Home_Page_Advt
Home_Page_Advt
Home_Page_Advt
Breaking News

ವಿಟ್ಲ: ರಸ್ತೆ ಬ್ಲಾಕ್ ಗೆ ಕಾರಣವಾದ ವಾಹನ ಚಾಲಕರ ವಿರುದ್ಧ ಕೇಸು

ಪುತ್ತೂರು: ಜನಿಕರಿಗೆ ತೊಂದರೆ ಉಂಟು ಮಾಡಿರುವ ಆರೋಪದ ಮೇರೆಗೆ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡಿರುವ ವಿಟ್ಲ ಠಾಣಾ ಪೊಲೀಸರು ಚಾಲಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಸೆ.12 ರಂದು ವಿಟ್ಲ ಪೇಟೆಯ ಮೇಗಿನ ಪೇಟೆಯಲ್ಲಿ ನಡೆದಿದೆ.

ಕಾರು ಚಾಲಕರಾದ ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಸಲೀಂ ಹಾಗೂ ವೀರಕಂಭ ಗ್ರಾಮದ ಕೆಲಿಂಜ ನಿವಾಸಿ ರಘುನಾಥ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.೧೨ರಂದು ಸಾಯಂಕಾಲದ ವೇಳೆ ವಿಟ್ಲ ಪೇಟೆಯ ಮೇಗಿನ ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ೨ ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಸ್ಥಳದಲ್ಲಿ ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಸಂಚಾರ ಅಸ್ತವ್ಯಸ್ಥ ಉಂಟಾಗಿದ್ದಲ್ಲದೆ, ಈ ಬಗ್ಗೆ ಸಾರ್ವಜನಿಕರು ಪೊಲೀಸ್ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ವಿಟ್ಲ ಎಸೈ ಯಲ್ಲಪ್ಪರವರ ನೇತೃತ್ವದ ಪೊಲೀಸರ ತಂಡ ರಸ್ತೆ ಸಂಚಾರಕ್ಕೆ ತೊಂದರೆಯುಂಟು ಮಾಡಿದ ೨ ಕಾರುಗಳನ್ನು ಟೋಯಿಂಗ್ ವಾಹನ ಮೂಲಕ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ಬಿಡಿಸಲು ಠಾಣೆಗೆ ಬಂದ ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಟ್ಲ ಮುಖ್ಯ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಇದೇ ರೀತಿ ಕ್ರಮ ಜರುಗಿಸಲಾಗುವುದು ಎಂದು ವಿಟ್ಲ ಎಸೈ ತಿಳಿಸಿದ್ದಾರೆ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.