ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ, ಆರೋಗ್ಯಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 12 ಕಾಯಿ ಗಣಪತಿ ಹವನ

Puttur_Advt_NewsUnder_1
Puttur_Advt_NewsUnder_1

 

  • ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ದ್ವೇಷ ಸಾಧನೆ -ಹೇಮನಾಥ ಶೆಟ್ಟಿ ಆರೋಪ

ಪುತ್ತೂರು: ಇ.ಡಿ ಬಂಧನದಲ್ಲಿರುವ ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯ ಸಿಗಬೇಕು ಮತ್ತು ಅವರಿ ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಸೆ.17ರಂದು ಅಂಗಾರಕ ಸಂಕಷ್ಟಿ ದಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಾಲಗಣಪತಿ ಗುಡಿಯ ಬಳಿ ವಿಶೇಷ 12 ಕಾಯಿ ಗಣಪತಿ ಹವನ ಸೇವೆ ಮಾಡಲಾಯಿತು.


ಬೆಳಿಗ್ಗೆ ಬನ್ನೂರು ರೈತ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿದ್ದ ಎನ್.ಕೆ.ಜಗನ್ನಿವಾಸ ರಾವ್ ಅವರು ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ನಡೆದ ಪೂರ್ಣಾಹುತಿ ಯಲ್ಲಿ ಕಾವು ಹೇಮನಾಥ ಶೆಟ್ಟಿ ಮತ್ತು ಅವರ ಪತ್ನಿ ಜಿ.ಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿಯವರು ಪ್ರಾರ್ಥನೆ ನೆರವೇರಿಸಿದರು. ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಅವರು ಪ್ರಾರ್ಥನೆ ನಡೆಸಿದರು. ಹರೀಶ್ ಭಟ್ ಗಣಪತಿ ಹವನ ನೆರವೇರಿಸಿದರು.

