂಪಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಸ್ಥಳೀಯರು ಮಾಲೆತ್ತೋಡಿ ಎಂಬಲ್ಲಿ ರಸ್ತೆ ಮಧ್ಯೆ ಉಂಟಾದ ಗುಂಡಿಗೆ ಬಾಳೆ ಗಿಡ ನೆಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪರ್ಕ ರಸ್ತೆ
ಬೆಳ್ಳಾರೆ ರಸ್ತೆಯ ಮಾಡಾವು ಕಟ್ಟೆಯಿಂದ ಪೆರ್ಲಂಪಾಡಿ-ಅಮ್ಚಿನಡ್ಕದಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಮಾಡಾವುಕಟ್ಟೆಯಿಂದ ಸುಮಾರು 5 ಕಿ.ಮೀ ರಸ್ತೆ ಇದಾಗಿದ್ದು ಮಾಡಾವುಕಟ್ಟೆ ಬಳಿಯಿಂದ ಇತ್ತೀಚೆಗೆ ಒಂದಷ್ಟು ಮೀಟರ್ ಕಾಂಕ್ರೀಟ್ ಆಗಿದೆ. ಅದೇ ರೀತಿ ಸ್ವಲ್ಪ ಮುಂದಕ್ಕೆ ಒಂದಷ್ಟು ಮೀಟರ್ ಕಾಂಕ್ರೀಟ್ ಮಾಡಲಾಗಿದೆ. ಇದಿಷ್ಟು ಬಿಟ್ಟರೆ ಉಳಿದಂತೆ ರಸ್ತೆ ಸಂಪೂರ್ಣ ಹಾಳಾಗಿದೆ. ಸಿದ್ಧಮೂಲೆ-ಮಾಲೆತ್ತೋಡಿ ಎಂಬಲ್ಲಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ರಸ್ತೆ ಮಧ್ಯೆಯೇ ಹೊಂಡಗಳ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನ ಸವಾರರ ಪರದಾಟ
ಕೆಲವು ಕಡೆಗಳಲ್ಲಿ ರಸ್ತೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯುಂಟಾದರೆ ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಗೊಂಡು ಮಾಡಾವುಕಟ್ಟೆ-ಪೆರ್ಲಂಪಾಡಿ ರಸ್ತೆಗೆ ಮುಕ್ತಿ ಕೊಡುವರೇ ಕಾದು ನೋಡಬೇಕಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.