Home_Page_Advt
Home_Page_Advt
Home_Page_Advt
Breaking News

ಸೆ. 19ರಂದು ಕಡಬದಲ್ಲಿ ನಿಪ್ಪೋನ್ ಪೈಂಟ್ ಮಳಿಗೆ ಶುಭಾರಂಭ

ಕಡಬ : ಇಲ್ಲಿಯ ಕಡಬ-ಪಂಜ ರಸ್ತೆಯ ಮಧುರ ಕಾಂಪ್ಲೆಕ್ಸ್‌ನಲ್ಲಿ ಸೆ. 19ರಂದು ನಿಪ್ಪೋನ್ ಪೈಂಟ್ಸ್ ಮಳಿಗೆ ಶುಭಾರಂಭಗೊಳ್ಳಲಿದೆ. ತಾಲೂಕು ಕೇಂದ್ರವಾಗಿರುವ ಕಡಬ ಪೇಟೆಯು ವಿವಿಧ ರೀತಿಯ ವಾಣಿಜ್ಯ ಕೇಂದ್ರಗಳನ್ನು ಹೊಂದಿದ್ದು ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದ್ದಂತೆ ಪೇಟೆಯಾದ್ಯಂತ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳು ಕೈಗಾರಿಕೋದ್ಯಮಗಳು, ಕೃಷಿ ಕೈಗಾರಿಕಾ ಕ್ಷೇತ್ರಗಳು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದ್ದು ಈಗಾಗಲೇ ಹಲವಾರು ರೀತಿಯ ಹೊಸ ಮಾದರಿಯ ಪೈಂಟ್‌ಗಳು ಕಡಬದಲ್ಲಿದ್ದರೂ ಅಂತರಾಷ್ಟ್ರೀಯ ಗುಣಮಟ್ಟದ ವಿನೂತನ ಶೈಲಿಯು ಕಡಬ ಪ್ರದೇಶವನ್ನು ಪ್ರಥಮ ಬಾರಿಗೆ ಪರಿಚಯಿಸುವಂತಹ ನಿಪ್ಪೋನ್ ಪೈಂಟ್ಸ್ ಸಂಸ್ಥೆಯು  ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಹುಸೈನ್ ನೆಲ್ಯಾಡಿ ತಿಳಿಸಿದ್ದಾರೆ.

ಬೆಳಿಗ್ಗೆ 10ಗಂಟೆಗೆ ಕಡಬ ಜಿ.ಪಂ ಸದಸ್ಯರಾದ ಪಿ.ಪಿ ವರ್ಗೀಸ್ ಉದ್ಘಾಟಿಸಲಿದ್ದು, ನಿಕಟಪೂರ್ವ ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿಯಾಗಿದ್ದು ಉಳ್ಳಾಲ ಶಾಸಕರಾಗಿರುವ ಯು.ಟಿ ಖಾದರ್‌ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಜಿ.ಪಂ ಮಾಜಿ ಸದಸ್ಯ ಎಪಿಎಮ್‌ಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ , ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಕಡಬ ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ, ನೂಜಿಬಾಳ್ತಿಲ ಬೆಥನಿ ಪ.ಪೂ ಕಾಲೇಜಿನ ಸಂಚಾಲಕರಾದ ರೇ.ಫಾ ಸಕರಿಯಾಸ್ ನಂದಿಯಾಟ್, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಜಿ.ಪರಿಷತ್ ಮಾಜಿ ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್, ಕಡಬ ಆರ್‌ಟಿಜೆಎಮ್ ಅಧ್ಯಕ್ಷ ಹಾಜಿ ಎಸ್ ಅಬ್ದುಲ್ ಖಾದರ್, ಮಂಗಳೂರು ನೋಟರಿ ವಕೀಲರಾದ ಇಸ್ಮಾಯಿಲ್ ನೆಲ್ಯಾಡಿ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ಮಧುರ ಬಿಲ್ಡಿಂಗ್ ಮಾಲಕ ಚಿದಾನಂದ ಗೌಡ , ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಊರ ಪರವೂರ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಂಡು ಸಂಸ್ಥೆಯ ಯಶಸ್ವಿಗೆ ಸಹಕರಿಸಬೇಕೆಂದು ಸಂಸ್ಥೆಯ ಮಾಲಕ ಹುಸೈನ್ ವಿನಂತಿಸಿಕೊಂಡಿದ್ದಾರೆ.

ಪರಿಸರ ಸ್ನೇಹಿ -ಮನುಷ್ಯ ಸ್ನೇಹಿ ಪೈಂಟ್: ಕೆಮಿಕಲ್ ರಹಿತವಾಗಿದ್ದು ಗ್ರೀನ್ ಕೋ ಹಾಗೂ ಗ್ರೀನ್ ಪ್ರೋ ಪ್ರಶಸ್ತಿ ಪಡೆದಿರುವ ಏಷ್ಯನ್ ಖಂಡದ ನಂಬರ್ ಒನ್ ಪೈಂಟ್ ಕಂಪೆನಿಯಾಗಿದ್ದು, ಉತ್ತಮ ಬಾಳಿಕೆ ಹಾಗೂ ವಾಶೇಬಲ್ ಪೈಂಟ್ ಆಗಿದ್ದು, ಪರಿಸರ ಸ್ನೇಹಿ ಹಾಗೂ ಮನುಷ್ಯ ಸ್ನೇಹಿಯಾಗಿದೆ- ಕೆ.ಎಸ್ ಗುಣಪಾಲ ಆಳ್ವ, ಸೀನಿಯರ್ ರಿಟೈಲ್ ಆಪೀಸರ್, ನಿಪ್ಪೋನ್ ಪೈಂಟ್ (ಇಂಡಿಯಾ) ಪ್ರೈ.ಲಿ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.