ಬಿಜೆಪಿ ಕಾಂಗ್ರೆಸ್ ಮೇಲೆ ದ್ವೇಷ ಸಾಧನೆ ಮಾಡುತ್ತಿದೆ:
ದೇಶ, ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದು ಕಾಂಗ್ರೆಸ್ ಮೇಲೆ ದ್ವೇಷ ಸಾಧನೆ ಮಾಡುತ್ತಿದ್ದು, ರಾಜ್ಯದ ಸಮರ್ಥ ನಾಯಕ ಕಾಂಗ್ರೆಸ್‌ನ ಶಕ್ತಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿ ಮಾಡಿ ಅವರನ್ನು ಕೇಂದ್ರದ ಆಧೀನದಲ್ಲಿರುವ ಇ.ಡಿ ಸಂಸ್ಥೆಯ ಮೂಲಕ ಬಂಧಿಸಿದ್ದಾರೆ. ಅವರಿಗೆ ನ್ಯಾಯ ಮತ್ತು ಅವರಿಗೆ ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಇವತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಗಣಪತಿ ಹವನ ಸೇವೆ ಮಾಡಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಪತ್ರಕರ್ತರೊಂದಿಗೆ ಮಾತನಾಡಿ ದೇಶದ ಮಾಜಿ ವಿತ್ತ ಸಚಿವ ಚಿದಂಬರಮ್ ಅವರನ್ನು ಏನೆನೋ ಕಾರಣ ಕೊಟ್ಟು ಅವರ ಉದ್ಯಮ ಬಂದ್ ಮಾಡುವ ರೀತಿಯಲ್ಲಿ ಅವನ್ನು ಜೈಲಿಗೆ ಹಾಕುವ ಕೆಲಸವನ್ನು ಪ್ರಧಾನಿ ಮೋದಿ, ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದಿದೆ. ಅದೇ ರೀತಿಯಲ್ಲಿ ಭ್ರಷ್ಟಾಚಾರ, ಮೋಸ ವಂಚನೆ ಮಾಡದಿದ್ದರೂ ಕರ್ನಾಟಕದ ಟ್ರಬಲ್ ಶೂಟರ್, ಕಾಂಗ್ರೆಸ್‌ನ ಸಂಕಷ್ಟ ಪರಿಸ್ಥಿತಿಯಲ್ಲೂ ರಾಷ್ಟ್ರಮಟ್ಟದ ಸಮಸ್ಯೆಗಳಿಗೂ ಸಮರ್ಥ ನಾಯಕತ್ವ ವಹಿಸಿಕೊಂಡು ಬರುತ್ತಿದ್ದ ರಾಜ್ಯದ ಪ್ರಬಲ ನಾಯಕ ಡಿಕೆಶಿ ಅವರನ್ನು ಕೇಂದ್ರದ ಆಧಿನಲ್ಲಿರುವ ಇ.ಡಿ ಸಂಸ್ಥೆಯಯ ಮೂಲಕ ಬಂಧಿಸಿದ್ದಾರೆ. ಡಿ.ಕೆ.ಶಿ ಅವರು ಉದ್ಯಮ, ವ್ಯವಹಾದಿಂದ ಕೋಟ್ಯಾಂತರ ರೂ ಸಂಪಾದನೆ ಮಾಡಿದರೂ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುವ ರೀತಿಯಲ್ಲಿ ಬಿಜೆಪಿ ಇವತ್ತು ನಡೆದು ಕೊಳ್ಳುತ್ತಿದೆ. ಅವರನ್ನು 15 ದಿನಗಳ ಕಾಲ ತನಿಖೆ ನಡೆಸಿದರೂ ಯಾರದ್ದೋ ಒತ್ತಡಕ್ಕೆ ಒಳಗಾಗಿ ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಇದು ಡಿಕೆಶಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದ ಅವರು ಡಿ.ಕೆ.ಶಿವಕುಮಾರ್ ನಂತಹ ಹಣದ ಉದ್ಯಮಿಗಳು ಬಹಳಷ್ಟು ಮಂದಿ ಇದ್ದಾರೆ. ಅವೆರೆಲ್ಲರನ್ನು ಇದೇ ರೀತಿಯ ಇ. ಡಿ ತನಿಖೆ ಮಾಡಬೇಕು. ಅನರ್ಹ ಶಾಕರಿಗೆ ಬಿಜೆಪಿ ರೂ. 300 ಕೋಟಿ ರೂಪಾಯಿಗಳನ್ನು ಕೊಟ್ಟಿರುವುದು ಕೂಡಾ ತನಿಖೆ ಆಗಬೇಕು. ಇವತ್ತು ಡಿ.ಕೆ.ಶಿವಕುಮಾರ್ ಅವರನ್ನು ಇ.ಡಿ.ಸಂಸ್ಥೆ ನಡೆಸಿಕೊಳ್ಳುವ ರೀತಿ ನಮಗೆ ನೋವು ತಂದಿದೆ. ಅದಕ್ಕಾಗಿ ವಿಶೇಷ ಪ್ರಾರ್ಥನೆ ಹೋಮ ನಡೆಸಿದ್ದೇವೆ. ಅವರಿಗೆ ಶೀಘ್ರ ನ್ಯಾಯ ಸಿಗಬೇಕು ಮತ್ತು ಬಿಡುಗಡೆ ಆಗಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಚಿದಾನಂದ ಬೈಲಾಡಿ, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಕಾರ್ಯದರ್ಶಿ ಸುಭಾಷ್ ರೈ ಬೆಳ್ಳಿಪ್ಪಾಡಿ, ರತ್ನಾಕರ ನಾಕ್, ರವಿಪ್ರಸಾದ್ ಶೆಟ್ಟಿ, ಕೊಂಕಣಿ ಅಕಾಡೆಮಿ ಸದಸ್ಯ ದಾಮೋದರ್ ಭಂಡಾರ್‌ಕರ್, ತಾ.ಪಂ ಸದಸ್ಯ ಪರಮೇಶ್ವರ ಭಂಡಾರಿ, ನಗರಸಭೆ ಮಾಜಿ ಸದಸ್ಯರಾದ ಸ್ವರ್ಣಲತಾ ಹೆಗ್ಡೆ, ಮುಕೇಶ್ ಕೆಮ್ಮಿಂಜೆ, ಎಪಿಎಂಸಿ ನಾಮನಿರ್ದೇಶಿತ ಮಾಜಿ ಸದಸ್ಯ ಮಹೇಶ್ ರೈ ಅಂಕೋತಿಮಾರ್, ಕೊರಗಪ್ಪ ಗೌಡ, ನಾಗೇಶ್ ಅಚಾರ್ಯ, ಕಿಟ್ಟಣ್ಣ ಗೌಡ ಬಪ್ಪಳಿಗೆ, ಜಯರಾಜ್ ಶೆಟ್ಟಿ ಅನಿಲೆ, ಚಂದ್ರಹಾಸ ರೈ ಬೋಲೋಡಿ, ಕೆ.ಪಿ.ಅಶೋಕ್ ಶೆಟ್ಟಿ, ಪ್ರಸಾದ್ ರೈ, ರಾಜೇಶ್ ಶೆಟ್ಟಿ, ಜಾನ್ ಪಿಂಟೊ, ನೇಮಾಕ್ಷ ಸುವರ್ಣ, ಕೇಶವ ಬೆದ್ರಾಳ, ಸದಾನಂದ ಶೆಟ್ಟಿ ಕೂರೇಲು, ಚಂದ್ರಶೇಖರ ಅಶ್ವಿನಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.