ಸತೀಶ್ ಪೂಜಾರಿ ಬೋಳಂತಿಮಾರ್ ರವರ ಚಿಕಿತ್ಸೆಗೆ ನೆರವು ಬೇಕಾಗಿದೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುರಿಯ ಗ್ರಾಮದ ಬೋಳಂತಿಮಾರು ನಾರಾಯಣ ಪೂಜಾರಿ ಮತ್ತು ಚಂದ್ರಾವತಿಯವರ ಪುತ್ರ ಸತೀಶ್ ಪೂಜಾರಿ ಬೋಳಂತಿಮಾರ್‌ರವರು ಮೂರು ವರ್ಷಗಳ ಹಿಂದೆ ಕೂಲಿ ಕೆಲಸವನ್ನು ಮಾಡುತ್ತಿರುವಾಗ ಕಟ್ಟಡದಿಂದ ಬಿದ್ದು ನಡೆಯಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ, ಇವರಿಗೆ ಇದುವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 20 ಲಕ್ಷ ರೂ. ಖರ್ಚು ತಗಲಿದ್ದು, ಕತ್ತಾರ್‌ನ ಎಟಿಎಸ್ ಗ್ರೂಪ್‌ನ ಮುಖ್ಯಸ್ಥರಾದ ಡಾ.ಮೂಡಂಬೈಲು ರವಿ ಶೆಟ್ಟಿ ನೇಸರ ಹಾಗೂ ಬಳ್ಳಮಜಲು ಸುರೇಂದ್ರ ರೈರವರುಗಳು ರೂ.12 ಲಕ್ಷ ಸಹಾಯ ಮಾಡಿರುತ್ತಾರೆ.

ಸತೀಶ್ ಪೂಜಾರಿರವರ ಮನೆಯಲ್ಲಿ ಯಾವುದೇ ರೀತಿಯ ಆದಾಯವಾಗಲಿ, ಚಿಕಿತ್ಸೆ ಕೊಡಿಸುವ ಅನುಕೂಲಕರ ವಾತಾವರಣವಾಗಲಿ ಇಲ್ಲದ ಕಾರಣ ಇವರ ಸಹೋದರರು ಇವರ ಚಿಕಿತ್ಯೆಯ ವೆಚ್ಚಕ್ಕೆ ಪರದಾಡುವಂತಾಗಿದೆ. ಪ್ರತಿ ತಿಂಗಳು ಇವರ ಚಿಕಿತ್ಸೆಗೆ 7 ರಿಂದ 8 ಸಾವಿರ ರೂತನಕ ಖರ್ಚು ಆಗುತ್ತಿದ್ದು. ಇದರಿಂದ ಇವರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಇದನ್ನು ತಿಳಿದ ಅನೇಕ ಸಂಘ-ಸಂಸ್ಥೆಗಳು, ಊರ-ಪರವೂರ ದಾನಿಗಳು ಸಾಧ್ಯವಾದಷ್ಟು ಧನ ಸಹಾಯವನ್ನು ನೀಡಿರುತ್ತಾರೆ.

ಮುಂದಿನ ಹೆಚ್ಚಿನ ಚಿಕಿತ್ಯೆಗಾಗಿ ತಮಿಳುನಾಡಿಗೆ ಹೋಗಬೇಕಾಗಿರುವುದರಿಂದ ಇದಕ್ಕೆ 10 ಲಕ್ಷ ರೂ. ಬೇಕೆಂದು ವೈದ್ಯರು ತಿಳಿಸಿರುತ್ತಾರೆ. ಆದುರಿಂದ ಸಹೃದಯಿ ದಾನಿಗಳು ಮತ್ತು ಸಂಘ-ಸಂಸ್ಥೆಗಳು ಆದಷ್ಟು ಸಹಾಯವನ್ನು ಮಾಡಬೇಕಾಗಿದೆ ಎಂದು ಸ್ವತಃ ಸತೀಶ್ ಪೂಜಾರಿರವರು ತಮ್ಮ ಕಷ್ಟವನ್ನು `ಸುದ್ದಿ’ಯೊಂದಿಗೆ ಹಂಚಿಕೊಂಡಿದ್ದು ತಮ್ಮೆಲ್ಲರ ಸಹಕಾರವನ್ನು ಬಯಸಿದ್ದಾರೆ. ಧನಸಹಾಯವನ್ನು – ಸತೀಶ್ ಬಿ., ವಿಜಯ ಬ್ಯಾಂಕ್ ಕುಂಬ್ರ ಶಾಖೆ, ಖಾತೆ ನಂಬ್ರ- 124201012000104. IFSC NO – VIJB 0001242, ಇವರಿಗೆ ಕಳಿಸಿಕೊಡಬಹುದು. ಸತೀಶ್ ಪೂಜಾರಿರವರ ಮೊಬೈಲ್ ನಂಬ್ರ- 9741160572 .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.