Home_Page_Advt
Home_Page_Advt
Home_Page_Advt
Home_Page_Advt
Breaking News

ವಿಟ್ಲ ವಲಯ ಮಟ್ಟದ ಟ್ಯಾಕ್ಸಿ ಕ್ಯಾಬ್ ಚಾಲಕ ಮಾಲಕ ಸಂಘ ಉದ್ಘಾಟನೆ – ಮಾಹಿತಿ ಕಾರ್ಯಾಗಾರ

ವಿಟ್ಲ: ವಾಹನ ಚಾಲಕರು ತಮ್ಮ ತಮ್ಮ ವಾಹನಗಳ ದಾಖಲೆ ಪತ್ರ ಹಾಗೂ ಲೈಸೆನ್ಸ್ ಗಳನ್ನು ಜೊತೆಗಿಟ್ಟುಕೊಳ್ಳಬೇಕು ಹಾಗೆಯೇ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪಾಸಣೆ ನಡೆಸುವಾಗ ದಾಖಲೆಗಳಿಲ್ಲದಿದ್ದರೆ ನಿರ್ದಾಕ್ಷೀಣ್ಯವಾಗಿ ದಂಡವಿಧಿಸಲಾಗುವುದು ಎಂದು ವಿಟ್ಲ ಠಾಣಾ ಎಸ್.ಐ ಯಲ್ಲಪ್ಪರವರು ಹೇಳಿದರು.

ಅವರು ಸೆ.11ರಂದು ವಿಟ್ಲ ಠಾಣೆಯಲ್ಲಿ ವಿಟ್ಲ ವಲಯ ಮಟ್ಟದ ‘ಮಧ್ಯಂತರವಿರಲಿ’ ಟ್ಯಾಕ್ಸಿ ಕ್ಯಾಬ್ ಚಾಲಕ ಮಾಲಕ ಸಂಘವನ್ನು ಉದ್ಘಾಟಿಸಿ ನೂತನ ಮೋಟಾರು ವಾಹನ ಕಾಯ್ದೆಯ ಕುರಿತು ವಾಹನ ಚಾಲಕರಿಗೆ  ಮಾಹಿತಿ ನೀಡಿದರು. ನೂತನ ಮೋಟಾರು ಕಾಯ್ದೆಯ ಅನ್ವಯ ಯಾವ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ ಮತ್ತು ಯಾವೆಲ್ಲಾ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದರು. ಇನ್ನೂ ಮುಂದೆ ಮಾಹಿತಿ ಇಲ್ಲ ಅಥವಾ ಪೋಲೀಸರು ದಂಡ ವಸೂಲಿ ಮಾಡಿದ್ದಾರೆ ಎಂಬ ಆರೋಪಗಳು ಬೇಡ, ನಿಯಮಗಳಿಗೆ ಅನುಸಾರವಾಗಿ ದಂಡ ವಸೂಲಿ ಮಾಡಲಾಗುತ್ತದೆ ಎಂದರು. ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್, ಕಾರ್ಯದರ್ಶಿ ಯು.ಕೆ.ಮೋಹನ‌ನೀರ್ಕಜೆ, ಜತೆಕಾರ್ಯದರ್ಶಿ ಅಬ್ದುಲ್ಲಾ, ಸಂಘಟನಾ‌ ಕಾರ್ಯದರ್ಶಿ ಧನಂಜಯ ಕಾಶಿಮಠ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.