ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾವು ಬುಶ್ರಾ ವಿದ್ಯಾಸಂಸ್ಥೆಗೆ 27 ಬಹುಮಾನ

Puttur_Advt_NewsUnder_1
Puttur_Advt_NewsUnder_1

 

  • ಪ್ರಾ| ಕಿರಿಯರ ವಿಭಾಗ: 4 ಪ್ರಥಮ,5 ದ್ವಿತೀಯ, 3 ತೃತೀಯ
  • ಪ್ರಾ| ಹಿರಿಯರ ವಿಭಾಗ: 3 ಪ್ರಥಮ, 5 ದ್ವೀತಿಯ, 2 ತೃತೀಯ
  • ಪ್ರೌಢ ವಿಭಾಗ: 1 ಪ್ರಥಮ, 4 ತೃತೀಯ

ಕಾವು: ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ಕಿರಿಯ ಮತ್ತು ಹಿರಿಯರ ವಿಭಾಗ ಮತ್ತು ವಲಯ ಮಟ್ಟದ ಪ್ರೌಢಶಾಲಾ ವಿಭಾಗದಲ್ಲಿ ಕಾವು ಬುಶ್ರಾ ವಿದ್ಯಾಸಂಸ್ಥೆಗೆ ವಿವಿಧ ಸ್ಪರ್ಧೆಯಲ್ಲಿ ೨೭ ಬಹುಮಾನ ಬಂದಿರುತ್ತದೆ.

ಕಿರಿಯರ ವಿಭಾಗ:
ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಕಿರಿಯರ ವಿಭಾಗದ ವಿವಿಧ ಸ್ಪರ್ಧೆಯಲ್ಲಿ ೪ ಪ್ರಥಮ, ೫ ದ್ವಿತೀಯ, 3 ತೃತೀಯ ಬಹುಮಾನ ಬಂದಿರುತ್ತದೆ. ವೈಯಕ್ತಿಕ ವಿಭಾಗದಲ್ಲಿ ತಾರುಣ್ಯ(4ನೇ)-ಸಂಸ್ಕೃತ ಕಂಠಪಾಠ(ಪ್ರ), ಸಂಸ್ಕೃತ ಧಾರ್ಮಿಕ ಪಠಣ(ತೃ), ಅನ್ವಿತ್ ರೈ ಎಂ(3ನೇ)-ಕೊಂಕಣಿ ಕಂಠಪಾಠ(ಪ್ರ), ಹುದಾಮರಿಯಂ(4ನೇ)-ಅರೆಬಿಕ್ ಧಾರ್ಮಿಕ ಪಠಣ(ಪ್ರ), ತಾರುಣ್ಯ(4ನೇ)-ಸಂಸ್ಕೃತ ಧಾರ್ಮಿಕ ಪಠಣ(ತೃ), ನಶ್ವ ಅಮೀನ(4ನೇ)-ಇಂಗ್ಲೀಷ್ ಕಂಠಪಾಠ(ದ್ವಿ), ಎ.ಆರ್ ಮುಷ್ಕಾನ(೪ನೇ)-ಉರ್ದು ಕಂಠಪಾಠ(ದ್ವಿ), ಮಿಥೇಶ್(೪)-ಮರಾಠಿ ಕಂಠಪಾಠ(ದ್ವಿ), ಅಬ್ದುಲ್ ಮಿಕ್‌ದಾದ್(4ನೇ)-ಚಿತ್ರಕಲೆ(ದ್ವಿ), ಪೂರ್ವಿ(4ನೇ)-ತಮಿಳು ಕಂಠಪಾಠ(ತೃ)ದಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ.

ಸಾಮೂಹಿಕ ವಿಭಾಗದಲ್ಲಿ ಜನಪದ ನೃತ್ಯ(ಪ್ರ)-ಫಾತಿಮತ್ ಝಾಹಿರ(4ನೇ), ನಿಹಾಲ(4ನೇ), ರಿಫ ಫಾತಿಮ(4ನೇ), ಸಫಾ ಬುಸ್ತಾನ(3ನೇ), ಫಾತಿಮ ಶೈರ(4ನೇ), ಫಾತಿಮತ್ ರಿಫ(3ನೇ), ಕೋಲಾಟ(ದ್ವಿ)-ನಶ್ವ ಅಮೀನ(4ನೇ), ಪೂರ್ವಿ(4ನೇ), ಸಾನ್ವಿ ಎ.ಪಿ(4ನೇ), ನಿಖಿತಾ(2ನೇ), ಆತ್ಮಿಕಾ ಕೆ.ಎಂ(2ನೇ), ಇಝಾ ಮರಿಯಂ(4ನೇ)ರವರು ಪ್ರಶಸ್ತಿ ಗಳಿಸಿರುತ್ತಾರೆ.

