Home_Page_Advt
Home_Page_Advt
Home_Page_Advt
Breaking News

ನಿವೃತ್ತ ಯೋಧ ತಾರಿಪ್ಪಾಡಿಗುತ್ತು ಸದಾನಂದ ಶೆಟ್ಟಿ ನಿಧನ

ಪುತ್ತೂರು: ಭಾರತ – ಪಾಕ್ ಯುದ್ಧ ಕಾಲದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧ ಮುಂಡ್ಕೂರು ಹೊಸಮನೆ ಸದಾನಂದ ಶೆಟ್ಟಿ ತಾರಿಪ್ಪಾಡಿಗುತ್ತು (79ವ) ರವರು ಸೆ. 16 ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನರಾದರು.

ತಾರಿಪ್ಪಾಡಿಗುತ್ತು ಕಮಲಾ ಶೆಟ್ಟಿ ಹಾಗು ವಕೀಲರಾಗಿದ್ದ ಮುಂಡ್ಕೂರು ಹೊಸಮನೆ ವೆಂಕಣ್ಣ ಶೆಟ್ಟಿ ಯವರ ಪುತ್ರರಾದ ಇವರು ತಮ್ಮ ಮೆಟ್ರಿಕ್ ವಿದ್ಯಾಭ್ಯಾಸದ ಬಳಿಕ ಸೇನೆಗೆ ಸೇರಿದ್ದರು. ಭಾರತ ಪಾಕ್ ಯುದ್ಧ ಕಾಲದಲ್ಲಿ ಗಡಿ ರಕ್ಷಣಾ ಪಡೆಯ ಯೋಧನಾಗಿ, ಬಾಂಗ್ಲಾ ಗಡಿ ರಕ್ಷಣೆಯ ಸಂದರ್ಭದಲ್ಲೂ ಯುದ್ಧ ಸೈನಿಕನಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ವಾಯು ಸೇನೆಯ ಕೋಸ್ಟಲ್ ರೆಜಿಮೆಂಟಿಗೆ ವರ್ಗಾವಣೆಗೊಂಡು ಕನ್ಯಾಕುಮಾರಿಯಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಒಟ್ಟು 17 ವರ್ಷಗಳ ಕಾಲ ಸೇನೆಯಲ್ಲಿ ಮಾತ್ರವಲ್ಲದೆ ಮುಂಬೈ ನ ಸರಕಾರಿ ಕೇಂದ್ರ ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸಿದ್ದರು.

ಬೆಟ್ಟಂಪಾಡಿಯ ನಾಕಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿದ್ದ ಮೃತರು ಪತ್ನಿ ವಾರಿಜ ಎಸ್ ಶೆಟ್ಟಿ, ಪುತ್ರರಾದ ಪ್ರಣಾಮ್ ಎಸ್ ಶೆಟ್ಟಿ, ಪರೇಶ್ ಎಸ್ ಶೆಟ್ಟಿ, ಸೊಸೆ ವಿಜಯಲಕ್ಷ್ಮಿ ಶೆಟ್ಟಿ ರವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.