Home_Page_Advt
Home_Page_Advt
Home_Page_Advt
Breaking News

ಮೆಸ್ಕಾಂ ಸಿಬಂದಿ ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಸೊತ್ತಿಗೆ ಹಾನಿ ಆರೋಪ: ಬಂಧಿತ ಮಾಜಿ ಪುರಸಭೆ ಅಧ್ಯಕ್ಷರಿಗೆ ನ್ಯಾಯಾಂಗ ಬಂಧನ

ಪುತ್ತೂರು: ವಿದ್ಯುತ್ ಲೈನ್‌ಗೆ ತಾಗಿಕೊಂಡಿರುವ ಗೆಲ್ಲುಗಳನ್ನು ಮೆಸ್ಕಾಂ ಸಿಬ್ಬಂದಿಗಳು ತೆರವು ಮಾಡುತ್ತಿದ್ದ ಸಂದರ್ಭ ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಸೊತ್ತಿಗೆ ಹಾನಿ ಮಾಡಿದ್ದ ಆರೋಪದಲ್ಲಿ ಬಂದಿತರಾಗಿದ್ದ ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್ ಅವರಿಗೆ ಪುತ್ತೂರು ನ್ಯಾಯಾಲಯ ಸೆ.30ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

ಮೆಸ್ಕಾಂ ಪವರ್ ಮ್ಯಾನ್ ಆಗಿರುವ ಶಾಂತಿಗೋಡು ಗ್ರಾಮದ ಆನಡ್ಕ ನಿವಾಸಿ ಐತ್ತಪ್ಪ ಅವರು ಪಡೀಲ್ ಕನಕದಾಸ ಕಾಲೋನಿಯಲ್ಲಿ ವಿದ್ಯುತ್ ಲೈನ್‌ಗೆ ತಾಗಿಕೊಂಡಿದ್ದ ಮರದ ಗೆಲ್ಲನ್ನು ತನ್ನ ಜೊತೆಗಾರರೊಂದಿಗೆ ಸೇರಿ ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್ ಎಂಬವರು ಬಂದು ತನ್ನ ಕಂಪೌಂಡ್‌ನ ಬದಿಯಲ್ಲಿರುವ ತೆಂಗಿನ ಮರದ ಗರಿ ಮತ್ತು ಹಲಸಿನ ಮರದ ಗೆಲ್ಲುಗಳನ್ನು ಕಡಿದ ವಿಚಾರವಾಗಿ ಪವರ್ ಮ್ಯಾನ್ ಐತ್ತಪ್ಪ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿ, ಮರದ ಗೆಲ್ಲು ತೆರವು ಮಾಡಲು ಉಪಯೋಗಿಸುತ್ತಿದ್ದ ಗರಗಸವನ್ನು ತುಂಡು ಮಾಡಿದ್ದ ಪರಿಣಾಮ ರೂ.18 ಸಾವಿರ ನಷ್ಟ ಸಂಭವಿಸಿದೆ ಎಂದು ಐತ್ತಪ್ಪರವರು ಪೊಲೀಸರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿ ಪೊಲೀಸರು ಗಣೇಶ್ ರಾವ್ ಅವರನ್ನು ಬಂಧಿಸಿದ್ದು, ಸೆ.16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಗಣೇಶ್ ರಾವ್ ಅವರಿಗೆ ಸೆ.30ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.