ಹಿರಿಯರ ವಿಭಾಗ:
ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಹಿರಿಯರ ವಿಭಾಗದ ವಿವಿಧ ಸ್ಪರ್ಧೆಯಲ್ಲಿ ೩ ಪ್ರಥಮ, 5 ದ್ವಿತೀಯ, 2 ತೃತೀಯ ಬಹುಮಾನ ಬಂದಿರುತ್ತದೆ. ವೈಯುಕ್ತಿಕ ವಿಭಾಗದಲ್ಲಿ ಅಪೂರ್ವ(6ನೇ)-ಕೊಂಕಣಿ ಕಂಠಪಾಠ(ಪ್ರ), ಫಾತಿಮತ್ ಆಶೀಫಾ(7ನೇ)-ಹಿಂದಿ ಕಂಠಪಾಠ(ಪ್ರ), ಭಕ್ತಿಶ್ರೀ ಬಿ.ಎಲ್(6ನೇ)-ಸಂಸ್ಕೃತ ಕಂಠಪಾಠ(ದ್ವಿ), ಸಮೀಕ್ಷ ಕೆ(5ನೇ)-ಅಭಿನಯ ಗೀತೆ(ತೃ), ಸಮೀಕ್ಷಾ ರೈ(7ನೇ)-ತುಳು ಕಂಠಪಾಠ(ತೃ), ಅನುಷ್ ಪಿ.ಡಿ(7ನೇ)-ಕ್ಲೇಮಾಡೆಲಿಂಗ್(ದ್ವಿ), ಉನೈಸಾಬಾನು(7ನೇ)-ಚಿತ್ರಕಲೆ(ದ್ವಿ), ಅನನ್ಯ ಎಂ.(6ನೇ)-ಸಂಸ್ಕೃತ ಧಾರ್ಮಿಕ ಪಠಣ(ದ್ವಿ)ದಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ.

ಸಾಮೂಹಿಕ ವಿಭಾಗದಲ್ಲಿ ಜನಪದ ನೃತ್ಯ(ಪ್ರ)-ಜಶ್ಮಿ ಎಂ(5ನೇ), ಅಶ್ವಿತ ಕೆ.ಎಂ(6ನೇ), ಹೃತಿಕ ಬಿ.ಕೆ(6ನೇ), ಸಮೃದ್ಧಿ ಬಿ.ಪಿ(5ನೇ), ನೀಪಾ(5ನೇ), ಪ್ರತೀಕ್ಷಾ ಎಂ.ಪಿ(6ನೇ), ಕೋಲಾಟ(ದ್ವಿ)-ಸ್ಪಂದನ(7ನೇ), ಭಕ್ತಿಶ್ರೀ ಬಿ.ಎಲ್(6ನೇ), ಸಮೀಕ್ಷಾ ರೈ(7ನೇ), ಸಮೀಕ್ಷ ಕೆ(5ನೇ), ಶಾರ್ವರಿ ಆರ್.ಎಸ್(6ನೇ), ಆಪ್ತ ಕೆ.ಜಿ(7ನೇ)ರವರು ಬಹುಮಾನ ಗಳಿಸಿರುತ್ತಾರೆ.

ಪ್ರೌಢಶಾಲಾ ವಿಭಾಗ:
ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧೆಯಲ್ಲಿ 1 ಪ್ರಥಮ, 4 ತೃತೀಯ ಬಹುಮಾನ ಬಂದಿರುತ್ತದೆ. ವೈಯುಕ್ತಿಕ ವಿಭಾಗದಲ್ಲಿ ಆತೀಫಾ(೧೦ನೇ)-ಅರೆಬಿಕ್ ಧಾರ್ಮಿಕ ಪಠಣ(ಪ್ರ), ಅಝೀಮ(೧೦ನೇ)-ಇಂಗ್ಲೀಷ್ ಭಾಷಣ(ತೃ), ಮಹಮ್ಮದ್ ಅಫ್‌ನಾನ್(೧೦ನೇ)-ಉರ್ದು ಭಾಷಣ(ತೃ), ಅನುಶ್ರೀ ಐ.ಕೆ(೮ನೇ)-ಭರತನಾಟ್ಯ(ತೃ), ದಿಶಾ ಬಿ.ಎನ್(೧೦ನೇ)-ಜಾನಪದ ಗೀತೆ(ತೃ)ರವರು ಬಹುಮಾನ ಗಳಿಸಿರುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಮುಖ್ಯಗುರು ವಿಮಲಾ ಶೆಟ್ಟಿಯವರ ನಿರ್ದೇಶನದಂತೆ ಶಿಕ್ಷಕರಾದ ಹೇಮಲತಾ ಕಜೆಗದ್ದೆ, ಚೈತನ್ಯಾ, ಸಹನಾ, ದೀಪಿಕಾ ಚಾಕೋಟೆ, ಚೇತನಾ, ಕೀರ್ತನಾರವರು ತರಬೇತಿ ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.